ಬಣ್ಣಗಳ ಹಬ್ಬದಲ್ಲಿ ಬೆವರಿಳಿಸಿದ 'ಐರನ್ ಮ್ಯಾನ್': ಮಿಲಿಂದ್ ಸೋಮನ್ ಪರಾಕ್ರಮಕ್ಕೆ ನಟಿ ಶೆನಾಜ್ ಟ್ರೆಷರಿ ಫಿದಾ! Milind Soman

ಚಿತ್ರ Instagram
ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಮಿಲಿಂದ್ ಸೋಮನ್ ಎಂದರೆ ಕೇವಲ ಒಬ್ಬ ನಟ ಅಥವಾ ಮಾಡೆಲ್ ಅಲ್ಲ, ಅವರು ಭಾರತದ ಪಾಲಿಗೆ ಫಿಟ್‌ನೆಸ್ ಐಕಾನ್
  • 60ರ ಹರೆಯದಲ್ಲೂ ಯುವಕರಿಗೂ ನಾಚಿಕೆ ತರುವಂತಹ ಮೈಕಟ್ಟು ಮತ್ತು ಉತ್ಸಾಹ ಹೊಂದಿದ್ದಾರೆ
  • ಮಿಲಿಂದ್, ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ
Milind Soman: ಮಿಲಿಂದ್ ಸೋಮನ್ ಎಂದರೆ ಕೇವಲ ಒಬ್ಬ ನಟ ಅಥವಾ ಮಾಡೆಲ್ ಅಲ್ಲ, ಅವರು ಭಾರತದ ಪಾಲಿಗೆ "ಫಿಟ್‌ನೆಸ್ ಐಕಾನ್". 60ರ ಹರೆಯದಲ್ಲೂ ಯುವಕರಿಗೂ ನಾಚಿಕೆ ತರುವಂತಹ ಮೈಕಟ್ಟು ಮತ್ತು ಉತ್ಸಾಹ ಹೊಂದಿರುವ ಮಿಲಿಂದ್, ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ.
ಸಾಮಾನ್ಯವಾಗಿ ಹೋಳಿ ಹಬ್ಬದಂದು ಇಡೀ ದೇಶವೇ ಬಣ್ಣಗಳಿಂದ ಆಡುವುದು, ಸಿಹಿ-ತಿಂಡಿ ಹಂಚಿಕೊಳ್ಳುವುದರೊಂದಿಗೆ ಆಚರಿಸುತ್ತಾರೆ. ಆದರೆ, ಮಿಲಿಂದ್ ಸೋಮನ್ ಫಿಟ್ನೆಸ್ ಸಾಧನೆ ಮಾಡಲು ನಿರ್ಧರಿಸಿದ್ದು, ಗೋವಾದ ನದಿಯಲ್ಲಿ ಸುಮಾರು 15 ಕಿ.ಮೀ ಈಜುವ ಮೂಲಕ ತಮ್ಮ ಸಾಧನೆಯನ್ನು ಪೂರ್ಣಗೊಳಿಸಿದ್ದಾರೆ.
ಗೋವಾದಲ್ಲಿ 15 ಕಿ.ಮೀ ಈಜುವ ಮೂಲಕ ಹೋಳಿ ಆಚರಿಸಿದ ಮಿಲಿಂದ್ ಸೋಮನ್!
ಮಿಲಿಂದ್ ಸೋಮನ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ನಿನ್ನೆ ಗೋವಾದಲ್ಲಿ ಸುಮಾರು 15 ಕಿಮೀ ಈಜಿದ್ದೇನೆ. ಅದರಲ್ಲಿ 4.5 ಕಿಮೀ ನನ್ನ ಪತ್ನಿ ಅಂಕಿತಾ ಕೊನ್ವಾರ್‌ಗಾಗಿ ಮೀಸಲಿಟ್ಟಿದ್ದೆ. ಅಲ್ಲದೆ, ಈ ಸಾಹಸಕ್ಕೆ ಬೆನ್ನೆಲುಬಾಗಿ ನಿಂತ ಗೋವಾ ಓಪನ್ ವಾಟರ್ ಈಜು ಕ್ಲಬ್‌ಗೆ ವಿಶೇಷ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಆದಾಗ್ಯೂ, ಹಬ್ಬದ ದಿನ ಆದಷ್ಟು ಜನರು ಫಿಟ್​ನೆಸ್​ಗೆ ರಜೆ ಹಾಕಿ ಹಬ್ಬವನ್ನು ಆಚರಿಸಲು ಇಷ್ಟಪಡುತ್ತಾರೆ. ಆದರೆ, ಮಿಲಿಂದ್ ಸೋಮನ್ ಅವರ ಪಾಲಿಗೆ ಹಬ್ಬವೆಂದರೆ ತಮ್ಮ ಮಿತಿಗಳನ್ನು ಮೀರುವ ಮತ್ತೊಂದು ಅವಕಾಶ ಇದ್ದಂತೆ. ಇಡೀ ದೇಶ ದೇಶವೇ ಸಿಹಿ ಹಂಚಿ ಸಂಭ್ರಮಿಸುತ್ತಿದ್ದರೆ, ಇವರು ನದಿಯಲ್ಲಿ ಈಜಿ ಸಾಹಸ ಮೆರೆದಿದ್ದಾರೆ.
ಈ ವೇಳೆ ಅದೇ ಕ್ಯಾರೋಸೆಲ್‌ನಲ್ಲಿ, ತಮ್ಮ ಮುಖಕ್ಕೆ ಬಣ್ಣ ಹಂಚಿಕೊಂಡು ಪತ್ನಿ ಅಂಕಿತಾ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ 

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ, "ಓಹ್, ಇದು ತುಂಬಾ ತಂಪಾಗಿದೆ. ನಾನು ಕೂಡ ಇದನ್ನು ಮಾಡಲು ಬಯಸುತ್ತೇನೆ. ಎಲ್ಲಿ? ಹೇಗೆ? ನಾನು ಈಗಷ್ಟೇ ಗೋವಾದಲ್ಲಿ ಬಂದಿಳಿದಿದ್ದೇನೆ ಎಂದು ನಟಿ ಶೆನಾಜ್ ಟ್ರೆಷರಿ ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಒಂದು ದಿನ ತೆರೆದ ಸಾಗರದಲ್ಲಿ ಈಜುವುದು ನನ್ನ ಕನಸು. ನೀವು ಅಂತಹ ಸ್ಫೂರ್ತಿ ಎಂದು ಬರೆದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net