ಭದ್ರತಾ ತಪಾಸಣೆಗೆ ಬೆಬೋ ನಕಾರ: ಸಾಮಾನ್ಯರಿಗೊಂದು ನ್ಯಾಯ, ಸಿನಿಮಾದವರಿಗೊಂದು ನ್ಯಾಯ; ನೆಟ್ಟಿಗರ ಆಕ್ರೋಶ! Kareena Kapoor in Airport

ಭದ್ರತಾ ತಪಾಸಣೆಯನ್ನು ಮಾಡಿಸಿಕೊಳ್ಳದೆ ನೇರವಾಗಿ ವಿಮಾನ ನಿಲ್ದಾಣ ಪ್ರವೇಶಿಸಿದ ನಟಿ
ಭದ್ರತಾ ತಪಾಸಣೆಯನ್ನು ಮಾಡಿಸಿಕೊಳ್ಳದೆ ನೇರವಾಗಿ ವಿಮಾನ ನಿಲ್ದಾಣ ಪ್ರವೇಶಿಸಿದ ನಟಿ
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ವಿಮಾನ ನಿಲ್ದಾಣದಲ್ಲಿ ಕರೀನಾ ಕಪೂರ್​ ವಿವಾದ
  • ಭದ್ರತಾ ತಪಾಸಣೆಯನ್ನು ಮಾಡಿಸಿಕೊಳ್ಳದೆ ನೇರವಾಗಿ ವಿಮಾನ ನಿಲ್ದಾಣ ಪ್ರವೇಶಿಸಿದ ನಟಿ
  • ಬೆಬೋ ವರ್ತನೆಗೆ ನೆಟ್ಟಿಗರು ಗರಂ
ಮುಂಬೈ: ಈ ರಾಜಕಾರಣಿ ಮತ್ತು ಸಿನಿಮಾ ನಟ-ನಟಿಯರು ತಮ್ಮ ಖ್ಯಾತಿ ಹಾಗೂ ಜನಪ್ರೀಯತೆಯನ್ನು ಬಳಸಿಕೊಂಡು ಸಾಮಾನ್ಯ ಜನರ ಮುಂದೆ ತಾವು ಈ ದೇಶದ ಪ್ರಥಮ ದರ್ಜೆ ನಾಗರಿಕರು ಹಾಗೂ ನೀವುಗಳು ದ್ವಿತೀಯ, ತೃತೀಯ ದರ್ಜೆಯವರು ಎನ್ನಿಸುವಂತೆ ತಮ್ಮ ವರ್ತನೆಯ ಮೂಲಕ ತೋರ್ಪಡಿಸುವುದನ್ನು ನಾವು ಹಲವಾರು ಬಾರಿ ನೋಡಿದ್ದೆವೆ. ಈಗ ಇದೇ ರೀತಿಯ ಆರೋಪಕ್ಕೆ ಬಾಲಿವುಡ್​ನ ಬೆಬೋ ಖ್ಯಾತಿಯ ಕರೀನಾ ಕಪೂರ್​ ಖಾನ್ (Kareena Kapoor in Airport)​ ಗುರಿಯಾಗಿದ್ದಾರೆ.

ಸರತಿ ಸಾಲನ್ನ ಮರೆತ ನಟಿ!

ಮುಂಬೈನ ಛತ್ರಪತಿ ಶಿವಾಜಿ ಏರಪೋರ್ಟ್​ಗೆ ಬಂದ ಸ್ಟೈಲಾಗಿ ರೆಡಿಯಾಗಿ ಬಂದ ನಟಿ ಕರೀನಾ ಕಪೂರ್​, ಪ್ರವೇಶ ದ್ವಾರದಲ್ಲಿರುವ ಭದ್ರತಾ ತಪಾಸಣೆಗೆ ಒಳಗಾಗದೆ ನೇರವಾಗಿ ವಿಮಾನ ನಿಲ್ದಾಣ ಪ್ರವೇಶ ಮಾಡಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಕರೀನಾ ಕಪೂರ್​ ಅವರ ಈ ವರ್ತನೆ ಈಗ ಸೋಶಿಯಲ್​ ಮೀಡಿಯಾನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಈ ವಿಡಿಯೋ ಈಗ ಸಖತ್​ ವೈರಲ್​ ಆಗಿದ್ದು, ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.
ಕರೀನಾ ಈ ರೀತಿ ಮಾಡಿದ್ದು, ಇದೇ ಮೊದಲೇನಲ್ಲ, ಇವಳು ಯಾವಾಗಲು ಈ ಚೆಕಿಂಗ್​ನ್ನು ತಪ್ಪಿಸಿಕೊಳ್ಳುತ್ತಾಳೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ನಮ್ಮ ದೇಶದಲ್ಲಿ ಈ ಸಿನಿಮಾ ತಾರೆಗಳನ್ನು ಎಲ್ಲಿವರೆಗೆ ಪೂಜಿಸುವುದನ್ನು ಬಿಡುವುದಿಲ್ಲವೋ ಅಲ್ಲಿವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದೇ ಕೆಲಸವನ್ನು ಸಾಮಾನ್ಯ ಜನ ಮಾಡಿದ್ದರೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಸುಮ್ಮನಿರುತ್ತಿದ್ದರೆ ಎಂದು ಮತ್ತೊಬ್ಬರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net