ಬಾಲಿವುಡ್ ನಟ ಧರ್ಮೇಂದ್ರ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸಿದ್ದಾರೆ
ವದಂತಿ ಬೆನ್ನಲ್ಲೇ ಪತ್ನಿ ಧರ್ಮೇಂದ್ರ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ
ಆರೋಗ್ಯ ವಿಚಾರದಲ್ಲಿ ನಡೆಯುತ್ತಿರುವಂತಹ ವದಂತಿಗಳು ಕ್ಷಮಿಸಲು ಸಾಧ್ಯವಿಲ್ಲ
ದಯವಿಟ್ಟು ಕುಟುಂಬಕ್ಕೆ ಮತ್ತು ಗೌಪ್ಯತೆಯ ಅಗತ್ಯಕ್ಕೆ ಸರಿಯಾದ ಗೌರವ ನೀಡಿ
ಮುಂಬೈ: ಬಾಲಿವುಡ್ ನಟ ಧರ್ಮೇಂದ್ರ ಅವರು ಸಾವನ್ನಪ್ಪಿದ್ದಾರೆ ಎನ್ನುವ ಸುದ್ಧಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಈ ವದಂತಿ ಬೆನ್ನಲ್ಲೇ ಪತ್ನಿ ಹೇಮಾ ಮಾಲಿನಿ ತಮ್ಮ ಪತಿ ನಟ ಧರ್ಮೇಂದ್ರ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ (Actor Dharmendra) ಹರಿದಾಡುತ್ತಿವೆ ಎಂದು ಸ್ಪಷ್ಟನೆ ಮಂಗಳವಾರ (ನ.11) ನೀಡಿದ್ದಾರೆ.
ಧರ್ಮೇಂದ್ರ (89) ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಮಾ ಮಾಲಿನಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಧರ್ಮೇಂದ್ರ ಅವರ ಆರೋಗ್ಯ ವಿಚಾರದಲ್ಲಿ ನಡೆಯುತ್ತಿರುವಂತಹ ವದಂತಿಗಳು ಕ್ಷಮಿಸಲು ಸಾಧ್ಯವಿಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಚಾನೆಲ್‌ಗಳು ಈ ರೀತಿಯಾಗಿ ಸುಳ್ಳು ಸುದ್ದಿಯನ್ನು ಹೇಗೆ ಹರಡುತ್ತಿವೆ. ಇದು ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿಯಾಗಿದೆ. ದಯವಿಟ್ಟು ಕುಟುಂಬಕ್ಕೆ ಮತ್ತು ಗೌಪ್ಯತೆಯ ಅಗತ್ಯಕ್ಕೆ ಸರಿಯಾದ ಗೌರವ ನೀಡಿ ಎಂದು ಬರೆದಿದ್ದಾರೆ.
ಧಮೇಂದ್ರ ಅವರ ಮಗಳು ಇಶಾ ಡಿಯೋಲ್ ಹೇಳಿಕೆಯ ಬೆನ್ನಲ್ಲೇ, ನಟಿ ಹೇಮಾ ಮಾಲಿನಿ ಪ್ರತಿಕ್ರಿಯಿಸಿದ್ದು, ಸಾವಿನ ವರದಿ ಸಂಪೂರ್ಣ ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳು ಅತಿರೇಕದಲ್ಲಿದ್ದು ಸುಳ್ಳು ಸುದ್ದಿಗಳನ್ನು ಹರಡುತ್ತಿರುವಂತೆ ಕಾಣುತ್ತಿವೆ. ನನ್ನ ತಂದೆಯ ಆರೋಗ್ಯ ಸ್ಥಿರವಾಗಿದೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬದವರಿಗೆ ಗೌಪ್ಯತೆ ನೀಡಿ ಎಂದು ಈ ಮೂಲಕ ವಿನಂತಿಸುತ್ತಿದ್ದೇನೆ. ಅಪ್ಪನ ಶೀಘ್ರ ಚೇತರಿಕೆಯ ಬಗ್ಗೆ ಪ್ರಾರ್ಥಿಸಿದವರಿಗೆ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದರು.
ತಡ ರಾತ್ರಿ ಧಮೇಂದ್ರ ಅವರ ಆರೋಗ್ಯದ ಬಗ್ಗೆ ಪತ್ನಿ ಹೇಮಾ ಅವರು ಹಂಚಿಕೊಂಡಿದ್ದು, ಆಸ್ಪತ್ರಗೆ ದಾಖಲಾಗಿರುವ ಧಮೇಂದ್ರ ಅವರ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಾವೆಲ್ಲರೂ ಅವರೊಂದಿಗೆ ಇದ್ದೇವೆ. ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಲು ನಿಮ್ಮೆಲ್ಲರ ಪ್ರಾರ್ಥನೆ ಅಗತ್ಯ ಎಂದು ಬರೆದಿದ್ದರು.
ಸೋಮವಾರ ಧಮೇಂದ್ರ ಅವರ ಮೊದಲ ಪತ್ನಿ ಹಾಗೂ ಅವರ ಮಗ ಸನ್ನಿ ಡಿಯೋಲ್ ಧರ್ಮೇಂದ್ರ ಸ್ಥಿರವಾಗಿದ್ದಾರೆ. ಆರೋಗ್ಯದ ಬಗ್ಗೆ ನವೀಕರಣಗಳು ಲಭ್ಯವಿರುವಂತೆ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ದಯವಿಟ್ಟು, ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ಧಿಗಳನ್ನು ಹರಡಬೇಡಿ. ಶೀರ್ಘರ ಚೇತರಿಕೆಗಾಗಿ ಪ್ರಾರ್ಥಿಸಿರಿ ಎಂದು ಹೇಳಿಕೆ ನೀಡಿದ್ದರು.
ಧರ್ಮೇಂದ್ರ ಅವರಿಗೆ ವೆಂಟಿಲೇಟರ್ ಬೆಂಬಲ ನೀಡಲಾಗುತ್ತಿದೆ ಎಂದು ಕುಟುಂಬದ ಆಪ್ತ ಮೂಲಗಳು ಸುದ್ಧಿ ಮೂಲಗಳಿಗೆ ಮಾಹಿತಿ ನೀಡಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿತ್ತು.
ಧರ್ಮೇಂದ್ರ ಅವರ ಅನಾರೋಗ್ಯದ ಬಗ್ಗೆ ಸುದ್ದಿ ತಿಳಿದ ಕೂಡಲೇ ಹೇಮಾ ಮಾಲಿನಿ, ಸನ್ನಿ ಡಿಯೋಲ್, ಬಾಬಿ ಡಿಯೋಲ್ ಸೇರಿದಂತೆ ಅವರ ಕುಟುಂಬ ಸದಸ್ಯರು ಮತ್ತು ಚಲನಚಿತ್ರ ತಾರೆಯರಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಗೋವಿಂದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದಾರೆ. (ಏಜೆನ್ಸೀಸ್)