ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೃತಿ, ಪ್ರಮಾಣಿಕವಾಗಿ ಹೇಳಬೇಕೆಂದರೆ ನಾನು ಇದೇ ಮೊದಲ ಭಾರಿ ಸರಿಯಾಗಿ ಆಹಾರ ಮತ್ತು ವ್ಯಾಯಾಮವನ್ನು ಮಾಡಿದ್ದು. ಮೊದಲೆಲ್ಲಾ ಎರಡು ದಿನ ಮಾಡಿ ಮೂರನೇ ದಿನ ಬಿಟ್ಟ ಬಿಡುತ್ತಿದೆ. ನಾನು ಈ ಸಲ ಕ್ಯಾಲೋರಿ ಡೆಫಿಸಿಟ್ ಡಯಟ್ನ್ನು ಆರಿಸಿಕೊಂಡೆ, ನಾವು ಇಟಲಿಯಲ್ಲಿ ಶೂಟಿಂಗ್ ಮಾಡಿದಾಗ ಪೀಜಾ, ಪಾಸ್ತಾ ಎಲ್ಲವನ್ನು ತಿನ್ನುತ್ತಿದೆ, ಮತ್ತೆ ಹಾಗೆಯೇ ಬರ್ನಔಟ್ ಮಾಡುತ್ತಿದೆ ಎಂದು ಹೇಳಿದ್ದಾರೆ.