‘ಅಂಗದ್’ ದತ್ತು ಪಡೆದ ರಾಷಾ : ಗಾಯಗೊಂಡಿದ್ದ ಕೋತಿಗೆ ಪುನರ್ವಸತಿ ಕಲ್ಪಿಸಲು ಮುಂದಾದ ನಟಿ

ರಾಷಾ ತದಾನಿ
ರಾಷಾ ತದಾನಿ
Published on

ಪ್ರಮುಖ ಮುಖ್ಯಾಂಶಗಳು

  • ಗಾಯಗೊಂಡ ಕೋತಿಗೆ ಪುನರ್ವಸತಿ ಕಲ್ಪಿಸಿದ ನಟಿ
  • ಕೋತಿಯ ಜೀವನ ವೆಚ್ಚ ಭರಿಸಲು ನಟಿಯ ನಿರ್ಧಾರ
  • ನಟಿಗೆ ಕಾಳಜಿಗೆ ಪ್ರೇಕ್ಷಕರಿಂದ ಮೆಚ್ಚುಗೆ
ಬಾಲಿವುಡ್ ನಟಿ ರವೀನಾ ಟಂಡನ್ ಪುತ್ರಿ, ನಟಿ ರಾಷಾ ತದಾನಿ ದೈವ ಭಕ್ತೆ ಜತೆಗೆ ಪ್ರಾಣಿ ಪ್ರಿಯೆ ಕೂಡ. ಈಗಾಗಲೇ 12 ಜ್ಯೋತಿರ್ಲಿಂಗಗಳ ದರ್ಶನ ಪಡೆದು ಭಕ್ತಿ ಮೆರೆದಿರುವ ರಾಷಾಗೆ ಪ್ರಾಣಿಗಳ ಮೇಲೂ ವಿಶೇಷ ಪ್ರೀತಿ. ಅದರಲ್ಲೂ ಬೀದಿ ಪಾಲಾಗಿ, ಅನಾಥವಾಗಿರುವ ಪ್ರಾಣಿಗಳನ್ನು ಸಾಕುವುದು ಅವರ ವಿಶೇಷ ಗುಣ. ಈಗಾಗಲೇ ರಾಷಾ ಬೀದಿಯಲ್ಲಿ ಅನಾಥವಾಗಿದ್ದ ಎಲ್ಸಾ, ಆಜಾದ್ ಎಂಬ ಎರಡು ನಾಯಿಗಳ ಜತೆಗೆ ಬಿಲ್ಲು ಎಂಬ ಬೆಕ್ಕನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಇದೀಗ ಮತ್ತೊಂದು ‘ಅಂಗದ್’ ಎಂಬ ಕೋತಿಯನ್ನು ದತ್ತು ಪಡೆದು ಕಾಳಜಿ ಮೆರೆದಿದ್ದಾರೆ. ಕೆಲ ದಿನಗಳ ಹಿಂದೆ ‘ಅಂಗದ್’ ಎಂಬ ಕೋತಿಯು ತಾಯಿಯಿಂದ ದೂರವಾಗಿ, ಪ್ರಾಣಿಗಳಿಂದ ದಾಳಿಗೀಡಾಗಿ ಗಾಯಗೊಂಡಿದೆ. ದಿಕ್ಕೆಟ್ಟು ಅನಾಥವಾಗಿದ್ದ ಅಂಗದ್‌ನನ್ನು ಪ್ರಾಣಿ ಪ್ರಿಯರು ರಕ್ಷಿಸಿ, ಚಿಕಿತ್ಸೆ ನೀಡಿದ್ದು, ದತ್ತು ಪಡೆಯುವ ಮೂಲಕ ಅದರ ರಕ್ಷಣೆಗೆ ಮುಂದಾಗುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ. ಈ ವಿಷಯ ರಾಷಾಗೆ ಗೊತ್ತಾಗಿ, ಅವರು ‘ಅಂಗದ್’ನನ್ನು ದತ್ತು ಪಡೆದು ಸಾಕಲು ಮುಂದಾಗಿದ್ದಾರೆ. ಸದ್ಯ ಆ ಕೋತಿಯು ಪುನರ್ವಸತಿ ಕೇಂದ್ರದಲ್ಲಿದ್ದು, ಚಿಕಿತ್ಸೆ ಪಡೆದು ಗುಣಮುಖವಾಗುತ್ತಿದೆ. ಅಂಗದ್‌ನ ಸಂಪೂರ್ಣ ಚಿಕಿತ್ಸೆ ಮತ್ತು ಪುನರ್ವಸತಿಗೆ ತಗುಲುವ ಎಲ್ಲ ವೆಚ್ಚವನ್ನು ರಾಷಾ ಭರಿಸಲಿದ್ದಾರೆ. ಜತೆಗೆ ಅನಾಥ ಪ್ರಾಣಿಗಳ ರಕ್ಷಣೆ ಮಾಡುವಂತೆ ನಟಿ ಮನವಿ ಮಾಡಿದ್ದಾರೆ. ಅಂದಹಾಗೆ ರಾಷಾ ಸದ್ಯ ತೆಲುಗಿನ ‘ಶ್ರೀನಿವಾಸ ಮಂಗಾಪುರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net