ಬಾಲ್ಯದಲ್ಲೇ 'ದೇಶಮುದುರು' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಹನ್ಸಿಕಾ, ಚಿಕ್ಕ ವಯಸ್ಸಿಗೆ ಬಣ್ಣ ಹಚ್ಚಿದ ಬ್ಯೂಟಿ. ತನ್ನ ನೋಟ ಮತ್ತು ಅಭಿನಯದ ಮೂಲಕ ಸಾಲು ಸಾಲು ಸಿನಿಮಾಗಳ ಅವಕಾಶ ಪಡೆದುಕೊಂಡ ನಟಿ, ದಾಂಪತ್ಯದ ಬಳಿಕ ಚಿತ್ರರಂಗದಿಂದ ದೂರ ಉಳಿದರು. ಆದರೆ, ಅವರ ಬಗ್ಗೆಗಿನ ಒಂದು ಆರೋಪ ಮತ್ತು ವದಂತಿಗಳು ಬಹಳ ಹಿಂದಿನಿಂದಲೂ ಹಾಗೆಯೇ ಇದೆ. ಈ ಕುರಿತು ಕಡೆಗೂ ಹನ್ಸಿಕಾ ತುಟಿ ಬಿಚ್ಚಿದ್ದಾರೆ.