ತಾಯಿಯೇ ನನ್ನ.....ಬಾಲ್ಯದ ಘಟನೆ ನೆನೆದು ಕಣ್ಣೀರಿಟ್ಟ ನಟಿ ಜಯಾ ಭಟ್ಟಾಚಾರ್ಯ Jaya Bhattacharya

Jaya Bhattacharya
Jaya Bhattacharya
Published on
ನವದೆಹಲಿ: ಕ್ಯೂಂಕಿ ಸಾಸ್ ಭಿ ಬಹು ಥಿ ಚಿತ್ರದಲ್ಲಿ ಪಾಯಲ್ ಪಾತ್ರದ ಮೂಲಕ ಜನಪ್ರಿಯರಾದ ನಟಿ ಜಯಾ ಭಟ್ಟಾಚಾರ್ಯ (Jaya Bhattacharya) ಅವರು ತಮ್ಮ ಬಾಲ್ಯದ ಜೀವನದಲ್ಲಿ ತನ್ನ ತಾಯಿಯಿಂದ ಅನುಭವಿಸಿದ ದೈಹಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂಭಾಷಣೆಯಲ್ಲಿ ಜಯಾ ಭಟ್ಟಾಚಾರ್ಯ, ತಾನು ಹೆಣ್ಣು ಮಗುವಾಗಿ ಹುಟ್ಟಿರುವುದು ದೊಡ್ಡ ದುರಾದೃಷ್ಟ ಎಂದು ಭಾವಿಸಿದ್ದೇನೆ ಎಂದು ಬಹಿರಂಗಪಡಿಸಿದರು.
ಮದುವೆಯಾದ ನಂತರ ನನ್ನ ಹೆತ್ತವರಿಬ್ಬರು ಹೊಂದಾಣಿಕೆಯಿಂದ ಇರುತ್ತಿರಲಿಲ್ಲ. ಇವರಿಬ್ಬರ ಸಂಘರ್ಷ ನನ್ನವರೆಗೂ ಹೋಯಿತು. ನನ್ನ ತಾಯಿ ಸಂತೋಷವಾಗಿರಲಿಲ್ಲ. ಆಕೆಯ ಕನಸುಗಳು ಎಂದಿಗೂ ನನಸಾಗಲಿಲ್ಲ. ಆದರಿಂದ ಆಕೆ ನನಗೆ ಏನನ್ನು ನೀಡಬೇಕೋ ಅದನ್ನು ಸಂಪೂರ್ಣವಾಗಿ ನೀಡಲಿಲ್ಲ. ನನ್ನ ಬಾಲ್ಯ ಅಪೂರ್ಣವಾಗಿ ಹೋಯಿತು ಎಂದು ಹೇಳಿದರು.
ನನ್ನ ತಾಯಿ ನನ್ನನ್ನು ಲಟ್ಟಣಿಗೆ, ಬೂಟುಗಳು, ಕೋಲುಗಳಿಂದ ಹಲವು ಬಾರಿ ಹೊಡೆದಿದ್ದಾಳೆ. ಈ ಎಲ್ಲಾ ಚಟುವಟಿಕೆಗಳು ನನ್ನನ್ನು ಹಠಮಾರಿಯಾಗಿ ಮಾಡಿದೆ. ಇದರಿಂದ ನನ್ನನ್ನು ನಾನು ತುಂಬಾ ಹಾನಿಗೊಳಿಸಿಕೊಂಡಿದ್ದೇನೆ ಎಂದರು.
ಇದಲ್ಲದೆ, ನಟಿ ತನ್ನ ತಂದೆಯ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದರು. ಆದರೆ ತಾಯಿಯ ಮೇಲೆ ಪ್ರೌಢಾವಸ್ಥೆಯಲ್ಲಿಯೇ ಅಸಮಾಧಾನ ಮುಂದುವರೆಯಲು ಪ್ರಾರಂಭವಾಯಿತು ಎಂದು ತಿಳಿಸಿದರು.
ಇದು ಜಯಾ ಅವರನ್ನು ರೋಷಿ ಹೋಗುವಂತೆ ಮಾಡಿತು. ಈ ವೇಳೆ ಅವರು ಮಾಡಬಾರದ ಎಲ್ಲಾವನ್ನು ಕಲಿತಿದ್ದೇನೆ ಎಂದರು. ಅಂದರೆ, ಜನರನ್ನು ನಿರ್ಣಯಿಸುವುದು, ಅವರಿಗೆ ಬೆಲೆ ಕೊಡದಿರುವುದು ಹಾಗೂ ಇತರರ ಮುಂದೆ ತಮ್ಮ ಮಕ್ಕಳನ್ನು ಬೆಂಬಲಿಸದೇ ಇರುವುದನ್ನು ಕಲಿತಿದ್ದೇನೆ ಎಂದರು.
ತಾವು ನಟನಾ ರಂಗಕ್ಕೆ ಪ್ರವೇಶ ಪಡೆದ ಬಗ್ಗೆ ಮಾತನಾಡಿದ ಜಯಾ ಭಟ್ಟಾಚಾರ್ಯ, ಕೆಲವು ವರ್ಷಗಳಲ್ಲಿಯೇ, ನಾನು ನಟನಾ ಜಗತ್ತಿನಲ್ಲಿ ಅಪಾರ ಗೌರವವನ್ನು ಪಡೆದಿದ್ದೇನೆ. ಆದಾಗ್ಯೂ, ನಟನೆಯನ್ನು ವೃತ್ತಿಯಾಗಿ ಪಡೆಯುವುದು ಎಂದಿಗೂ ನನ್ನ ಮೂಲ ಯೋಜನೆಯಾಗಿರಲಿಲ್ಲ ಎಂದು ಅವರು ಬಹಿರಂಗಪಡಿಸಿದರು.
ಮೊದಲು ನಾನು ನೃತ್ಯ ಮಾಡುತ್ತಿದ್ದೆ ಮತ್ತು ಸಂಗೀತ ತರಬೇತಿ ಪಡೆಯುತ್ತಿದ್ದೆ. ಒಮ್ಮೆ ನನಗೆ ಟೆಲಿಫಿಲ್ಮ್ ಮಾಡುವ ಅವಕಾಶ ಸಿಕ್ಕಾಗ ನಿರ್ದೇಶಕರೊಬ್ಬರು ನನ್ನ ತಂದೆಯೊಂದಿಗೆ ಮಾತನಾಡಿ, ನನ್ನನ್ನು ನೃತ್ಯ ಮಾಡಲು ತಿಳಿಸಿದರು. ನಂತರ, ಪುರುಷ ಪಾತ್ರವನ್ನು ನಟಿಸಲು ಕೇಳಿದರು. ಮೂರು ದಿನಗಳ ನಂತರ ಚಿತ್ರೀಕರಣ ನಡೆಯಬೇಕಿತ್ತು. ಆದರೆ, ನನ್ನ ತಂದೆ ಮರುದಿನ 5 ಗಂಟೆಗೆ ನನ್ನನ್ನು ಎಬ್ಬಿಸಿ ಶೂಟಿಂಗ್ ಸೆಟ್​ಗೆ ಕರೆದೊಯ್ದರು. ನಾನು ನಟನೆಯನ್ನು ಮಾಡಲು ಬಯಸಲಿಲ್ಲ, ಆದರೆ ನಟನೆ ಕಡೆಗೆ ನನ್ನನ್ನು ತಳ್ಳಲಾಯಿತು ಎಂದು ತಿಳಿಸಿದರು.
ಕಾಸ್ಟಿಂಗ್ ಕೌಚ್‌ನೊಂದಿಗೆ ಆದಂತಹ ಭಯಾನಕ ಅನುಭವವನ್ನು ಹಂಚಿಕೊಂಡ ನಟಿ, ಟೆಲಿಫಿಲ್ಮ್ ನಂತರ, ನಿರ್ದೇಶಕರು ತಮ್ಮ ಸ್ನೇಹಿತರಲ್ಲಿ ಒಬ್ಬರೊಂದಿಗೆ ಆಗಮಿಸಿ ನನ್ನನ್ನು ಹೊರಗೆ ಕರೆದುಕೊಂಡು ಹೋಗಬೇಕೆಂದು ಹೇಳಿದರು. ಆದರೆ, ನನ್ನ ತಾಯಿ ಇದಕ್ಕೆ ಅನುಮತಿ ನೀಡಲಿಲ್ಲ. ಒಂದು ದಿನ ಅವರು ನನ್ನನ್ನು ರೆಸ್ಟೋರೆಂಟ್​ಗೆ ಕರೆದುಕೊಂಡು ಹೋದರು. ಆಗ ನನಗೆ 17-18 ವರ್ಷ ವಯಸ್ಸಾಗಿತ್ತು. ನಂತರ ನಿರ್ದೇಶಕರು ಕಣ್ಮರೆಯಾದರು.
ಇದಾದ ಬಳಿಕ ಅವರ ಸ್ನೇಹಿತ ನಮ್ಮ ಮನೆಗೆ ಪದೇ ಪದೇ ಬರಲು ಆರಂಭಿಸಿದರು. ನನಗೆ ಕಾರು ಚಲನೆ ಮಾಡುವುದನ್ನು ಹೇಳಿ ಕೊಟ್ಟರು. ಅವರು ಮಾಫಿಯಾದಲ್ಲಿ ಭಾಗಿಯಾಗಿದ್ದಾರೆಂದು ನಮಗೆ ತಿಳಿದುಬಂದಿತು. ನಂತರ ಅವರು ನನ್ನನ್ನು ಮುಂಬೈಗೆ ಕರೆದುಕೊಂಡು ಹೋಗಬೇಕೆಂದು ಬಯಸಿದರು, ಆದರೆ ಆ ವ್ಯಕ್ತಿಯೊಂದಿಗೆ ನಾನು ಹೋಗಲಿಲ್ಲ ಎಂದು ಹೇಳಿದರು.
ಜಯಾ ಭಟ್ಟಾಚಾರ್ಯ ಅವರು ತಮ್ಮ ತಾಯಿಯಿಂದ ಬಳಲುತ್ತಿದ್ದ ಆಘಾತಕಾರಿ ಬಾಲ್ಯದ ಬಗ್ಗೆ ಮಾತನಾಡುವುದರ ಜಿತೆಗೆ ತಮ್ಮ ಇಚ್ಛೆಗೆ ವಿರುದ್ಧವಾಗಿ ಕ್ಯಾಮೆರಾ ಎದುರಿಸುವ ಬಗ್ಗೆ ಮತ್ತು ಉದ್ಯಮಕ್ಕೆ ಪ್ರವೇಶಿಸಿದಾಗ ಅವರು ಅನುಭವಿಸಿದ ಯಾತನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net