ಮತ್ತೆ ಪ್ರೀತಿಯಲ್ಲಿ ಬಿದ್ದ ನಟಿ ಕೀರ್ತಿ: ರಾಜೀವ್ ಸಿದ್ಧಾರ್ಥ್ ಜೊತೆಗಿನ ರೋಮ್ಯಾಂಟಿಕ್ ವೀಡಿಯೋ ವೈರಲ್! Kirti Kulhari

ಚಿತ್ರ Instagram
ಚಿತ್ರ Instagram
Published on
Kirti Kulhari: ಬಾಲಿವುಡ್ ನಟಿ ಕೀರ್ತಿ ಕುಲ್ಹಾರಿ ಅವರು ಹೊಸ ವರ್ಷದ ಆರಂಭದಲ್ಲೇ ಸಹನಟ ರಾಜೀವ್ ಸಿದ್ಧಾರ್ಥನೊಂದಿಗಿನ ಪ್ರೇಮ ಸಂಬಂಧದ ಬಗ್ಗೆ ಅಧೀಕೃತಗೊಳಿಸಿ ಅಭಿಮಾನಿಗಳಿಗೆ ಸಂತೋಷಗೊಳಿಸಿದ್ದಾರೆ. ಆದಾಗ್ಯೂ, ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಇಬ್ಬರು ಜೊತೆಗಿರುವ ಕೆಲವೊಂದು ಚಿತ್ರಗಳನ್ನು ಹಂಚಿಕೊಳ್ಳುವುದರ ಮೂಲಕ ಅವರ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ.
ಶುಕ್ರವಾರ, ಕೀರ್ತಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ರಾಜೀವ್​ ಸಿದ್ದಾರ್ಥ್​ನೊಂದಿಗೆ ಪೋಸ್​ ನೀಡುತ್ತಿರುವ ಕೆಲವೊಂದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕಾರ್ ಸೆಲ್ಫಿ, ಅವರ ಪ್ರಯಾಣದ ಸ್ನ್ಯಾಪ್‌ಶಾಟ್‌ನಿಂದ ಹಿಡಿದು ಲಿಫ್ಟ್‌ನೊಳಗಿನ ಆತ್ಮೀಯತೆಯ ಕ್ಷಣಗಳು  ಮತ್ತು ನಟನೊಂದಿಗೆ ಕಳೆದ ಕೆಲವೊಂದು ಅಮೂಲ್ಯ ಕ್ಷಣಗಳನ್ನು ಸೆರೆಹಿಡಿದ ಚಿತ್ರಗಳನ್ನು ಹಂಚಿಕೊಳ್ಳುವುದರ ಜೊತೆಗೆ ಒಂದು ಚಿತ್ರ ಸಾವಿರ ಪದಗಳಿಗೆ ಸಮ... ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
2025 ನವೆಂಬರ್‌ನಿಂದಲೇ ಈ ಇಬ್ಬರು ನಟರು ಪ್ರೀತಿಯಲ್ಲಿರುವುದರ ಬಗ್ಗೆ ವದಂತಿ ಹಬ್ಬಿತ್ತು. ಈ ಎಲ್ಲಾ ಊಹಾ ಪೋಹಗಳಿಗೆ ಕೀರ್ತಿ ತೆರೆ ಎಳೆದಿದ್ದಾರೆ. ಆದಾಗ್ಯೂ, ಇವರಿಬ್ಬರ ಸಂಬಂಧದ ಬಗ್ಗೆ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆಯೇ, ಅಭಿಮಾನಿಗಳು ಇವರಿಗೆ ಶುಭ ಹಾರೈಸಿದ್ದಾರೆ. ಕೀರ್ತಿ ಪೋಸ್ಟ್​ಗೆ ಒಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದು, ಅಂಜನಾ ಸಿದ್ಧಿಯ ಪತಿಯನ್ನು ಕಿತ್ತುಕೊಂಡಳು ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.

ಕೀರ್ತಿ ಕುಲ್ಹಾರಿ ಅವರ ವೈಯಕ್ತಿಕ ಜೀವನದ ಬಗ್ಗೆ

2021 ರಲ್ಲಿ, ಕೀರ್ತಿ ಕುಲ್ಹಾರಿ (ಏಪ್ರಿಲ್ 1) ರಂದು ಪತಿ ಸಾಹಿಲ್ ಸೆಹಗಲ್​ನಿಂದ ಬೇರ್ಪಡಲು ನಿರ್ದರಿಸಿದ್ದೇನೆ ಎಂದು ಘೋಷಿಸಿ, 5 ವರ್ಷಗಳ ವೈವಾಹಿಕ ಜೀವನಕ್ಕೆ ತೆರೆ ಎಳೆದರು. ಇದಾದ ಬಳಿಕ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ನನ್ನ ಪತಿ ಸಾಹಿಲ್ ಮತ್ತು ನಾನು ಬೇರ್ಪಡಲು ನಿರ್ಧರಿಸಿದ್ದೇವೆ. ಜೀವನದಲ್ಲಿ "ಯಾರೊಂದಿಗಾದರೂ ಇರುವುದು" ಎಂಬ ನಿರ್ಧಾರಕ್ಕಿಂತ ಬಹುಶಃ ಕಠಿಣವಾದ ನಿರ್ಧಾರ ಇದಾಗಿದೆ. 
ಈ ನಿರ್ಧಾರ ಸುಲಭವಲ್ಲ, ಹಾಗೆಯೇ ಊಹಿಸಲು ಸಾಧ್ಯವಾಗುತ್ತಿಲ್ಲ.  ನನ್ನ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ. ನಾನು ಒಳ್ಳೆಯ ಸ್ಥಳದಲ್ಲಿದ್ದೇನೆ. ನನ್ನ ಜೀವನದಲ್ಲಿ ಮುಖ್ಯವಾದರು ಸಹ ಇದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ವಿಚಾರದ ಬಗ್ಗೆ ಇನ್ನು ಮುಂದೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net