ಪ್ರೀತಿಯ ನೌಕೆಯಲ್ಲಿ ಶಾಹಿದ್-ಮೀರಾ ಪಯಣ; ಬಾಳ ಸಂಗಾತಿಯೊಂದಿಗೆ ಹೊಸ ವರ್ಷ ಬರಮಾಡಿಕೊಂಡ ಸ್ಟಾರ್ ಪತ್ನಿ! Mira Rajput

ಚಿತ್ರ Instagram
ಚಿತ್ರ Instagram
Published on
ಮುಂಬೈ: ಬಾಲಿವುಡ್​ನ ಕ್ಯೂಟ್​ ಕಪಲ್​ ಎಂದೇ ಪ್ರಸಿದ್ದೀ ಪಡೆದ ಶಾಹಿದ್ ಕಪೂರ್ ಮತ್ತು (Mira Rajput) ಮೀರಾ ರಜಪೂತ್ ಜೋಡಿ, ಹೊಸ ವರ್ಷವನ್ನು (2026) ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಆದಾಗ್ಯೂ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮೀರಾ ಪತಿ ಶಾಹಿದ್​ನೊಂದಿಗೆ ವಿಹಾರ ನೌಕೆಯಲ್ಲಿ ಕ್ಲಿಕ್ಕಿಸಿಕೊಂಡ ಸುಂದರ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.

ಮೀರಾ ರಜಪೂತ್ ಪೋಸ್ಟ್​ನಲ್ಲೇನಿದೆ?

ಮೀರಾ ಶಾಹಿದ್​ ಅವರನ್ನು ಆತ್ಮೀಯವಾಗಿ ಹಿಡಿದುಕೊಂಡು ಮುಗುಳ್ನಗುತ್ತಿರುವ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ಸುಂದರ ಕ್ಷಣಗಳ ಬಗ್ಗೆ ಮನ ಮಿಡಿಯುವ ಟಿಪ್ಪಣಿಯೊಂದನ್ನು ಬರೆದಿದ್ದಾರೆ. ಹೊಸ ವರ್ಷ, ಹೊಸ ಆರಂಭ ಮತ್ತು ಅದೇ ಹಳೆಯ ಸುಂದರ ಪ್ರೀತಿ. ಕೃತಜ್ಞತೆಯಿಂದ ಈ ವರ್ಷವನ್ನು ಸ್ವಾಗತಿಸುತ್ತಿದ್ದೇವೆ ಎಂದು ಬರೆದು ಪೋಸ್ಟ್ ಮಾಡಿದ್ದರು.
ನನ್ನ ಕನಸುಗಳಿಗೆ ಜೀವ ತುಂಬಿದ, ನನ್ನನ್ನು ನಾನು ಪುನಃ ಕಂಡುಕೊಳ್ಳುವಂತೆ ಮಾಡಿದ, ಎಲ್ಲದರ ಬಗ್ಗೆಯೂ ಧೈರ್ಯದಿಂದ ಮುನ್ನುಗ್ಗುವಂತೆ ಮಾಡಿದ ಈ ವರ್ಷಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇದು ಪರಿಪೂರ್ಣತೆಯ ಬಗ್ಗೆ ಅಲ್ಲ, ಬದಲಿಗೆ ದೃಷ್ಟಿಕೋನದ ಬಗ್ಗೆ ಆಗಿದೆ ಎಂದು ಹೇಳಿದರು. ಮುಂಬರುವ ದಿನಗಳ ಎದುರುನೋಟವನ್ನು ಯಾವಾಗಲೂ ನಗುವಿನ ಮೂಲಕ ಬರಮಾಡಿಕೊಳ್ಳಿ ಎಲ್ಲರಿಗೂ ಶುಭವಾಗಲಿ ಎಂದರು.

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಬಗ್ಗೆ

ಬಾಲಿವುಡ್​ ನಟ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರೊಂದಿಗೆ 2015 ರಲ್ಲಿ ಗುರ್ಗಾಂವ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಈ ದಂಪತಿಗೆ ಮಿಶಾ ಮತ್ತು ಮಗ ಜೈನ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಶಾಹಿದ್ ಕಪೂರ್ ಪ್ರಸ್ತುತ ವಿಶಾಲ್ ಭಾರದ್ವಾಜ್ ನಿರ್ದೇಶನದ ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವು 1990 ರ ದಶಕದಲ್ಲಿ ಮುಂಬೈನಲ್ಲಿ ನಡೆದ ಸ್ವಾತಂತ್ರ್ಯಾನಂತರದ ನಗರದ ಭೂಗತ ಲೋಕದ ಬಗ್ಗೆ ಸುತ್ತುತ್ತದೆ. ಇದರಲ್ಲಿ ತ್ರಿಪ್ತಿ ದಿಮ್ರಿ, ನಾನಾ ಪಾಟೇಕರ್ ಮತ್ತು ರಣದೀಪ್ ಹೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net