ನನಗೆ ನನ್ನ ಮಗಳೆಂದರೆ ತುಂಬಾ ಭಯ: ಮಗಳು ಆದಿರಾ ಬಗ್ಗೆ ಶಾಕಿಂಗ್ ವಿಷಯ ಬಿಚ್ಚಿಟ್ಟ ನಟಿ ರಾಣಿ ಮುಖರ್ಜಿ! Rani Mukerji

ಬಾಲಿವುಡ್​ ನಟಿ ರಾಣಿ ಮುಖರ್ಜಿ ಮತ್ತು ಮಗಳು ಅದಿರಾ
ಬಾಲಿವುಡ್​ ನಟಿ ರಾಣಿ ಮುಖರ್ಜಿ ಮತ್ತು ಮಗಳು ಅದಿರಾ
Published on

ಪ್ರಮುಖ ಮುಖ್ಯಾಂಶಗಳು

  • ಮಗಳು ಅದಿರಾ ಬಗ್ಗೆ ಮನಬಿಚ್ಚಿ ಮಾತನಾಡಿದ ರಾಣಿ ಮುಖರ್ಜಿ
  • ನನ್ನ ಮಗಳು ನನ್ನ ಅತಿದೊಡ್ಡ ಚಿಯರ್‌ಲೀಡರ್
  • ನಾನು ಅವಳಿಗೆ ಹೊಡಿಯಲು ಹೆದರುತ್ತೇನೆ
ಬಾಲಿವುಡ್​: ಬಾಲಿವುಡ್​ನ ಖ್ಯಾತ ನಟಿ ರಾಣಿ ಮುಖರ್ಜಿ (Rani Mukerji) ಇತ್ತಿಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ 10 ವರ್ಷದ ಮಗಳು ಆದಿರಾ ಚೋಪ್ರಾ ಅವರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ರಾಣಿ ಮುಖರ್ಜಿ ಅದಿರಾ ಅವರನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಮಾತನಾಡಿದ ಅವರು ತಾವು ಬೆಳೆದ ಬಾಲ್ಯಕ್ಕೂ, ತನ್ನ ಮಗಳು ಬೆಳೆಯುತ್ತಿರುವ ಬಾಲ್ಯಕ್ಕೂ ಆಕಾಶ ಭೂಮಿಯ ವ್ಯತ್ಯಾಸವಿದೆ. ನಾನು ಏನಾದರೂ ತಪ್ಪು ಮಾಡಿದರೆ ಅವಳು ನನಗೆ ಬಯ್ಯುತ್ತಾಳೆ. ನಾನು ಅವಳು ಬಯ್ಯುವುದನ್ನು ಕೇಳಿಸಿಕೊಳ್ಳುತ್ತೇನೆ.
ನಾನು ಅವಳ ಮಾತನ್ನು ಕೇಳಲು ಇಷ್ಟಪಡುತ್ತೇನೆ, ಏಕೆಂದರೆ ಪ್ರತಿ ಪೀಳಿಗೆಯೂ ಬದಲಾಗುತ್ತದೆ. ನಾನು ನನ್ನ ಬಾಲ್ಯದಲ್ಲಿ ನನ್ನ ತಾಯಿ ಹತ್ತಿರ ಬಹಳ ಏಟನ್ನು ತಿಂದಿದ್ದೇನೆ. ಆದರೆ ನಾನು ಇಂದು ನನ್ನ ಮಗಳಿಗೆ ಹೊಡೆಯುವ ಯೋಚನೆ ಮಾಡುವುದಿಲ್ಲ. ಏಕೆಂದರೆ ಅವಳು ನನಗೆ ತಿರುಗಿ ಹೊಡೆಯುವ ಸಾಧ್ಯತೆ ಇದೆ. ಅವಳು ಆಲ್ಫಾ ಪೀಳಿಗೆಯ ಮಗುವಾಗಿರುವ ಕಾರಣ ನಾನು ಅವಳಿಗೆ ತುಂಬಾ ಹೆದರುತ್ತೇನೆ ಎಂದು ರಾಣಿ ಹೇಳಿದರು.
ಮಿಸ್​ ಚಟರ್ಜಿ vs ನಾರ್ವೆ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಸಂದರ್ಭವನ್ನು ನೆನಪಿಸಿಕೊಂಡ ರಾಣಿ, ನನಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಾಗ ನನ್ನ ಮಗಳು ಮನೆಯೊಳಗೆ ಹಾರುತ್ತಿದ್ದರು. ಇದು ನನಗೆ ತುಂಬಾ ಸಂತೋಷವನ್ನು ನೀಡಿತು ಎಂದರು.

ನನ್ನ ಮಗಳು ನನ್ನ ಅತಿದೊಡ್ಡ ಚಿಯರ್‌ಲೀಡರ್

ನಾನು ನನ್ನ ತಂದೆ ರಾಮ್ ಮುಖರ್ಜಿ ಅವರಿಂದ ನನ್ನ ಕೆಲಸದ ಬಗ್ಗೆ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಈಗ ಅವರು ಜೀವಂತವಾಗಿಲ್ಲ, ಇದು ನನ್ನಲ್ಲಿ ಶೂನ್ಯತೆಯನ್ನು ಉಂಟುಮಾಡಿತ್ತು ಎಂದು ಭಾವನಾತ್ಮಕವಾಗಿ ಮಾತನಾಡಿದರು. ಅದರೆ ಈಗ ನನ್ನ ತಂದೆಯ ಜಾಗವನ್ನು ನನ್ನ ಮಗಳು ತುಂಬುತ್ತಿದ್ದು, ಇಂದು ಅವಳು ನನ್ನ ಅತಿದೊಡ್ಡ ಚಿಯರ್‌ಲೀಡರ್ ಆಗಿದ್ದಾಳೆ ಎಂದರು.

ಮೇಕಪ್​ ತೆಗೆದ ತಾಯಿಯೇ ಅಚ್ಚುಮೆಚ್ಚು

ಅದಿರಾ ನನ್ನನ್ನು ಸಿನಿಮಾ ನಟಿ ಎನ್ನುವುದಕ್ಕಿಂತ ಅಮ್ಮನಾಗಿಯೇ ನೋಡಲು ಇಷ್ಟಪಡುತ್ತಾಳೆ. ನನ್ನ ಮಗಳಿಗೆ ನಾನು ಮೇಕಪ್​ ಮಾಡಿಕೊಳ್ಳುವುದು ಇಷ್ಟವಾಗುವುದಿಲ್ಲ. ನಾನು ಮೇಕಪ್ ಹಾಕಿಕೊಂಡಾಗ, ಅಮ್ಮಾ, ನೀವು ನನ್ನ ತಾಯಿಯಂತೆ ಕಾಣುತ್ತಿಲ್ಲ ಎಂದು ಹೇಳುತ್ತಾಳೆ. ಮೇಕಪ್ ತೆಗೆದರೆ ನನ್ನ ತಾಯಿಯಂತೆ ನೀವು ಕಾಣುತ್ತಿರಿ ಎಂದು ಎನ್ನತ್ತಾಳೆ ಎಂದು ರಾಣಿ ಹೇಳಿದಳು.
ರಾಣಿ ಮುಖರ್ಜಿ ಏಪ್ರಿಲ್ 21, 2014 ರಂದು ನಿರ್ಮಾಪಕ ಆದಿತ್ಯ ಚೋಪ್ರಾ ಅವರನ್ನು ವಿವಾಹವಾದರು ಮತ್ತು ದಂಪತಿಗಳು ಡಿಸೆಂಬರ್ 9, 2015 ರಂದು ಆದಿರಾ ಅವರನ್ನು ಸ್ವಾಗತಿಸಿದರು. ಮಗಳನ್ನು ಮಾಧ್ಯಮಗಳಿಂದ ದೂರವಿಡುವ ಮೂಲಕ ಅವಳಿಗೆ ಸಾಮಾನ್ಯ ಬಾಲ್ಯವನ್ನು ನೀಡುವ ಉದ್ದೇಶದಿಂದ, ಇಲ್ಲಿಯ ವರೆಗೆ ಮಗಳಿನ ಮುಖವನ್ನು ಜನರಿಗೆ ಬಹಿರಂಗಪಡಿಸಿಲ್ಲ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net