ಬಾಲಿವುಡ್‌ಗೆ ಲೋಕಾ ಕಲ್ಯಾಣಿ: ‘ಪ್ರಳಯ್’ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಲಯಾಳಂ ನಟಿ

ಕಲ್ಯಾಣಿ ಪ್ರಿಯದರ್ಶನ್​
ಕಲ್ಯಾಣಿ ಪ್ರಿಯದರ್ಶನ್​
Published on

ಪ್ರಮುಖ ಮುಖ್ಯಾಂಶಗಳು

  • ಪ್ಯಾನ್ ಇಂಡಿಯಾ ಹೀರೋಯಿನ್ ಹಿಂದಿ ಪಯಣ
  • ರಣವೀರ್ ಸಿಂಗ್ ಗೆ ಜೋಡಿಯಾದ ನಟಿ
  • ತಮಿಳಿನ ಎರಡು ಸಿನಿಮಾ ರಿಲೀಸ್ ಎದುರು ನೋಡುತ್ತಿರುವ ನಟಿ
ನಿರ್ದೇಶಕ ಪ್ರಿಯದರ್ಶನ್ ಪುತ್ರಿ, ಮಲಯಾಳಂ ನಟಿ ಕಲ್ಯಾಣಿ ಪ್ರಿಯದರ್ಶನ್ ಪ್ರಸ್ತುತ ಮಾಲಿವುಡ್ ಸೇರಿ ಕಾಲಿವುಡ್, ಟಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ತೆಲುಗಿನ ‘ಹಲೋ’ ಮೂಲಕ ಬಣ್ಣದ ಲೋಕಕ್ಕೆ ಬಂದ ಅವರು ಬಳಿಕ ಹೆಚ್ಚು ಮಿಂಚಿದ್ದು ಮಲಯಾಳಂನಲ್ಲಿ. ‘ವಾರಣೆ ಅವಶ್ಯಮುಂದು’, ‘ಹೃದಯಂ’, ‘ಆ್ಯಂಟೋನಿ’ ಸೇರಿ ಹತ್ತು ಮಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ ‘ಲೋಕಾ ಚಾಪ್ಟರ್ 1’ ಅವರಿಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿತ್ತು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಅಂದಾಜು 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿಕೊಳ್ಳುವ ಮೂಲಕ ಕಳೆದ ವರ್ಷ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಮಲಯಾಳಂ ಸಿನಿಮಾ ಎಂಬ ದಾಖಲೆ ಬರೆಯಿತು. ‘ಲೋಕಾ’ ಪ್ರಸಿದ್ಧಿಯಿಂದಾಗಿ ಕಲ್ಯಾಣಿ ‘ಪ್ಯಾನ್ ಇಂಡಿಯಾ ಹೀರೋಯಿನ್’ ಆಗಿ ಹೊರಹೊಮ್ಮಿದ್ದರು. ಇದೀಗ ನಟಿಯು ವೃತ್ತಿ ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗುತ್ತಿದ್ದು, ‘ಪ್ರಳಯ್’ ಚಿತ್ರದ ಮೂಲಕ ಬಾಲಿವುಡ್‌ಗೆ ಡೆಬ್ಯೂ ಮಾಡುತ್ತಿದ್ದಾರೆ. ‘ಧುರಂಧರ್’ ಯಶಸ್ಸಿನಲ್ಲಿರುವ ನಟ ರಣವೀರ್ ಸಿಂಗ್, ಸದ್ಯ ಜೈ ಮೆಹ್ತಾ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿದ್ದು, ಏಪ್ರಿಲ್‌ನಲ್ಲಿ ‘ಪ್ರಳಯ್’ ಸೆಟ್ಟೇರಲಿದೆ. ಇಲ್ಲಿ ರಣವೀರ್‌ಗೆ ಕಲ್ಯಾಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ. ಉಳಿದಂತೆ ಕಲ್ಯಾಣಿ ತಮಿಳಿನ ‘ಜೀನಿ’, ‘ಮಾರ್ಷಲ್’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್ 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net