ಈಗಾಗಲೇ, ಬಹ್ರೇನ್, ಕುವೈತ್, ಓಮನ್, ಕತಾರ್, ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಚಿತ್ರದಲ್ಲಿನ ಬಲವಾದ ಕಥೆ ಹಾಗೂ ನೈಜತೆಯನ್ನು ಹಾಗೆಯೇ ಬೆಳ್ಳಿಪರದೆಯ ಮೇಲಿಟ್ಟಿರುವ ನಿರ್ದೇಶಕರ ಪ್ರಯತ್ನಕ್ಕೆ ಸಿನಿಪ್ರಿಯರಿಂದ ವ್ಯಾಪಕ ಪ್ರಶಂಸೆ ಮತ್ತು ಮೆಚ್ಚುಗೆಗಳು ಹರಿದುಬರುತ್ತಿವೆ. ಪಾಕಿಸ್ತಾನಿ ಉಗ್ರರ ಕೈವಾಡ, ಪಾಪದ ಕೃತ್ಯಗಳನ್ನು ದೃಶ್ಯಗಳ ಮೂಲಕ ತೋರಿಸಿರುವ ಈ ಚಿತ್ರದ ಕಲೆಕ್ಷನ್ ಸದ್ಯ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸುವತ್ತ ಸಾಗಿದೆ.