ನಾನೀಗ ಡಿಸ್ಚಾರ್ಜ್ ಆಗಿದ್ದೇನೆ ಮತ್ತು ಮನೆಗೆ ಮರಳಿದ್ದೇನೆ : ಶಸ್ತ್ರಚಿಕಿತ್ಸೆ ಬಳಿಕ ಕಿರಣ ರಾವ್ ಮೊದಲ ಪ್ರತಿಕ್ರಿಯೆ | Kiran Rao

Kiran Rao
Kiran Rao
Published on
ಮುಂಬೈ: ಇತ್ತೀಚೆಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ (Kiran Rao) ಇನ್ಸ್ಟಾಗ್ರಾಮ್​ನಲ್ಲಿ ತಾವಿರುವ ಆಸ್ಪತ್ರೆಯ ಕೆಲ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಆಧುನಿಕ ವೈದ್ಯಕೀಯ ವಿಜ್ಞಾನದ ಸಹಾಯದಿಂದ ಸುಮಾರು 12 mm ವ್ಯಾಸದ ಅಪೆಂಡಿಕ್ಸ್ ಹೊರಬಂದಿದೆ. ಇದು ಹೇಗೆ ಬಂತು ಅಂದು ಗೊತ್ತಾಗದ ಹಾಗೆ ನನ್ನನ್ನು ಪರೀಕ್ಷಿಸಿದ ಡಾ. ಕಾಯೋಮರ್ಜ್ ಕಪಾಡಿಯಾ ಮತ್ತು ಇಡೀ ಶಸ್ತ್ರಚಿಕಿತ್ಸಾ ತಂಡ, ನನ್ನ ಜತೆಗಿದ್ದ ಇರಾ, ಪೊಪೆಯ್ ಮತ್ತು ಶೆಫಾಲಿ ಮತ್ತು ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಆರೈಕೆಗಳಿಗೆ ನಾನು ಆಭಾರಿ ಎಂದು ಬರೆದುಕೊಂಡಿದ್ದಾರೆ.
ನನ್ನ ಸ್ನೇಹಿತರು ಮತ್ತು ಕುಟುಂಬದವರಾದ ಆಮೀರ್, ಚಾರ್ಲ್ಸ್ ಮತ್ತು ಅಮೀನ್ ಇವರಿಗೂ ಧನ್ಯವಾದಗಳು ಎಂದು ಕಿರಣ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ನಾನು ಈಗ ಡಿಸ್ಚಾರ್ಜ್ ಆಗಿದ್ದೇನೆ ಮತ್ತು ಮನೆಗೆ ಮರಳಿದ್ದೇನೆ. ಹೊಸ ವರ್ಷಕ್ಕೆ ನನ್ನನ್ನು ನಿರಾಳಗೊಳಿಸಲು ಸಿದ್ಧನಾಗಿದ್ದೇನೆ. 2025 ನನಗೆ ನನಗೆ ಒಳ್ಳೆಯದಾಗಿದೆ, ಮತ್ತು 2026 ಎಲ್ಲರಿಗೂ ದಯೆ, ವಿನೋದ, ಪ್ರೀತಿಯಿಂದ ತುಂಬಿರಲಿ ಎಂದು ಆಶಿಸುತ್ತೇನೆಂದು ಹೇಳಿದ್ದಾರೆ.
ಕಿರಣ್ ರಾವ್ ಬಗ್ಗೆ
ಕಿರಣ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಲಗಾನ್ (2001) ಚಿತ್ರದ ಸೆಟ್‌ನಲ್ಲಿ ಅಮೀರ್ ಖಾನ್​ ಪರಿಚಯವಾಯಿತು. ನಂತರ ಡಿಸೆಂಬರ್ 28, 2005 ರಂದು ಆಮೀರ್ ಖಾನ್ ಮತ್ತು ಕಿರಣ್ ರಾವ್ ಮುಂಬೈ ಮನೆಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಜುಲೈ 2021 ರಲ್ಲಿ, ದಂಪತಿಗಳು ಜಂಟಿ ಹೇಳಿಕೆಯಲ್ಲಿ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದರು. 2024 ರಲ್ಲಿ, ಕಿರಣ್ ಅವರ ಚಲನಚಿತ್ರ ಲಾಪಾಟಾ ಲೇಡೀಸ್ ಅನ್ನು 97 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆ ಮಾಡಲಾಗಿತ್ತು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net