ಥೋಡಿ ಮಾಡರ್ನ್... ಪೂರ್ಣ ಮರಾಠಿ...ಪೈಥಾನಿ ಸೀರೆಯುಟ್ಟು ಮೃಣಾಲ್ ಮಿಂಚಿಂಗ್!Mrunal Thakur

ಚಿತ್ರ Instagram
ಚಿತ್ರ Instagram
Published on
Mrunal Thakur: ಮೃಣಾಲ್ ಠಾಕೂರ್ ಒಬ್ಬ ಭಾರತೀಯ ನಟಿಯಾಗಿದ್ದು, ಅವರು ಹಿಂದಿ ಮತ್ತು ತೆಲಗು ಸಿನಿಮಾ ರಂಗದಲ್ಲಿ ತಮ್ಮ ನಟನೆಯ ಮೂಲಕ ಹೆಸರುವಾಸಿಯಾಗಿದ್ದಾರೆ. ಇವರು ಸೀತಾ ರಾಮಮ್ ಮತ್ತು ಹಾಯ್ ನನ್ನಾ ಸೇರಿದಂತೆ ಅನೇಕ ಚಿತ್ರದಲ್ಲಿ ನಟಿಸಿ ಬ್ಲಾಕ್​ಬಸ್ಟರ್​ಗಳನ್ನು ಪಡೆದಿದ್ದಾರೆ. ಕಲಾವಿದೆಯಾಗುವುದರ ಜೊತೆಗೆ ಇವರು ಫಿಟ್​ನೆಸ್​ ಹಾಗೂ ಫ್ಯಾಷನ್​ಗೆ ಐಕಾನ್ ಕೂಡ ಆಗಿದ್ದಾರೆ.
ಇತ್ತೀಚೆಗೆ ಮೃಣಾಲ್​ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಸಾಂಪ್ರದಾಯಿಕ ಮರಾಠಿ ಉಡುಗೆಯನ್ನು ತೊಟ್ಟು ಕೆಲವೊಂದು ಪೋಸ್ಟ್​ಗಳನ್ನು ಹಂಚಿಕೊಂಡಿದ್ದರು. ಇದು ಅವರ ಬೆರಗನ್ನು ಇನ್ನಷ್ಟು ಹೆಚ್ಚಿಸುವುದರ ಜೊತೆಗೆ ಸೌಂದರ್ಯವು ತೋರ್ಪಡಿಸುತ್ತಿತ್ತು.

ಮಹಾರಾಷ್ಟ್ರದ ಸೀರೆಯಲ್ಲಿ ಮೃಣಾಲ್ ಠಾಕೂರ್

ಮೃಣಾಲ್ ಠಾಕೂರ್ ಇತ್ತೀಚೆಗೆ ಮಹಾರಾಷ್ಟ್ರದ ಪೈಥಾನಿ ಸೀರೆಯನ್ನು ಧರಿಸಿದ್ದರು. ಈ ಸೀರೆಯು ಕೈಯಿಂದಲೇ ನೇಯ್ದ ರೋಮಾಂಚಕ ನವಿಲು ವಿನ್ಯಾಸಗಳನ್ನು ಹೊಂದಿತ್ತು. ಹಾಗೆಯೇ ಅದಕ್ಕೆ ಸೂಕ್ತವಾಗುವಂತೆ ಕೆಂಪು ಬಣ್ಣದ ಬ್ಲೌಸ್​ನ್ನು ಧರಿಸಿ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸ್ವಲ್ಪ ಮಾರ್ಡ್​ನ್​... ಪೂರ್ಣ ಮರಾಠಿ ಎಂದು ಶೀರ್ಷಿಕೆಯನ್ನು ಬರೆದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು.
ಸೀತಾ ರಾಮಮ್​ ನಟಿ ಉಡುಪಿಗೆ ತಕ್ಕಂತೆ ಮೃದುವಾದ ಮೇಕಪ್​ನ್ನು ಹೊಂದಿದ್ದರು. ಇದು ಅವರ ಕೆನ್ನೆಗಳು ಹೊಳೆಯುವಂತೆ ಹೈಲೈಟರ್ ಹಚ್ಚಿದ್ದರು. ತುಟಿಗೆ ಗುಲಾಬಿ ಬಣ್ಣದ ಲಿಪ್​ಸ್ಟಿಕ್​ನ್ನು ಹಚ್ಚಿಕೊಂಡಿದ್ದರು. ಕೂದಲು ಬಿಳಿ ಹೂವುಗಳಿಂದ ಅಲಂಕರಿಸಲ್ಪಟ್ಟಿತ್ತು. ಇನ್ನು ಅವರ ಪೂರ್ಣ ಲುಕ್​ ಕೆಂಪು ಮಹಾರಾಷ್ಟ್ರದ ಅರ್ಧಚಂದ್ರನ ಆಕಾರದಲ್ಲಿರುವ ಬಿಂದಿ ಇದು ಅವರ ಸೌಂದರ್ಯವನ್ನು ಮತ್ತಷ್ಟು ಬೆರಗುಗೊಳಿಸುವಂತೆ ಇತ್ತು.
ಅವರ ಉಡುಪುಗಳಿಗೆ ಆಕರ್ಷಕ ಮತ್ತು ಹೊಳಪನ್ನು ನೀಡುವ ಅಂಶವೆಂದರೆ ಅವರ ಚಿನ್ನದ ಆಭರಣಗಳು. ಮುತ್ತಿನ ಚೋಕರ್​ನಿಂದ ಹಿಡಿದು ಭಾರವಾದ ಬಳೆಗಳು, ಕಿವಿಗೆ ಓಲೆಗಳು, ಮೂಗು ಬೊಟ್ಟು ಧರಿಸಿದ್ದರು, ಆಕೆಯ ನೋಟವು ಸಾಂಪ್ರದಾಯಿಕ ಕೂಟದಲ್ಲಿ ಮದು ಮಗಳು ಕಾಣುವಂತೆ ಕಂಗೊಳಿಸುತ್ತಿದ್ದರು.

ಪೈಥಾನಿ ಸೀರೆಯ ಬಗ್ಗೆ

ಚಿನ್ನದ ಜರಿಯಿಂದ ನೇಯ್ದಂತಹ ಕೆಲಸ ಮತ್ತು ಅಲಂಕೃತ ಅಂಚುಗಳಿಂದ ಗುರುತಿಸಲ್ಪಟ್ಟ ಪೈಥಾನಿ ಸೀರೆಗಳು ಮಹಾರಾಷ್ಟ್ರದ ಜವಳಿ ಇತಿಹಾಸವನ್ನು ಹೊಂದಿವೆ. ಇವುಗಳನ್ನು ಮೊದಲು ಸಂಭಾಜಿನಗರ ಜಿಲ್ಲೆಯ ಪೈಥಾನ್‌ನಲ್ಲಿ ಕರಕುಶಲವಾಗಿ ತಯಾರಿಸಲಾಗುತ್ತಿತ್ತು. ಆದ್ದರಿಂದ ಅವುಗಳನ್ನು ಪೈಥಾನಿ ಸೀರೆ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಇಂದು ನಾಸಿಕ್ ಪೈಥಾನಿ ಸೀರೆಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ.
ಪೈಥಾನಿ ಸೀರೆಗಳು ಕೇವಲ ಬಟ್ಟೆಗಳಲ್ಲ, ಅವು 2000 ವರ್ಷಗಳಷ್ಟು ಹಳೆಯದಾದ ಪರಂಪರೆಯನ್ನು ಹೊಂದಿವೆ. ಒಂದು ಕಾಲದಲ್ಲಿ ರಾಜ ಮನೆತನದವರು ಮಾತ್ರ ಈ ಸೀರೆಯನ್ನು ಧರಿಸುತ್ತಿದ್ದರು. ಇಂದು, ಈ ಸೀರೆಗಳು ಮಹಾರಾಷ್ಟ್ರದ ವಧುವಿನ ಟ್ರೌಸಿಯ ನಿರ್ಣಾಯಕ ಭಾಗವಾಗಿದೆ.
ಯಂತ್ರ-ಹೊಲಿಗೆ ಮಾಡಿದ ಪೈಥಾನಿಯ ಬೆಲೆ 3,000 ರೂ.ಗಳಿಂದ ಪ್ರಾರಂಭವಾಗುತ್ತದೆ. ಆದರೆ ಕೈಮಗ್ಗದ ಅರೆ-ಝರಿ ಡ್ರೇಪ್ ರೂ. 8,000 ರಿಂದ 15,000 ರೂ.ಗಳವರೆಗೆ, ಸಾಂಪ್ರದಾಯಿಕ ಕೈಯಿಂದ ನೇಯ್ದ ಸೀರೆಯ ಬೆಲೆ 20 ಸಾವಿರಗಳಿಂದ 50 ಸಾವಿರಗಳವರೆಗೆ ಇವೆ. ಹಾಗೆಯೇ ವಧುವಿನ ಪೈಥಾನಿಯ ಬೆಲೆ 60 ಸಾವಿರದಿಂದ 2 ಲಕ್ಷದವರೆಗೂ ಇದೆ ಎಂದು ಹೇಳಲಾಗುತ್ತದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net