ಮೆಹೆಂದಿ ಕೇವಲ ಬಣ್ಣವಲ್ಲ, ಅದು ಭಾವನೆಗಳ ಸಂಗಮ: ತಂಗಿಯ ಬಾಲ್ಯದ ನೆನಪಿಗೆ ಕೃತಿ ಸನೋನ್ ಕೊಟ್ಟ ವಿಶೇಷ ಗೌರವ! Kriti sanon

ಚಿತ್ರ Instagram
ಚಿತ್ರ Instagram
Published on
Kriti Sanon: ನಟಿ ನೂಪುರ್ ಸನೋನ್ ಮತ್ತು ಗಾಯಕ ಸ್ಟೆಬಿನ್ ಬೆನ್ ಅವರ ವಿವಾಹವು ಇತ್ತೀಚೆಗೆ ರಾಜಸ್ಥಾನದ ಉದಯ್‌ಪುರದಲ್ಲಿ ವೈಭವವಾಗಿ ನೆರವೇರಿತು. ಈ ಸಂಭ್ರಮದ ಕ್ಷಣಗಳನ್ನು ಸಹೋದರಿ, ನಟಿ ಕೃತಿ ಸನೋನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ನವ ಜೋಡಿಗೆ ಶುಭಹಾರೈಸಿದ್ದಾರೆ.
ಆದಾಗ್ಯೂ, ಮದುವೆ ಸಂಭ್ರಮದಲ್ಲಿ ಕೃತಿ ಹಾಕಿಸಿಕೊಂಡಿದ್ದ ಮೆಹೆಂದಿ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರ ಕೈಯಲ್ಲಿರುವ ಮೆಹೆಂದಿ ಸಹೋದರಿಯರ ಬಾಲ್ಯದ ಕ್ಷಣಗಳನ್ನು ಸೆರೆಹಿಡಿಯುತ್ತಿದೆ. ಇದರಲ್ಲಿ ಇಬ್ಬರು ಸಹೋದರಿಯರು ಬಾಲ್ಯದಲ್ಲಿ ಅಪ್ಪಿಕೊಂಡಿರುವ ಸುಂದರ ದೃಶ್ಯವನ್ನು ಅತಿ ನಾಜೂಕಾಗಿ ಬಿಡಿಸಲಾಗಿದೆ.
ಕೃತಿ ಅವರು ತಮ್ಮ ಮೆಹೆಂದಿ ಕಲಾವಿದರಿಗೆ ಈ ನಿರ್ದಿಷ್ಟ ವಿನ್ಯಾಸದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದರಂತೆ. ಇದು ಕೇವಲ ಒಂದು ಅಲಂಕಾರವಲ್ಲದೆ, ಸಹೋದರಿಯರ ನಡುವಿನ ಅಪಾರ ಪ್ರೀತಿಯ ಸಂಕೇತವಾಗಿತ್ತು ಎಂದು ಮೆಹೆಂದಿ ಕಲಾವಿದರು ತಿಳಿಸಿದ್ದಾರೆ. ಈ ಮೆಹೆಂದಿಯು ವಿವಾಹದ ಭಾವನಾತ್ಮಕ ಚಿತ್ರಗಳಲ್ಲಿ ಒಂದಾಗಿದೆ.
ಸೆಲೆಬ್ರಿಟಿ ಮೆಹಂದಿ ಕಲಾವಿದೆ ಸೋನಾ ನೂಪುರ್ ಸನೋನ್ ಅವರ ವಿವಾಹದ ಚಿತ್ರಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿ, ನಮ್ಮ ತಂಡವನ್ನು ಅದ್ಧೂರಿ ಕಾರ್ಯಕ್ರಮದಲ್ಲಿ ಗೋರಂಟಿ ಸೇವೆಗಳಿಗೆ ಆಹ್ವಾನಿಸಲಾಗಿದೆ ಎಂದು ಬಹಿರಂಗಪಡಿಸಿದರು. ಆದಾಗ್ಯೂ, ಎರಡು ಅದ್ಭುತ ಆತ್ಮಗಳೊಂದಿಗೆ ಕೆಲಸ ಮಾಡುವುದು ಸಂಪೂರ್ಣವಾಗಿ ಸುಂದರವಾದ ಅನುಭವ. ಅವರು ಅತ್ಯಂತ ಆಕರ್ಷಕ, ವಿನಮ್ರ ಮತ್ತು ನಿಜವಾಗಿಯೂ ಸರಳ ವ್ಯಕ್ತಿಗಳು ಎಂದು ತಮ್ಮ ಪೋಸ್ಟ್​ನಲ್ಲಿ ಸಾಲುಗಳನ್ನು ಬರೆದಿದ್ದಾರೆ.
ಕೃತಿ ಅವರಿಗೆ ಕೇವಲ ಅಂದವಾದ ವಿನ್ಯಾಸಕ್ಕಿಂತ ಹೆಚ್ಚಾಗಿ, ಅದಕ್ಕೊಂದು ಅರ್ಥವಿರಬೇಕು ಎಂಬ ಆಸೆಯನ್ನು ಹೊಂದಿದ್ದರು. ಅವರು ಕನಿಷ್ಠ, ಅರ್ಥಪೂರ್ಣ ಮತ್ತು ವೈಯಕ್ತಿಕ ಶೈಲಿಗೆ ಆದ್ಯತೆ ನೀಡಿದ್ದರು ಎಂಬುದನ್ನು ತೋರಿಸುತ್ತದೆ. ವಿಶೇಷವಾಗಿ ಹೇಳುವುದಾದರೆ, ಆ ಮೆಹೆಂದಿಯಲ್ಲಿ ಕೇವಲ ಬಣ್ಣವಿರಲಿಲ್ಲ. ಬದಲಿಗೆ ಸಹೋದರಿಯೊಂದಿಗೆ ಕಳೆದ ಬಾಲ್ಯದ ಕಥೆ ಮತ್ತು ಭಾವನೆಗಳಿದ್ದವು ಎಂದು ಅವರು ವಿವರಿಸಿದ್ದಾರೆ.
ಮದುವೆ ಸಮಾರಂಭದಲ್ಲಿ ಪರಿಪೂರ್ಣ ಆತಿಥ್ಯಕಾರಿಣಿಯಾಗಿ ಕಾಣಿಸಿಕೊಂಡ ಕೃತಿ, ನವವಿವಾಹಿತರೊಂದಿಗೆ ಕಾಣದ ಚಿತ್ರಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ​​ಹಂಚಿಕೊಂಡು ಭಾವನಾತ್ಮಕ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು.

ಪೋಸ್ಟ್​ನಲ್ಲೇನಿದೆ?

ಈ ಸಂದರ್ಭದಲ್ಲಿ ನನಗೆ ಏನು ಅನಿಸುತ್ತಿದೆ ಎಂಬುದನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ. ನನಗೆ 5 ವರ್ಷವಿದ್ದಾಗ ನಿನ್ನನ್ನು ಮೊದಲ ಬಾರಿಗೆ ಎತ್ತಿಕೊಂಡ ಕ್ಷಣದಿಂದ ಹಿಡಿದು, ಇಂದು ನಿನ್ನ ಮದುವೆಯ ಪರದೆಯನ್ನು ಹಿಡಿದು ನೀನು ಅತ್ಯಂತ ಸುಂದರ ವಧುವಾಗಿರುವುದನ್ನು ನೋಡಿದಾಗ ತುಂಬಾ ಸಂತೋಷವಾಗಿದೆ. ಆದಾಗ್ಯೂ, ನಿನ್ನ ಬಾಳ ಸಂಗಾತಿಯೊಂದಿಗೆ ಅಧ್ಯಾಯವನ್ನು ಪ್ರಾರಂಭಿಸುವುದನ್ನು ನೋಡಿ ನನ್ನ ಎದೆ ತುಂಬಿದೆ ಎಂದು ಬರೆದಿದ್ದಾರೆ.
ತನ್ನ ಭಾವ ಸ್ಟೆಬಿನ್ ಬೆನ್ ಬಗ್ಗೆ ಮಾತನಾಡುತ್ತಾ, ನೀವು 5 ವರ್ಷಗಳಿಗೂ ಹೆಚ್ಚು ಕಾಲ ನಮ್ಮ ಕುಟುಂಬದ ಸದಸ್ಯರಾಗಿದ್ದೀರಿ. ಪ್ರತಿ ವರ್ಷ ಕಳೆದಂತೆ ಭಾಂದವ್ಯ ಹೆಚ್ಚಾಗಿದೆ. ಸ್ಟೆಬು, ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನನಗೆ ಜೀವನ ಪರ್ಯಂತ ಒಬ್ಬ ಸಹೋದರ ಮತ್ತು ಸ್ನೇಹಿತ ಸಿಕ್ಕಿದ್ದಾನೆಂದು ಭಾವಿಸುತ್ತೇನೆ. ಆದಾಗ್ಯೂ, ನಿಮ್ಮ ಪ್ರತಿಜ್ಞೆಗಳ ಪ್ರಕಾರ ನೀವಿಬ್ಬರೂ ಮದುವೆಯಾಗಿರುವುದು ನನ್ನ ಜೀವನದ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿದೆ.
ನೂಪುರ್ ನೀನು ಕೇವಲ 20 ನಿಮಿಷಗಳ ದೂರದ ಮನೆಯಲ್ಲಿದ್ದರೂ ಸಹ, ಮನೆಯಲ್ಲಿ ನಿನ್ನ ನಗುವಿಲ್ಲದೆ ಮನೆ ಖಾಲಿ ಎನಿಸುತ್ತಿದೆ. ಆದರೆ ನೀನು ಈಗ ಎರಡು ಮನೆಗಳಲ್ಲಿ ಸಂತೋಷವನ್ನು ಹರಡುತ್ತೀಯ ಎಂಬ ಖುಷಿ ನನಗಿದೆ. ಹಾಗೆಯೇ ನನ್ನ ತಂಗಿಯನ್ನು ಮದುವೆ ಮಾಡಿಕೊಟ್ಟರೂ ಸಂಪೂರ್ಣವಾಗಿ ಆಕೆಯನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಸನೋನ್ ಕುಟುಂಬಕ್ಕೆ ನಿನಗೆ ಸುಸ್ವಾಗತ ಎಂದು ಸ್ಟೆಬಿನ್​ ಕಾಲೆಳಿದ್ದಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net