ಗಂಡು ಮಗುವಿನ ಜನನದ ಬಳಿಕ ಮೊದಲ ಫೋಟೋ ಹಂಚಿಕೊಂಡ ಕತ್ರಿನಾ! Katrina Kaif

ಚಿತ್ರ Instagram
ಚಿತ್ರ Instagram
Published on
Katrina Kaif: ಈ ವರ್ಷದ ಕ್ರಿಸ್‌ಮಸ್ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರಿಗೆ ತುಂಬಾ ವಿಶೇಷವಾಗಿತ್ತು. ಏಕೆಂದರೆ ತಾಯಿಯಾದ ಬಳಿಕ ಅವರ ಮೊದಲ ಹಬ್ಬ ಇದಾಗಿದ್ದು, ತಮ್ಮ ಕುಟುಂಬದೊಂದಿಗೆ ಕಳೆದ ಸಂತೋಷದಾಯಕ ಕ್ಷಣದ ನೋಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನವೆಂಬರ್ 7 ರಂದು ಕತ್ರಿನಾ ದಂಪತಿ ಮೊದಲ ಗಂಡು ಗುವನ್ನು ಸ್ವಾಗತಿಸಿದ್ದು, ತಮ್ಮ ಮಗನ ಹೆಸರನ್ನು ಬಹಿರಂಗಪಡಿಸಿಲ್ಲ ಎಂಬುದು ಗಮನಾರ್ಹವಾಗಿದೆ.
ತಾಯಿಯಾದ ನಂತರ ಕತ್ರಿನಾ ಅವರ ಮೊದಲ ಹಬ್ಬ
ಗುರುವಾರ (ಡಿ.25) ಕತ್ರಿನಾ ತನ್ನ ಮುಂಬೈ ಮನೆಯ ಸುಂದರವಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ತಮ್ಮ ಪತಿ ವಿಕ್ಕಿ ಕೌಶಲ್​, ಅವರ ಸಹೋದರ ಸನ್ನಿ ಕೌಶಲ್ ಮತ್ತು ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಇರುವುದನ್ನು ಕಾಣಬಹುದಾಗಿದೆ. ಅವರ ಹಿಂದೆ ಅಲಂಕಾರವಾದ ಕ್ರಿಸ್​ಮಸ್​ ಮರವನ್ನು ನೋಡಬಹುದು. ಕತ್ರಿನಾ ವಿಕಿಯ ಭುಜದ ಮೇಲೆ ಕೈ ಹಾಕಿ ನಿಂತಿದ್ದಾರೆ. ಅವರ ಪತಿ ತಮಾಷೆಯಾಗಿ ಪೋಸ್​ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

2025 ವಿಕಿ ಮತ್ತು ಕತ್ರಿನಾಗೆ ವಿಶೇಷವಾಗಿತ್ತಾ?

ಈ ವರ್ಷದ ನವೆಂಬರ್​ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮಗನನ್ನು ಸ್ವಾಗತಿಸಿದರು. ಈ ವೇಳೆ ಅವರು ನಮ್ಮ ಸಂತೋಷದ ಮೂಟೆ ಬಂದಿದೆ. ಅಪಾರ ಪ್ರೀತಿ ಮತ್ತು ಕೃತಜ್ಞತೆಯಿಂದ, ನಾವು ನಮ್ಮ ಮಗನನ್ನು ಸ್ವಾಗತಿಸುತ್ತಿದ್ದೇವೆ ಎಂದು ಜಂಟಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್​ಗೆ ಪ್ರಿಯಾಂಕಾ ಚೋಪ್ರಾ , ಆಯುಷ್ಮಾನ್ ಖುರಾನಾ ಮತ್ತು ಕರಣ್ ಜೋಹರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶುಭ ಹಾರೈಸಿದ್ದರು.

ಈ ಜೋಡಿ ಯಾವಾಗ ಮದುವೆಯಾಯಿತು?

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಮದುವೆ ಬಾಲಿವುಡ್‌ನ ಅತ್ಯಂತ ರೊಮ್ಯಾಂಟಿಕ್ ಮತ್ತು ಖಾಸಗಿ ಸಂಭ್ರಮಗಳಲ್ಲಿ ಒಂದಾಗಿತ್ತು. ಇವರು ಡಿಸೆಂಬರ್ 9, 2021 ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾದರು. ಇವರು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು, ಕೆಲವು ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಜಿಕ್ಯೂ ಇಂಡಿಯಾಗೆ ನೀಡಿದ ಸಂದಶ್ನವೊಂದರಲ್ಲಿ ತಂದೆಯಾಗುವ ಅನುಭವವನ್ನು ಹಂಚಿಕೊಂಡಿದ್ದ ವಿಕ್ಕಿ ಕೌಶಲ್​ ಪ್ರತಿದಿನವೂ ಹೊಸ ಭಾವನೆಗಳು ಪ್ರಾರಂಭವಾಗುತ್ತದೆ. ಅದು ಒಂದು ಆಧಾರಸ್ತಂಭದ ಭಾವನೆ. ಇದನ್ನು ಪದಗಳಲ್ಲಿ ವಿವರಿಸಲು ಕಷ್ಟವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ತೀಚಿನ ಚಲನಚಿತ್ರ ಪ್ರದರ್ಶನಗಳು

ಕೆಲಸದ ವಿಷಯಕ್ಕೆ ಬಂದರೆ, ವಿಕ್ಕಿ ಕೌಶಲ್​ 'ಛಾವಾ' ಚಿತ್ರದಲ್ಲಿ ಕಾಣಿಸಿಕೊಂಡರು. ಇದು 2025ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಿತ್ತು. ಅವರ ಮುಂದಿನ ಸಿನಿಮಾವಾದ ಲವ್​ ಅಂಡ್​ ವಾರ್​ ಚಿತ್ರದಲ್ಲಿ ರಣಬೀರ್​ ಕಪೂರ್​, ಆಲಿಯಾ ಭಟ್​ನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಕತ್ರಿನಾ ಕೊನೆಯದಾಗಿ 'ಮೆರ್ರಿ ಕ್ರಿಸ್‌ಮಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net