ತಮನ್ನಾಗೆ ಶಾಕ್ ಕೊಟ್ಟ ವಿಜಯ್...ಪ್ರೇಮಿಗಳ ದಿನದಂದೇ ಹೊಸ ಹುಡುಗಿ ಪರಿಚಯಿಸಿದ ಬಾಲಿವುಡ್​ ನಟ! Tamannaah Bhatia

ತಮನ್ನಾಗೆ ಶಾಕ್ ಕೊಟ್ಟ ವಿಜಯ್ ವರ್ಮಾ ( Tamannaah Bhatia )
ತಮನ್ನಾಗೆ ಶಾಕ್ ಕೊಟ್ಟ ವಿಜಯ್ ವರ್ಮಾ ( Tamannaah Bhatia )
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ ನಟ ವಿಜಯ್​ ವರ್ಮಾ ಜತೆ ನಟ ತಮನ್ನಾ ಹೆಸರು ಕೇಳಿಬರುತ್ತಿತ್ತು
  • ಇಬ್ಬರು ಜತೆಯಾಗಿಯೇ ಓಡಾಡುವ ಮೂಲಕ ವದಂತಿಗೆ ಪುಷ್ಠಿ ನೀಡಿದ್ದರು
  • ಕೆಲವು ತಿಂಗಳುಗಳ ಹಿಂದೆ ಇಬ್ಬರ ಬ್ರೇಕಪ್​ ಸುದ್ದಿಯು ಕೂಡ ಹೊರಬಿತ್ತು
  • ಇದೀಗ ವಿಜಯ್ ವರ್ಮಾ ಅಪರಿಚಿತ ಯುವತಿಯೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ
ಮುಂಬೈ: ಸಿನಿಮಾ ರಂಗದಲ್ಲಿ ಬರೋಬ್ಬರಿ 20 ವರ್ಷ ಪೂರೈಸಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ( Tamannaah Bhatia ), ಇಂದಿಗೂ ಸ್ಟಾರ್​ ನಟಿಯರಲ್ಲಿ ಒಬ್ಬರೆನೆಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ನಾಯಕಿಯರ ಆಯಸ್ಸು ಕಡಿಮೆ ಎನ್ನುವ ಮಾತಿದೆ. ಆದರೆ, 20 ವರ್ಷ ಪೂರೈಸಿದರೂ ಅದೇ ಬೇಡಿಕೆ ಉಳಿಸಿಕೊಂಡಿರುವ ತಮನ್ನಾ ಆ ಮಾತನ್ನು ಸುಳ್ಳು ಮಾಡಿದ್ದಾರೆ. ಹಿಂದಿ, ತೆಲುಗು, ತಮಿಳು ಮತ್ತು ಇತರ ಭಾಷೆಗಳಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದು, ಬಹುಭಾಷಾ ನಾಯಕಿ ಎನಿಸಿಕೊಂಡಿದ್ದಾರೆ. ಆದರೆ, ಕನ್ನಡದಲ್ಲಿ ಒಂದೇ ಒಂದು ಚಿತ್ರದಲ್ಲಿ ನಟನೆ ಮಾಡದಿದ್ದರೂ ನಿಖಿಲ್​ ಕುಮಾರಸ್ವಾಮಿ ನಟನೆಯ ಮೊದಲ ಸಿನಿಮಾ ಜಾಗ್ವಾರ್​ ಮತ್ತು ಯಶ್​ ನಟನೆಯ ಕೆಜಿಎಫ್​ 1 ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಇನ್ನು ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ಡೇಟಿಂಗ್​ ವಿಚಾರದಲ್ಲೂ ತಮನ್ನಾ ಸದ್ದು ಮಾಡಿದ್ದಾರೆ. ಈ ಹಿಂದೆ ಟೀಮ್​ ಇಂಡಿಯಾ ಸ್ಟಾರ್​ ಕ್ರಿಕೆಟರ್​ ವಿರಾಟ್​ ಕೊಹ್ಲಿ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಅಬ್ದುಲ್ ರಜಾಕ್ ಜತೆ ತಮನ್ನಾ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ, ಅದು ವದಂತಿಯಾಗಿ ಮರೆಯಾಯಿತು. ಕಳೆದ ಎರಡು ವರ್ಷಗಳಿಂದ ಬಾಲಿವುಡ್​ ನಟ ವಿಜಯ್​ ವರ್ಮಾ ಜತೆ ತಮನ್ನಾ ಹೆಸರು ಕೇಳಿಬರುತ್ತಿತ್ತು. ಇಬ್ಬರು ಜತೆಯಾಗಿಯೇ ಓಡಾಡುವ ಮೂಲಕ ವದಂತಿಗೆ ಪುಷ್ಠಿ ನೀಡಿದ್ದರು. ಅನೇಕ ಸಂದರ್ಭಗಳಲ್ಲಿ ಇಬ್ಬರು ಪರೋಕ್ಷವಾಗಿಯೂ ಮಾತನಾಡಿದ್ದರು. ಇಬ್ಬರು ಮದುವೆ ಆಗುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿತ್ತು. ಇದರ ನಡುವೆ ಕೆಲವು ತಿಂಗಳುಗಳ ಹಿಂದೆ ಇಬ್ಬರ ಬ್ರೇಕಪ್​ ಸುದ್ದಿಯು ಕೂಡ ಹೊರಬಿತ್ತು. ಅಲ್ಲದೆ, ತಮನ್ನಾ ಕೂಡ ವಿಜಯ್​ ವರ್ಮಾರಿಂದ ಅಂತರ ಕಾಯ್ದುಕೊಂಡಿದ್ದು, ಬ್ರೇಕಪ್​ ಸುದ್ದಿ ಖಚಿತವಾಗಿದೆ.
ತಾಜಾ ಸಂಗತಿ ಏನೆಂದರೆ, ನಟ ವಿಜಯ್​ ವರ್ಮಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ಫೋಟೋವೊಂದು ಬ್ರೇಕಪ್​ ಸುದ್ದಿಗೆ ಅಧಿಕೃತ ಮುದ್ರೆ ಒತ್ತಿದಂತಿದೆ. ವಿಜಯ್ ವರ್ಮಾ ಅಪರಿಚಿತ ಯುವತಿಯೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಯುವತಿಯ ಮುಖ ಪರಿಚಯ ಮಾಡಿಲ್ಲ, ಬದಲಾಗಿ ಇಬ್ಬರು ಪರಸ್ಪರ ಕೈ ಹಿಡಿದುಕೊಂಡಿದ್ದಾರೆ. ತಾವು ಹಂಚಿಕೊಂಡಿರುವ ಫೋಟೋಗೆ "ಹ್ಯಾಪಿ ವ್ಯಾಲೆಂಟೈನ್ಸ್ ಡೇ ಫಾರೆವರ್" ಎಂಬ ಶೀರ್ಷಿಕೆಯನ್ನು ನೀಡಲಾಗಿದ್ದು, ಸದ್ಯ ಫೋಟೋ ವೈರಲ್​ ಆಗಿದೆ.
ಫೋಟೋ ನೋಡಿದ ನೆಟ್ಟಿಗರಿಗೆ ವಿಜಯ್ ಅವರು ತಮನ್ನಾ ಜತೆಗಿನ ಸಂಬಂಧವನ್ನು ಕೊನೆಗೊಳಿಸಿ, ಹೊಸ ಪ್ರೇಮ ಸಂಬಂಧವನ್ನು ಪ್ರಾರಂಭಿಸಿದ್ದಾರೆ ಎಂಬುದು ಖಚಿತವಾಗಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ಮಿಲ್ಕಿ ಬ್ಯೂಟಿ ಅಭಿಮಾನಿಗಳು ಸಹ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ತಮನ್ನಾಗೆ ವಿಜಯ್​ ಮೋಸ್​ ಮಾಡಿದ್ದಾರೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.
ಆದಾಗ್ಯೂ, ಈ ಸುದ್ದಿಯಲ್ಲಿ ಒಂದು ಸಣ್ಣ ಟ್ವಿಸ್ಟ್​ ಕೂಡ ಇದೆ. ಅದೇನೆಂದರೆ, ಫೋಟೋದಲ್ಲಿ ವಿಜಯ್ ವರ್ಮಾ ಟ್ಯಾಗ್ ಮಾಡಿರುವ ಖಾತೆಯು ಯಾವುದೇ ವ್ಯಕ್ತಿಗೆ ಸೇರಿಲ್ಲ. ಹೀಗಾಗಿ, ಅದು ಒಂದು ರೀತಿಯ ತಮಾಷೆ ಅಥವಾ ಬ್ರಾಂಡ್ ಪ್ರಚಾರವಾಗಿರಬಹುದು ಎಂದು ಕೆಲವರು ವಾದಿಸುತ್ತಿದ್ದಾರೆ. ಆರಂಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ನೆಟ್ಟಿಗರು, ಖಾತೆಯ ವಿವರಗಳನ್ನು ನೋಡಿದ ನಂತರ ಇದು ಕೇವಲ ಪ್ರಚಾರದ ಸಾಹಸ ಎಂದು ಹಗುರವಾಗಿ ಪರಿಗಣಿಸುತ್ತಿದ್ದಾರೆ. ಏನೇ ಇರಲಿ, ತಮನ್ನಾ-ವಿಜಯ್ ಅವರ ಸಂಬಂಧದ ಕುರಿತಾದ ಈ ವದಂತಿಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ವಿಷಯವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net