ನಾನು ದಾವೂದ್ನನ್ನು ಭೇಟಿಯೇ ಮಾಡಿಲ್ಲ: ಧುರಂಧರ್ 2 ವಿರುದ್ಧ ನಬೀಲ್ ಗಬೋಲ್ ಗರಂ| Nabil Gabol on Dhurandhar 2
ನಾನು ದಾವೂದ್ನನ್ನು ಭೇಟಿ ಮಾಡಿಯೇ ಇಲ್ಲ: ನಬೀಲ್ ಗೋಯಲ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್ 2
ತೆರೆಕಂಡು 13 ನೇ ದಿನಕ್ಕೆ 1500 ಕೋಟಿ ಕಲೆಕ್ಷನ್
ನಾನು ದಾವೂದ್ನನ್ನು ಭೇಟಿ ಮಾಡಿಯೇ ಇಲ್ಲ: ನಬೀಲ್ ಗೋಯಲ್
ನನ್ನ ಪಾತ್ರವನ್ನು ಈ ಸಿನಿಮಾದಲ್ಲಿ ಸರಿಯಾಗಿ ತೋರಿಸಿಲ್ಲ : ಪಾಕಿಸ್ತಾನದ ಜಮೀಲ್ ಜಮಾಲಿ
ಪಾಕಿಸ್ತಾನ: ಮಾರ್ಚ್ 19 ರಂದು ಬಿಡುಗಡೆಯಾಗಿ ಭಾರತೀಯ ಬಾಕ್ಸ್ ಆಫೀಸ್ನ್ನು ಧೂಳಿಪಟ ಮಾಡಿರುವ ಸಿನಿಮಾ ಎಂದರೆ ಅದು ಧುರಂಧರ್ 2 ದಿ ರಿವೆಂಜ್ ಆಗಿದೆ. ತೆರೆಕಂಡ 13 ನೇ ದಿನವೇ ಸುಮಾರು 1,500 ಕೋಟಿ ಗಳಿಸುವ ಮೂಲಕ ತನ್ನ ನಾಗಾಲೋಟವನ್ನು ಮುಂದುವರೆಸಿದೆ.
ಈ ಸಿನಿಮಾದಲ್ಲಿ ಪಾಕಿಸ್ತಾನವನ್ನು ಉಗ್ರಗಾಮಿಗಳ ದೇಶವೆಂದು, ಅಲ್ಲಿ ಭಯೋತ್ಪಾದಕರನ್ನು ಹುಟ್ಟು ಹಾಕಲಾಗುತ್ತದೆ ಎಂದು ತೋರಿಸಿರುವ ಕಾರಣ ಈ ಸಿನಿಮಾವನ್ನು ಪಾಕಿಸ್ತಾನ ಸರ್ಕಾರ ನಿಷೇಧ ಮಾಡಿದೆ. ಈ ಸಿನಿಮಾದಲ್ಲಿ ತೋರಿಸಿರುವ ಕೆಲ ಪಾತ್ರಗಳು ನೈಜವಾಗಿ ಬದುಕಿದ್ದರೆ, ಇನ್ನೂ ಕೆಲ ಪಾತ್ರಗಳು ಕಾಲ್ಪನಿಕವಾಗಿದ್ದರೂ ಸಹ ಬದುಕಿರುವ ವ್ಯಕ್ತಿಗಳನ್ನು ಬಹಳಷ್ಟು ಹೋಲುವಂತಿದೆ.
ನಾನು ದಾವೂದ್ನ್ನು ಭೇಟಿ ಮಾಡಿಯೇ ಇಲ್ಲ!
ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅಭಿನಯದ ಹಮ್ಜಾ ಅಲಿ ಮಜಾರಿ ಪಾತ್ರ ಮುಖ್ಯ ಭೂಮಿಕೆಯಲ್ಲಿದ್ದರೂ ಸಹ ರಾಕೇಶ್ ಬೇಡಿ ನಟಿಸಿರುವ ಜಮೀಲ್ ಜಮಾಲಿ ಎಂಬ ಪಾತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಖ್ಯಾತಿಯನ್ನು ಪಡೆಯುತ್ತಿದೆ.
ಈ ಪಾತ್ರವು ಪಾಕಿಸ್ತಾನದ ರಾಜಕಾರಣಿ ನಬೀಲ್ ಗಬೋಲ್ (Nabil Gabol on Dhurandhar 2) ಅವರನ್ನು ಬಹಳಷ್ಟು ಹೋಲುತ್ತದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಬೀಲ್ ಗಬೋಲ್, ಸಿನಿಮಾದಲ್ಲಿ ನನ್ನ ಪಾತ್ರವನ್ನು ಬಹಳ ಹಾಸ್ಯಮಯಿಯಾಗಿ ತೋರಿಸಿದ್ದಾರೆ, ಆದರೆ ನಾನು ನನ್ನ ಗಟ್ಟಿತನಕ್ಕೆ ಖ್ಯಾತನಾಗಿದೆ. ಹಾಗೆಯೇ ಈ ಸಿನಿಮಾದಲ್ಲಿ ತೋರಿಸಿದಂತೆ ನಾನೆಂದು ದಾವೂದ್ ಇಬ್ರಾಹಿಂನನ್ನು ಬೇಟಿ ಮಾಡಿಲ್ಲ. ಮತ್ತು ಅವರು ಪಾಕಿಸ್ತಾನದಲ್ಲಿ ಇದ್ದ ಬಗ್ಗೆ ಸಹ ನನಗೆ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಹೆಸರನ್ನು ಹಾಳು ಮಾಡುವ ಉದ್ದೇಶ!
ಅಂದ ಹಾಗೆ ಈ ಸಿನಿಮಾದಲ್ಲಿ ಪಾಕಿಸ್ತಾನವನ್ನು ಕೆಟ್ಟದಾಗಿ ತೋರಿಸಿದ್ದಾರೆ. ಪಾಕಿಸ್ತಾನ ಒಂದು ಭತೋತ್ಪಾದಕ ದೇಶ ಎಂದು ಜನರ ಭಾವನೆ ಬರುವಂತೆ ಮಾಡುವುದು ಈ ಚಿತ್ರದ ಉದ್ದೇಶವಾಗಿದೆ. ಆದರೆ ಈ ಸಿನಿಮಾದಲ್ಲಿ ತೋರಿಸಿರುವುದೆಲ್ಲಾ ನಿಜವಲ್ಲ. ಇಲ್ಲಿ ಕೇವಲ ಅರ್ಧ ಸತ್ಯವನ್ನು ಮಾತ್ರ ತೋರಿಸಲಾಗಿದೆ ಎನ್ನುವುದು ನಬೀಲ್ ಗಬೋಲ್ ಅವರ ಅಭಿಪ್ರಾಯವಾಗಿದೆ.
ಈ ಧುರಂಧರ್ ಸಿನಿಮಾದಲ್ಲಿ ನನ್ನ ಪಾತ್ರವನ್ನು ಸರಿಯಾಗಿ ಚಿತ್ರಿಸಿಲ್ಲ, ಇದು ನನಗೆ ತುಂಬಾ ನೋವಾಗಿದೆ ಎಂದು ಹೇಳಿರುವ ಗಬೋಲ್, ಇನ್ನೇನು ಕೆಲವೇ ತಿಂಗಳುಗಳಲ್ಲಿ ಲಿಯಾರಿ ಕಾ ಗಬ್ಬರ್ ಎನ್ನುವ ಸಿನಿಮಾವನ್ನು ನಿರ್ಮಿಸುತ್ತೆನೆ. ಆ ಸಿನಿಮಾದಲ್ಲಿ ನನ್ನ ಪಾತ್ರ ಹೇಗಿರಲಿದೆ ಎನ್ನುವುದನ್ನು ಜನರಿಗೆ ತೋರಿಸುತ್ತೆನೆ ಎಂದು ಅವರು ಹೇಳಿದ್ದಾರೆ.
ಧುರಂಧರ್ 2 ಬಗ್ಗೆ
ಧುರಂಧರ್ 2 ಇದು ಧುರಂಧರ್ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ರಾಕೇಶ್ ಬೇಡಿ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಡ್ಯಾನಿಶ್ ಇಕ್ಬಾಲ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).