ಮತ್ತೆ ಬಂದ ಜಾರ್ಜಿಯಾ : ಹಿಂದಿ ಥ್ರಿಲ್ಲರ್ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ‘ಮಾರ್ಟಿನ್’ ಹುಡುಗಿ

ರೂಪದರ್ಶಿ ಜಾರ್ಜಿಯಾ ಆ್ಯಂಡ್ರಿಯಾನಿ ಹುಟ್ಟಿದ್ದು ಇಟಲಿಯಲ್ಲಿ, ಬೆಳೆದಿದ್ದು ಲಂಡನ್‌ನಲ್ಲಿ. ಆದರೆ, ಬದುಕು ಕಟ್ಟಿಕೊಂಡಿದ್ದು ಭಾರತದಲ್ಲಿ. ಸಿನಿಮಾ, ವೆಬ್ ಸರಣಿ, ಮ್ಯೂಸಿಕ್ ಅಲ್ಬಂ ಮೂಲಕ ಅವರು ಭಾರತೀಯ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ.
georgia andriyani
ಜಾರ್ಜಿಯಾ ಆ್ಯಂಡ್ರಿಯಾನಿ
Published on: 

ರೂಪದರ್ಶಿ ಜಾರ್ಜಿಯಾ ಆ್ಯಂಡ್ರಿಯಾನಿ ಹುಟ್ಟಿದ್ದು ಇಟಲಿಯಲ್ಲಿ, ಬೆಳೆದಿದ್ದು ಲಂಡನ್‌ನಲ್ಲಿ. ಆದರೆ, ಬದುಕು ಕಟ್ಟಿಕೊಂಡಿದ್ದು ಭಾರತದಲ್ಲಿ. ಸಿನಿಮಾ, ವೆಬ್ ಸರಣಿ, ಮ್ಯೂಸಿಕ್ ಅಲ್ಬಂ ಮೂಲಕ ಅವರು ಭಾರತೀಯ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಹಿಂದಿಯ ‘ಗೆಸ್ಟ್ ಇನ್ ಲಂಡನ್’ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಜಾರ್ಜಿಯಾ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆಯೇ, ಕನ್ನಡದ ‘ಮಾರ್ಟಿನ್’ ಚಿತ್ರದ ‘ಜಾಸ್ಮಿನ್’ ಸ್ಪೆಷಲ್ ಸಾಂಗ್‌ನಲ್ಲಿ ಕುಣಿದು ಕುಪ್ಪಳಿಸಿದ್ದರು. ಆ ಬಳಿಕ ಜಾರ್ಜಿಯಾ ಮ್ಯೂಸಿಕ್ ಅಲ್ಬಂಗೆ ಸೀಮಿತರಾಗಿದ್ದರು. ಇದೀಗ ಎರಡು ವರ್ಷಗಳ ಬಳಿಕ ಹೊಸ ವೆಬ್‌ಸರಣಿಯಲ್ಲಿ ಅಭಿನಯಿಸುತ್ತಿದ್ದು, ಆ ಮೂಲಕ ಮತ್ತೊಮ್ಮೆ ಬಣ್ಣ ಹಚ್ಚುತ್ತಿದ್ದಾರೆ. ಹಿಂದಿಯ ‘ಡೈಸ್’ ಎಂಬ ಥ್ರಿಲ್ಲರ್ ವೆನ್‌ಸಿರೀಸ್‌ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಸರಣಿಯು ಇಟಲಿಯಲ್ಲಿ ನಡೆಯುವ ಕಥೆಯಾಗಿದ್ದು, ಅದರಲ್ಲಿ ಜಾರ್ಜಿಯಾ ಇಟಾಲಿಯನ್ ಮಹಿಳೆಯ ಪಾತ್ರದಲ್ಲಿದ್ದಾರೆ. ‘ಮೇ ಜರೂರ್ ಆವೂಂಗಾ’, ‘ಬಿ ಕೇರ್‌ಫುಲ್’ ಖ್ಯಾತಿಯ ಚಂದ್ರಕಾಂತ್ ಸಿಂಗ್ ಈ ಸರಣಿಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಪ್ರಾಜೆಕ್ಟ್ ಕುರಿತು ಸ್ವತಃ ಜಾರ್ಜಿಯಾ ಖಚಿತಪಡಿಸಿದ್ದು,‘ ಹೊಸ ಪಾತ್ರಗಳ ಮೂಲಕ ಗುರುತಿಸಿಕೊಳ್ಳಬೇಕು ಎನ್ನುವುದು ಪ್ರತಿ ಕಲಾವಿದರ ಅಭಿಲಾಷೆ. ಅದರಂತೆ ನಾನು ‘ಡೈಸ್’ ಸರಣಿ ಭಾಗವಾಗವಾಗುತ್ತಿರುವುದು ಖುಷಿ ನೀಡಿದೆ. ಈ ಸರಣಿ ಪ್ರೇಕ್ಷಕರಿಗೆ ಇಷ್ಟವಾಗುವ ಭರವಸೆಯಿದೆ’ ಎಂದು ಹೇಳಿಕೊಂಡಿದ್ದಾರೆ. ನವೆಂಬರ್‌ನಲ್ಲಿ ಈ ವೆಬ್ ಸರಣಿಯ ಶೂಟಿಂಗ್ ಆರಂಭವಾಗಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net