'ಗುಡ್ ಬೈ ಮೈ ಲವ್': ಸಂಗೀತ ಲೋಕದ ಧ್ರುವತಾರೆಯ ನೆನಪಿನಲ್ಲಿ ಝನೈ ಹಂಚಿಕೊಂಡ ಭಾವುಕ ನುಡಿಗಳು.. Zanai emotional note

 Zanai emotional note (ಚಿತ್ರ Instagram)
Zanai emotional note (ಚಿತ್ರ Instagram)
Published on
Zanai emotional note: ಭಾರತೀಯ ಚಿತ್ರರಂಗದಲ್ಲಿ ತಮ್ಮ ಹಾಡುಗಳಿಂದಲೇ ಮನೆ ಮಾತಾಗಿದ್ದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ (92) ಭಾನುವಾರ ನಿಧನರಾಗಿದ್ದು, ಭೋಸ್ಲೆ ಅಗಲಿಕೆಯ ಕುರಿತಾಗಿ ಅವರ ಮೊಮ್ಮಗಳು ಝನೈ ಭಾವನಾತ್ಮಕ ಕ್ಷಣಗಳನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಪೋಸ್ಟ್​ನಲ್ಲೇನಿದೆ?

ಆಶಾ ಭೋಂಸ್ಲೆ ಅವರ ಮರಣದ ನಂತರ, ಅವರಿಗೆ ತೋರಿದ ಅಪಾರ ಪ್ರೀತಿ ಮತ್ತು ಗೌರವವನ್ನು ನೆನಪಿಸಿಕೊಳ್ಳುತ್ತಾ ಝನೈ ಭಾವನಾತ್ಮಕ ಸಾಲುಗಳನ್ನು ಬರೆದಿದ್ದು, "ಭಾವನೆಗಳು ನನ್ನಲ್ಲಿ ಉಕ್ಕಿ ಬರುತ್ತಿವೆ. ನನಗೆ ಸಾಧ್ಯವಾದಾಗ ನಾನು ಖಂಡಿತವಾಗಿ ಏನನ್ನಾದರೂ ಬರೆಯುತ್ತೇನೆ. ಆದರೆ ಈ ಸಮಯದಲ್ಲಿ ನಾನು ಒಂದು ವಿಷಯವನ್ನು ಹೇಳಲೇಬೇಕು. ಇಂದು ಅವರಿಗಾಗಿ ಎಷ್ಟು ಜನ ಬಂದಿದ್ದರು, ಅವರೆಲ್ಲರೂ ಎಷ್ಟೊಂದು ಗೌರವ ಸಲ್ಲಿಸಿದರು. ಅದೆಲ್ಲದ್ದಕ್ಕಿಂತ ಮಿಗಿಲಾಗಿ ಅವರೆಲ್ಲರೂ ಅತಿಯಾದ ಪ್ರೀತಿಯನ್ನು ತೋರಿಸಿದ್ದಾರೆ.
"ನನ್ನ ಹೃದಯದ ಆಳದಿಂದ ನಾನು ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರು ಈ ಎಲ್ಲಾ ಗೌರವ ಮತ್ತು ಪ್ರೀತಿಗೆ ಸಂಪೂರ್ಣ ಅರ್ಹರಾಗಿದ್ದರು. ಅವರು ನಮ್ಮೆಲ್ಲರ ಹೃದಯಗಳಲ್ಲಿ ಶಾಶ್ವತವಾಗಿ ಬದುಕಿದ್ದಾರೆ. ಜೊತೆಗೆ ಎಲ್ಲವನ್ನೂ ಮೇಲಿನಿಂದ ನೋಡುತ್ತಿದ್ದಾರೆ ಎಂಬುದು ಈಗ ನನಗೆ ಅರಿವಾಗುತ್ತಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಶಾ ಭೋಸ್ಲೆ ಅವರ ಅಂತ್ಯಕ್ರಿಯೆಯು ಮುಂಬೈನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಸೋಮವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಆದಾಗ್ಯೂ, ಸಾವಿರಾರು ಅಭಿಮಾನಿಗಳು, ಚಿತ್ರರಂಗದ ದಿಗ್ಗಜರು ಹಾಗೂ ರಾಜಕೀಯ ನಾಯಕರ ಸಮ್ಮುಖದಲ್ಲಿ ಆಶಾ ತೈ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು.

ಗಣ್ಯರಿಂದ ಅಂತಿಮ ನಮನ

ಆಶಾ ಭೋಂಸ್ಲೆ ಅವರ ಅಂತಿಮ ದರ್ಶನ ಪಡೆಯಲು ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ತಂಡೋಪತಂಡವಾಗಿ ಆಗಮಿಸಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸುನೇತ್ರಾ ಪವಾರ್ ಅಂತಿಮ ನಮನ ಸಲ್ಲಿಸಿದರು. ಬಾಲಿವುಡ್ ನಟರಾದ ಅಮೀರ್ ಖಾನ್, ವಿಕ್ಕಿ ಕೌಶಲ್, ಸಂಗೀತ ನಿರ್ದೇಶಕ ಅನು ಮಲಿಕ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಣ್ಣೀರು ಹಾಕುತ್ತಾ ತಮ್ಮ ಪ್ರೀತಿಯ ಗಾಯಕಿಗೆ ವಿದಾಯ ಹೇಳಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net