Dhurandhar : ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ 'ಧುರಂಧರ್' (Dhurandhar) ಚಿತ್ರ ತೆರೆಗೆ ಬಂದು ಹದಿನೈದು ದಿನಗಳು ಕಳೆದಿದ್ದರೂ, ಈ ಚಿತ್ರದ ಕುರಿತಾದ ಚರ್ಚೆಗಳು ಇನ್ನೂ ಮುಗಿಯುತ್ತಿಲ್ಲ. ಕೆಲವರು ಅದರ ತಾಂತ್ರಿಕ ಕೌಶಲ್ಯ ಮತ್ತು ಕಲಾವಿದರ ಅಭಿನಯಕ್ಕಾಗಿ ಹೊಗಳಿದರೆ ಇನ್ನೂ ಅನೇಕರು ದ್ವೇಷಪೂರಿತ ಪ್ರಚಾರ ಮತ್ತು ಧರ್ಮಾಂಧತೆಯನ್ನು ಹರಡುತ್ತದೆ ಎಂದು ಟೀಕಿಸಿದ್ದಾರೆ. ಇದರ ನಡುವೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಮಾಜಿ ಸದಸ್ಯ ನಬಿಲ್ ಗಬೋಲ್ ಧುರಂಧರ್ ಚಿತ್ರದಲ್ಲಿ ತಮ್ಮ ಪಾತ್ರವನ್ನು ತಪ್ಪಾಗಿ ಚಿತ್ರಿಸಿದ್ದಕ್ಕಾಗಿ ತೀತ್ರ ಟೀಕೆ ಮಾಡಿದ್ದಾರೆ. ಸಿನಿಮಾದಲ್ಲಿ ಅನುಭವಿ ನಟ ರಾಕೇಶ್ ಬೇಡಿ ನಿರ್ವಹಿಸಿದ ಜಮೀಲ್ ಜಮಾಲಿ ಪಾತ್ರವು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಯ ನಾಯಕ ಗಬೋಲ್ ಅವರನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ. ಅವರು 2008 ರಿಂದ 2011 ರವರೆಗೆ ಬಂದರು ಮತ್ತು ಹಡಗು ಖಾತೆ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. "ಜೋ ಮೇರಾ ರೋಲ್ ದಿಖಾಯಾ ಗಯಾ ಹೈ, ಮೇರಾ ರೋಲ್ ಬಹುತ್ ದಬ್ಬಾಂಗ್ ಥಾ, ದಬ್ಬಾಂಗ್ ಇಸ್ ತರೀಕೆ ಸೆ ಥಾ ಕಿ ಇನ್ಹೋನೆ ಮೇರೆ ರೋಲ್ ಕೋ ಸಹಿ ತರೀಕೆ ಸೆ ನಹಿ ದಿಖಾಯಾ ( ನಾನು ತುಂಬಾ ಧೈರ್ಯಶಾಲಿ ವ್ಯಕ್ತಿ ಆದರೆ ಅವರು ನಾನು ಹೇಗಿದ್ದೆನೋ ಅದನ್ನು ನನಗೆ ತೋರಿಸಿಲ್ಲ) ಎಂದು ಅವರು ಸ್ಥಳೀಯ ಮಾಧ್ಯಮಗಳೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಹೇಳಿದರು. "ಇನ್ಹೋನೆ ಕೋಶಿಶ್ ಕರಿ ಹೈ ಲಿಯಾರಿ ಕೋ ಭಯೋತ್ಪಾದಕ ಹಬ್ ದಿಖಾನೆ ಕಿ, ಲಿಯಾರಿ ಕೋಯಿ ಭಯೋತ್ಪಾದಕ ಹಬ್ ನಹೀ ಹೈ. ಅಗರ್ ಇಂಕಾ ಕೋಯಿ ಏಜೆಂಟ್ ಆ ಜಾತಾ ತೋ ವೋ ಜಿಂದಾ-ಸಲಾಮತ್ ಲಿಯಾರಿ ಸೆ ನಹೀ ಜಾತಾ (ಅವರು ಲಿಯಾರಿಯನ್ನು ಭಯೋತ್ಪಾದಕ ಕೇಂದ್ರ ಎಂದು ತೋರಿಸಲು ಪ್ರಯತ್ನಿಸಿದ್ದಾರೆ. ಇವರು ತೋರಿಸಿದಂತೆ ಇವರ ಏಜೆಂಟ್ ಯಾರಾದರು ಲಿಯಾರಿಗೆ ಬಂದಿದ್ದರೆ ಜೀವಂತವಾಗಿ ಹೋಗುತ್ತಿರಲಿಲ್ಲ) ಚಿತ್ರದ ಮೇಲೆ ಅಂತರರಾಷ್ಟ್ರೀಯ ನಿಷೇಧಕ್ಕೆ ಒತ್ತಾಯಿಸುತ್ತೀರಾ ಎಂದು ಕೇಳಿದಾಗ, ಗ್ಯಾಬೋಲ್ ಅವರು ಹಾಗೆ ಮಾಡಲು ಹಣಕಾಸಿನ ಸಂಪನ್ಮೂಲಗಳ ಕೊರತೆ ಇದೆ ಎಂದು ಹೇಳಿದರು.