ಹೃತಿಕ್ ಫಿಟ್‌ನೆಸ್ ಫುಡ್ ನೋಡಿ ಫ್ಯಾನ್ಸ್ ಶಾಕ್: ಇದು ಸಾಮಾನ್ಯ ಸಲಾಡ್ ಅಲ್ಲಪ್ಪಾ! Hrithik Roshan

ಚಿತ್ರ Instagram
ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಹೃತಿಕ್ ರೋಷನ್ ಅಸಾಧಾರಣ ಫಿಟ್​ನೆಸ್​ ಮತ್ತು ಚುರುಕಾದ ಮೈಕಟ್ಟಿಗೆ ಹೆಸರುವಾಸಿಯಾದ ನಟ
  • ತಮ್ಮ ವ್ಯಾಯಾಮದ ನಂತರ ಸೇವಿಸುವ ತಮ್ಮ ಆಹಾರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ
  • ಸಾಮಾನ್ಯವಾಗಿ ತಮ್ಮ ದೇಹವನ್ನು ಕಾಪಾಡಿಕೊಳ್ಳುವ ನಟರು ಸದಾ ಬ್ರೊಕೊಲಿ, ಚಿಕನ್ ಬ್ರೆಸ್ಟ್ ಅಥವಾ ಪ್ರೋಟೀನ್ ಶೇಕ್‌ಗಳನ್ನೇ ಸೇವಿಸುತ್ತಾರೆ
  • ಹೃತಿಕ್​ ತಮ್ಮ ಊಟದಲ್ಲಿ ಜೋಳದ ರೊಟ್ಟಿ, ಬೆಂಡೆಕಾಯಿ, ಬೀಟ್‌ರೂಟ್, ಬದನೆಕಾಯಿ, ಸೋರೆಕಾಯಿ ಸೇರಿಸಿಕೊಂಡಿದ್ದಾರೆ
Hrithik Roshan: ಬಾಲಿವುಡ್‌ನ 'ಗ್ರೀಕ್ ಗಾಡ್' ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ ಅಸಾಧಾರಣ ಫಿಟ್​ನೆಸ್​ ಮತ್ತು ಚುರುಕಾದ ಮೈಕಟ್ಟಿಗೆ ಹೆಸರುವಾಸಿಯಾದ ನಟ. ಇತ್ತೀಚೆಗೆ ತಮ್ಮ ವ್ಯಾಯಾಮದ ನಂತರ ಸೇವಿಸುವ ತಮ್ಮ ಆಹಾರದ ಬಗ್ಗೆ ಒಂದು ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.
ಸಾಮಾನ್ಯವಾಗಿ ತಮ್ಮ ದೇಹವನ್ನು ಕಾಪಾಡಿಕೊಳ್ಳುವ ನಟರು ಸದಾ ಬ್ರೊಕೊಲಿ, ಚಿಕನ್ ಬ್ರೆಸ್ಟ್ ಅಥವಾ ಪ್ರೋಟೀನ್ ಶೇಕ್‌ಗಳನ್ನೇ ಸೇವಿಸುತ್ತಾರೆ ಎಂಬ ನಂಬಿಕೆ ಇದೆ. ಆದರೆ ಹೃತಿಕ್ ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ "ವ್ಯಾಯಾಮದ ನಂತರದ ಊಟ" ಎಂದರೆ ಅದು ಬೋರಿಂಗ್ ಆಗಿರಬೇಕಿಲ್ಲ ಎಂದು ಸಾಬೀತುಪಡಿಸಿದ್ದಾರೆ.

ವಿಡಿಯೋದಲ್ಲೇನಿದೆ?

ನಟ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ತಟ್ಟೆಯಲ್ಲಿರುವ ಆಹಾರಗಳ ವಿಡಿಯೋ ಹಂಚಿಕೊಂಡಿದ್ದು, ಇದು ವ್ಯಾಯಾಮದ ನಂತರ ಅತ್ಯಂತ ಅಸಂಭವ ಊಟ ಎಂದು ವಿವರಿಸಿದ್ದಾರೆ.
ಜಿಮ್-ಡಯಟ್‌ನಲ್ಲಿ ಸಾಮಾನ್ಯವಾಗಿ ದೊರೆಯುವ ಆಹಾರ ಪದಾರ್ಥಗಳ ಬದಲಿಗೆ, ಹೃತಿಕ್​ ತಮ್ಮ ಊಟದಲ್ಲಿ ಜೋಳದ ರೊಟ್ಟಿ, ಬೆಂಡೆಕಾಯಿ, ಬೀಟ್‌ರೂಟ್, ಬದನೆಕಾಯಿ, ಪಾಪಡಿ, ಸೋರೆಕಾಯಿ, ಮೊಟ್ಟೆಯ ಬಿಳಿ ಭಾಗ ಮತ್ತು ದಾಲ್ ಸೇರಿಸಿಕೊಂಡಿದ್ದಾರೆ. ಇದು ದೇಹಕ್ಕೆ ಪೌಷ್ಟಿಕಾಂಶವನ್ನು ನೀಡುವುದರ ಜೊತೆಗೆ ಸ್ನಾಯುಗಳನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ.
ಹೃತಿಕ್ ತಟ್ಟೆಯಲ್ಲಿರುವ ಆಹಾರವನ್ನು ತಮಾಷೆಯಾಗಿ "ಇಂಡಿಯನ್ ಮಿಶ್‌ಮ್ಯಾಶ್ ಎಂದು ಕರೆದಿದ್ದಾರೆ. ಅಂದರೆ, ಇದು ವಿದೇಶಿ ಡಯಟ್​ನಿಂದ ಬರುವ ಆಹಾರವೇನಲ್ಲ. ಬದಲಿಗೆ ನಮಗೆಲ್ಲರಿಗೂ ಪರಿಚಿತವಿರುವ ಸ್ಥಳೀಯ ರುಚಿಗಳ ಸಮ್ಮಿಶ್ರಣವಾಗಿದೆ. ಆದಾಗ್ಯೂ, ತಮ್ಮ ಶೀರ್ಷಿಕೆಯಲ್ಲಿ ವ್ಯಾಯಾಮದ ನಂತರದ ಅತ್ಯಂತ ಅಸಂಭವ ಊಟ? ಎಂದು ಬರೆದುಕೊಂಡಿದ್ದಾರೆ.
ಜೋಳದ ರೊಟ್ಟಿ, ಬೆಂಡೆಕಾಯಿ, ಬೀಟ್ರೂಟ್, ಬದನೆಕಾಯಿ, ಪಾಪಡಿ, ಸೋರೆಕಾಯಿ ಮತ್ತು ಮೊಟ್ಟೆಯ ಬಿಳಿ ಭಾಗ, ದಾಲ್ ನನ್ನ ನೆಚ್ಚಿನ ಖಾದ್ಯಗಳಲ್ಲಿ ಒಂದಾಗಿದೆ. ನಿಮಗೆ ಯಾವ ವಿಚಿತ್ರವಾದ ಆಹಾರದ ಹಂಬಲವಿದೆ ಎಂದು ಕೇಳಿದ್ದಾರೆ.
ಈ ಪೋಸ್ಟ್ ಅಭಿಮಾನಿಗಳಿಗೆ ನಟನ ಫಿಟ್‌ನೆಸ್ ರಹಸ್ಯದ ಬಗ್ಗೆ ಒಂದು ನೋಟವನ್ನು ನೀಡಿದ್ದಲ್ಲದೇ, ಆಧುನಿಕ ಜಿಮ್ ಆಹಾರದ ಮಾನದಂಡಗಳ ಪ್ರಕಾರ "ಅಸಂಭವ ಆಹಾರ ಎಂದು ತೋರಿಸಿತು. ಆದಾಗ್ಯೂ, ತೀವ್ರವಾದ ವ್ಯಾಯಾಮದ ನಂತರ ಸಮತೋಲಿತ ಮನೆಯ ಆಹಾರವು ಚೇತರಿಕೆಗೆ ಹೇಗೆ ಸಹಾಯ ಮಾಡಿದೆ ಎಂಬುದನ್ನು ಎತ್ತಿ ತೋರಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net