ಬರೋಬ್ಬರಿ 136 ಕೆಜಿ ತೂಕ ಇಳಿಕೆ! ಜೆಲ್ಲಿ ರೋಲ್ ಹೊಸ ಅವತಾರ ನೋಡಿ ದಂಗಾದ ಗ್ರ್ಯಾಮಿ ಪ್ರೇಕ್ಷಕರು Jelly Roll

Jelly Roll (ಚಿತ್ರ Instagram)
Jelly Roll (ಚಿತ್ರ Instagram)
Published on
Jelly Roll: 2026ರ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಂಚಿತವಾಗಿ ನಡೆದ ಪ್ರತಿಷ್ಠಿತ 'ಪ್ರಿ-ಗ್ರ್ಯಾಮಿ ಗಾಲಾದಲ್ಲಿ ಅಮೆರಿಕದ ಖ್ಯಾತ ಗಾಯಕ ಜೆಲ್ಲಿ ರೋಲ್ ತಮ್ಮ ಅಪ್ರತಿಮ ಗಾಯನಕ್ಕಿಂತ ಹೆಚ್ಚಾಗಿ ಬರೋಬ್ಬರಿ 100 ಕೆಜಿಗೂ ಹೆಚ್ಚು ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅಚ್ಚರಿ ಮೂಡಿಸಿದ ರೂಪಾಂತರ
ಜೆಲ್ಲಿ ರೋಲ್ ಕಳೆದ ಕೆಲವು ತಿಂಗಳುಗಳಿಂದ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ಒಂದು ಕಾಲದಲ್ಲಿ ಸುಮಾರು 250 ಕೆಜಿ ತೂಕವಿದ್ದ ಗಾಯಕ 120 ಕೆಜಿಗಳಷ್ಟು ತೂಕ ಇಳಿಸಿಕೊಂಡು, ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುವಾಗ ತಮ್ಮ ಆತ್ಮವಿಶ್ವಾಸದ ನಗೆಯಿಂದ ನೆರೆದಿದ್ದವರ ಮನ ಗೆದ್ದರು.
ಗಾಯಕ ಜೆಲ್ಲಿ ರೋಲ್ ತಮ್ಮ ದೈಹಿಕ ಬದಲಾವಣೆಯ ಬಗ್ಗೆ ಮಾತನಾಡುತ್ತಾ, ತಮ್ಮ ಬಾಲ್ಯದ ನೆನಪುಗಳು ಮತ್ತು ತಮ್ಮ ಹೆಸರಿನ ಹಿಂದಿರುವ ಕುತೂಹಲಕಾರಿ ಕಥೆಯನ್ನು ಹಂಚಿಕೊಂಡಿದ್ದಾರೆ. ನನ್ನ ನಿಜವಾದ ಹೆಸರು ಜೇಸನ್ ಬ್ರಾಡ್ಲಿ ಡಿಫೋರ್ಡ್. ಆದರೆ, ಜಗತ್ತಿಗೆ ನಾನು ಜೆಲ್ಲಿ ರೋಲ್​ ಎಂದೇ ಪರಿಚಿತ. ಇದು ನನ್ನ ಅಡ್ಡ ಹೆಸರು ಚಿಕ್ಕವನಾಗಿದ್ದಾಗ ನನ್ನ ಕೆನ್ನೆಗಳು ದುಂಡಾಗಿದ್ದವು. ಆದರಿಂದ ನನ್ನ ತಾಯಿ ಪ್ರೀತಿಯಿಂದ ಜೆಲ್ಲಿ ರೋಲ್​ ಎಂದು ಕರೆಯುತ್ತಿದ್ದರು ಎಂದು ಹೇಳಿದ್ದಾರೆ.
ಅವರ ಪತ್ನಿ ಬನ್ನಿ ಕ್ಸೋ ನಡೆಸಿಕೊಡುವ ಜನಪ್ರಿಯ 'ಡಂಬ್ ಬ್ಲಾಂಡ್' ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ ಜೆಲ್ಲಿ ರೋಲ್​, ತಮ್ಮ ಆರೋಗ್ಯ ಸುಧಾರಣೆಯ ಕುರಿತು ಮುಕ್ತವಾಗಿ ಮಾತನಾಡಿದ್ದರು. 2022ರಲ್ಲಿ ಪ್ರಾರಂಭವಾದ ತೂಕ ಇಳಿಕೆಯ ಪ್ರಯಾಣವು ಸಿನಿಮಾ ಅಥವಾ ಪ್ರಶಸ್ತಿಗಳಿಗಲ್ಲದೇ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಜೀವನವನ್ನು ಬದಲಾಯಿಸಿಕೊಳ್ಳಲು ಎಂದು ಅಭಿಪ್ರಾಯ ಸೂಚಿಸಿದರು.
ನಾನು ಜಗತ್ತಿಗೆ ಒಂದು ಸತ್ಯ ತಿಳಿಸಬೇಕೆಂದು ಬಯಸುತ್ತೇನೆ. ನನ್ನ ತೂಕದಿಂದ ಮತ್ತು ಆ ರೂಪದಿಂದಾಗಿ ಯಶಸ್ವಿಯಾಗಲಿಲ್ಲ. ಅದರ ಹೊರತಾಗಿಯೂ, 550 ಪೌಂಡ್​ಗಳಷ್ಟು ಭಾರ ಹೊತ್ತುಕೊಂಡು ಇಷ್ಟೊಂದು ಯಶಸ್ವಿಯಾಗಿರುವುದು ಒಂದು ಹುಚ್ಚುತನವೇ ಸರಿ ಎಂದಿದ್ದಾರೆ.
2026ರ ಸಾಲಿನ ಗ್ರ್ಯಾಮಿ ಪ್ರಶಸ್ತಿ ನಾಮನಿರ್ದೇಶನಗಳಲ್ಲಿ ಜೆಲ್ಲಿ ರೋಲ್ ಅವರ ಹೆಸರು ಭಾರಿ ಸದ್ದು ಮಾಡುತ್ತಿದೆ. 41 ವರ್ಷದ ಈ ಅದ್ಭುತ ಕಲಾವಿದ, ತಮ್ಮ ವೈಯಕ್ತಿಕ ಜೀವನದ ಬದಲಾವಣೆಗಳ ಜೊತೆಗೆ ವೃತ್ತಿಜೀವನದಲ್ಲೂ ಅತ್ಯಂತ ಯಶಸ್ವಿ ಘಟ್ಟವನ್ನು ತಲುಪಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net