ಸಂಜಯ್​ ದತ್​ನಲ್ಲಿ ನನ್ನ ಗಂಡನನ್ನ ಕಂಡೆ: ಧುರಂಧರ್​ 2 ವೀಕ್ಷಿಸಿದ ಎಸ್ಪಿ ಅಸ್ಲಂ ಪತ್ನಿ ಹೇಳಿದ್ದೇನು? Dhurandhar 2

ಸಂಜುಬಾಬಾ ನನ್ನ ಗಂಡನ ಪಾತ್ರವನ್ನು ಅದ್ಭುವಾಗಿ ನಿರ್ವಸಿದ್ದಾರೆ : ನೌರಿನ್​ ಅಸ್ಲಂ
ಸಂಜುಬಾಬಾ ನನ್ನ ಗಂಡನ ಪಾತ್ರವನ್ನು ಅದ್ಭುವಾಗಿ ನಿರ್ವಸಿದ್ದಾರೆ : ನೌರಿನ್​ ಅಸ್ಲಂ
Published on

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್​ 2
  • ಬಿಡುಗಡೆಯಾದ 14 ಕ್ಕೆ ದಿನದಲ್ಲಿ 1500 ಕೋಟಿ ಗಳಿಸಿರುವ ಸಿನಿಮಾ
  • ಸಂಜುಬಾಬಾ ನನ್ನ ಗಂಡನ ಪಾತ್ರವನ್ನು ಅದ್ಭುವಾಗಿ ನಿರ್ವಸಿದ್ದಾರೆ : ನೌರಿನ್​ ಅಸ್ಲಂ
ಪಾಕಿಸ್ತಾನ: ರಣವೀರ್​ ಸಿಂಗ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮತ್ತು ಆದಿತ್ಯ ಧರ್​ ನಿರ್ದೇಶನದ ಧುರಂಧರ್​ 2 (Dhurandhar2) ದಿ ರಿವೆಂಜ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಬಿಡುಗಡೆಯಾದ ದಿನದಿಂದ ಧೂಳೆಬ್ಬಿಸುತ್ತಿದ್ದು, ತೆರೆಕಂಡು ಕೇವಲ 14 ದಿನಗಳಲ್ಲಿ ಈ ಚಿತ್ರ ಸುಮಾರು 1,500 ಕೋಟಿಗಳಿಸಿದೆ. ಈ ಸಿನಿಮಾದಲ್ಲಿ ಕೆಲ ನೈಜ ಪಾತ್ರಗಳನ್ನು ಚಿತ್ರಿಸಿದ ಕಾರಣದಿಂದ ಈ ಚಲನಚಿತ್ರ ಇಷ್ಟೊಂದು ಯಶಸ್ಸನ್ನು ಕಾಣಲು ಕಾರಣ ಎನ್ನುವುದು ಸಿನಿಮಾ ವಿಮರ್ಶಕರ ಅಭಿಪ್ರಾಯವಾಗಿದೆ.

ನನಗೆ ನನ್ನ ಗಂಡನನ್ನೇ ನೋಡಿದಂತಾಯಿತು!

ಈ ಧುರಂಧರ್​ ಸಿನಿಮಾದಲ್ಲಿ ಎಸ್ಪಿ ಚೌಧರಿ ಅಸ್ಲಂ ಎಂಬ ಪಾತ್ರ ಚಿತ್ರದಲ್ಲಿರುವ ಒಂದು ಪ್ರಮುಖ ಪಾತ್ರವಾಗಿದೆ. ಈ ಚೌಧರಿ ಅಸ್ಲಂ ಸಿಂಧ್​ ಪೋಲಿಸ್​ ಅಧಿಕಾರಿಯಾಗಿದ್ದು, ಲಿಯಾರಿ ಪ್ರದೇಶದಲ್ಲಿ ತನ್ನ ಖಡಕ್​ ಅಧಿಕಾರದ ಮೂಲಕ ಹೆಸರುವಾಸಿಯಾಗಿದ್ದ ವ್ಯಕ್ತಿಯಾಗಿದ್ದನು.
ಈಗ ಧುರಂಧರ್​ 2 ನಲ್ಲಿ ತನ್ನ ಪತಿಯ ಪಾತ್ರವನ್ನು ವೀಕ್ಷಿಸಿದ ಅಸ್ಲಂ ಪತ್ನಿ ನೌರಿನ್​ ಅಸ್ಲಂ, ಸಿನಿಮಾದಲ್ಲಿ ನನ್ನ ಗಂಡನ ಪಾತ್ರವನ್ನು ಸಂಜಯ್​ ದತ್ ಅದ್ಭುತವಾಗಿ ನಿರ್ವಹಿಸಿದ್ದಾರೆ. ಹಾಗೆಯೇ ಸಿನಿಮಾ ನೋಡುತ್ತಾ ನನಗೆ ನನ್ನ ಗಂಡನೇ ಅಭಿನಯಿಸುತ್ತಿದ್ದಾರೆನೋ ಎನ್ನುವಂತೆ ಭಾಸವಾಯಿತು ಎಂದು ಹೇಳಿದ್ದಾರೆ.
ಹಾಗೆಂದ ಮಾತ್ರಕ್ಕೆ ಈ ಸಿನಿಮಾದಲ್ಲಿ ತೋರಿಸಿರುವುದೆಲ್ಲಾ ನಿಜವಲ್ಲ. ನನ್ನ ಗಂಡನಿಗೆ ಮತ್ತು ದಾವೂದ್​ ಇಬ್ರಾಹಿಂನಿಗೆ ಯಾವುದೇ ಸಂಬಂಧವಿರಲಿಲ್ಲ. ಅಂತಯೇ ಅವರಿಗೆ ಬಲೂಚ್​ ಪಂಗಡದವರ ಮೇಲೆ ಯಾವುದೇ ದ್ವೇಷವಿರಲಿಲ್ಲ ಎಂದು ನೌರಿನ್​ ಸ್ಪಷ್ಟ ಪಡಿಸಿದ್ದಾರೆ.

ಅಸ್ಲಂ ಪಾತ್ರದಲ್ಲಿ ಮಿಂಚಿದ ಸಂಜು ಬಾಬಾ!

ಧುರಂಧರ್​ ಸಿನಿಮಾದಲ್ಲಿರುವ ಈ ಎಸ್ಪಿ ಚೌಧರಿ ಅಸ್ಲಂ ಪಾತ್ರವನ್ನು ನಟ ಸಂಜಯ್​ ದತ್​ ನಿರ್ವಹಿಸಿದ್ದು, ತೆರೆಯ ಮೇಲೆ ನಟನೆ ನೈಜವಾಗಿ ಮೂಡಿಬಂದಿದೆ. ಲಿಯಾರಿ ಟಾಸ್ಕ್​ ಫೋರ್ಸ್​ನ ಮುಖ್ಯಸ್ಥನಾಗಿ ಚೌಧರಿ ಅಸ್ಲಂ ಹೇಗೆ ಕೆಲಸ ಮಾಡಿದ್ದರೂ, ಅವರಿಗೆ ಯಾರ್ಯಾರ ಸಂಪರ್ಕವಿತ್ತು ಮತ್ತು ಎಸ್ಪಿಯ ಸಾವು ಹೇಗಾಯಿತು ಎಂದು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಯಾರು ಈ ಚೌಧರಿ ಅಸ್ಲಂ?

ಪಾಕಿಸ್ತಾನದ ಸಿಂಧ್ ಪೊಲೀಸ್ ಇಲಾಖೆಯಲ್ಲಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ (SP) ಆಗಿದ್ದ ಚೌಧರಿ ಅಸ್ಲಂ ಖಾನ್ ಅವರು ಕರಾಚಿಯ ಅತ್ಯಂತ ಪ್ರಭಾವಶಾಲಿ ಮತ್ತು ಧೈರ್ಯಶಾಲಿ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದರು. ಇವರನ್ನು ಕರಾಚಿಯ ಸೂಪರ್ ಕಾಪ್ ಮತ್ತು ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಕರೆಯಲಾಗುತ್ತಿತ್ತು. ಅವರ ಕಾರ್ಯವೈಖರಿಯಿಂದಾಗಿ ಕ್ರಿಮಿನಲ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಅವರು, ತಮ್ಮ ವೃತ್ತಿಜೀವನದಲ್ಲಿ ನೂರಕ್ಕೂ ಹೆಚ್ಚು ಎನ್ಕೌಂಟರ್‌ಗಳನ್ನು ನಡೆಸಿದ್ದರು ಎಂದು ಹೇಳಲಾಗುತ್ತದೆ.
2011 ರಲ್ಲಿ ಅವರ ಮನೆಯ ಮೇಲೆ ನಡೆದ ಬಾಂಬ್ ದಾಳಿಯಿಂದ ಅವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಆ ಸಮಯದಲ್ಲಿ ಅವರು ಮಾಧ್ಯಮಗಳ ಮುಂದೆ ನಿಂತು, ಭಯೋತ್ಪಾದಕರು ಸಿಂಹದ ಬಾಯಿಗೆ ಕೈ ಹಾಕಿದ್ದಾರೆ, ನಾನು ಅವರನ್ನು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದು ಅವರ ಧೈರ್ಯಕ್ಕೆ ಸಾಕ್ಷಿಯಾಗಿತ್ತು. ಆದರೆ 9 ಜನವರಿ 2014 ರಂದು ಕರಾಚಿಯ ಲೈಯಾರಿ ಎಕ್ಸ್‌ಪ್ರೆಸ್‌ವೇನಲ್ಲಿ ಚೌಧರಿ ಅಸ್ಲಂ ಅವರ ಬೆಂಗಾವಲು ವಾಹನದ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಅವರು ಹುತಾತ್ಮರಾದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net