ಮಕ್ಕಳಿಗೆ ಪ್ರಶಸ್ತಿ ನೀಡುವಾಗ ಹೇಮಾ ಮಾಲಿನಿ ಗರಂ? ಸಂಸದೆಯ ಮುಖಭಾವಕ್ಕೆ ನೆಟ್ಟಿಗರಿಂದ ಫುಲ್ ಟ್ರೋಲ್! Hema Malini

ಮಕ್ಕಳಿಗೆ ಪದಕ ವಿತರಿಸುತ್ತಿರುವ ಹೇಮಾ ಮಾಲಿನಿ
ಮಕ್ಕಳಿಗೆ ಪದಕ ವಿತರಿಸುತ್ತಿರುವ ಹೇಮಾ ಮಾಲಿನಿ
Published on

ಪ್ರಮುಖ ಮುಖ್ಯಾಂಶಗಳು

  • ನಟಿ, ಸಂಸದೆ ಹೇಮಾ ಮಾಲಿನಿ ಮಕ್ಕಳಿಗೆ ಪದಕ ವಿತರಣೆ ಮಾಡುತ್ತಿರುವ ವಿಡೊಯೋ ವೈರಲ್​
  • ನಟಿಯ ತಟಸ್ಥ ಮುಖಭಾವಕ್ಕೆ ಜನ ಗರಂ
  • ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್​ ಆಗುತ್ತಿರುವ ಹೇಮಾ ಮಾಲಿನಿ
ಮಥುರಾ: ಇತ್ತೀಚೆಗೆ ಬಾಲಿವುಡ್​ನ ಖ್ಯಾತ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ (Hema Malini) ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಕ್ಕಳಿಗೆ ಪ್ರಶಸ್ತಿ ವಿತರಿಸುವಾಗ ಹಿರಿಯ ನಟಿ ತೋರಿದ ಮುಖಭಾವಕ್ಕೆ ನೆಟ್ಟಿಗರು ತೀವ್ರ ಟೀಕೆ ಮಾಡುತ್ತಿದ್ದಾರೆ.
ಈ ವಿಡಿಯೋದಲ್ಲಿ, ಹೇಮಾ ಮಾಲಿನಿ ಆಟಗಾರರನ್ನು ಅಭಿನಂದಿಸದೆ ಮತ್ತು ಕೈಕುಲುಕದೆ ತಟಸ್ಥ ಮುಖಭಾವದಿಂದ ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡುತ್ತಿರುವುದನ್ನು ಕಾಣಬಹುದು. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅವರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ, ಇದು ಆನ್‌ಲೈನ್‌ನಲ್ಲಿ ಟ್ರೋಲಿಂಗ್ ಮತ್ತು ನಕಾರಾತ್ಮಕ ಕಾಮೆಂಟ್‌ಗಳ ಅಲೆಯನ್ನು ಹುಟ್ಟುಹಾಕಿದೆ.
ಪದಕಗಳನ್ನು ನೀಡುವಾಗ ಅವರ ಮುಖದಲ್ಲಿ ಯಾವುದೇ ಸಂತೋಷ ಭಾವ ಇರದೆ ಇರುವುದು ಮತ್ತು ಯಾವುದೇ ಆಟಗಾರರನ್ನು ಅಭಿನಂದಿಸದಿರುವುದು ಜನರ ಕೋಪಕ್ಕೆ ಕಾರಣವಾಗಿದೆ. ವಿಡಿಯೋದ ಕೆಳಗಿನ ಕಮೆಂಟ್​ ವಿಭಾಗದಲ್ಲಿ ನೆಟ್ಟಿಗರು ಹೇಮಾ ಮಾಲಿನಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಒಬ್ಬ ವ್ಯಕ್ತಿ, ಪ್ರಶಸ್ತಿಯನ್ನು ಇವಳ (ಹೇಮಾ ಮಾಲಿನಿ) ಬದಲಿಗೆ ಅವರ ಪಾಲಕರಿಂದ ಕೊಡಿಸಿದ್ದರೆ ಕನಿಷ್ಟ ಮಕ್ಕಳಾದರು ಖುಷಿ ಪಡುತ್ತಿದ್ದರು ಎಂದು ಬರೆದಿದ್ದಾರೆ.
ಇನ್ನೊಬ್ಬ ವ್ಯಕ್ತಿಯು ಜನರ ಮೇಲೆ ಆಗ್ಗಾಗೆ ಕೋಪಗೊಳ್ಳುವ ಜಯಾ ಬಚ್ಚನ್ ಅವರಿಗೆ ಹೋಲಿಸಿ ಹೇಮಾ ಮಾಲಿನಿ, ಜಯಾ ಬಚ್ಚನ್ ತಂಗಿ ಎಂದು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬ ವ್ಯಕ್ತಿಯು, ಪಾಪಾ ಆ ಮಕ್ಕಳು ಅಷ್ಟು ಕಷ್ಟ ಪಟ್ಟು ಆಟವಾಡಿ ಜಯಶಾಲಿಗಳಾಗಿದ್ದಾರೆ, ನೀವು ಸ್ವಲ್ಪ ನಕ್ಕರೆ ನಿಮ್ಮ ದುಡ್ಡೇನು ಖರ್ಚಾಗುವುದಿಲ್ಲ ಎಂದು ಹೇಳಿದ್ದಾರೆ.
ಆದಾಗ್ಯೂ, ಕೆಲವು ಬಳಕೆದಾರರು ಹಿರಿಯ ನಟಿಯನ್ನು ಸಮರ್ಥಿಸಿಕೊಂಡಿದ್ದು, ಅವರು ತಮ್ಮ ಪತಿ, ನಟ ಧರ್ಮೇಂದ್ರ ಅವರನ್ನು ಕಳೆದುಕೊಂಡು ದುಃಖಿತರಾಗಿರಬಹುದು ಎಂದು ಹೇಳಿದ್ದಾರೆ. ಧರ್ಮೇಂದ್ರ ಅವರ ಮರಣದ ನಂತರ, ಎರಡು ಪ್ರತ್ಯೇಕ ಪ್ರಾರ್ಥನಾ ಸಭೆಗಳನ್ನು ನಡೆಸಲಾಗಿದ್ದು, ಒಂದನ್ನು ಅವರ ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಮತ್ತು ಅವರ ತಾಯಿ ಪ್ರಕಾಶ್ ಕೌರ್ ಆಯೋಜಿಸಿದ್ದರು.
ಇನ್ನೊಂದನ್ನು ಪ್ರಾರ್ಥನಾ ಸಭೆಯನ್ನು ಹೇಮಾ ಮಾಲಿನಿ ತಮ್ಮ ಪುತ್ರಿಯರಾದ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರೊಂದಿಗೆ ಆಯೋಜಿಸಿದ್ದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net