ವಿಮರ್ಶಕರ ವಿರುದ್ಧ ಫರಾ ಖಾನ್ ಗರಂ: ಮೈಕೆಲ್ ಜಾಕ್ಸನ್ ಬಯೋಪಿಕ್‌ಗೆ ಬಾಲಿವುಡ್ ನಿರ್ದೇಶಕಿಯ ಜೈಹೋ! Farah Khan

 Farah Khan (ಚಿತ್ರ X)
Farah Khan (ಚಿತ್ರ X)
Published on
Farah Khan: ಪಾಪ್ ಲೋಕದ ದಂತಕಥೆ ಮೈಕೆಲ್ ಜಾಕ್ಸನ್ ಅವರ ಜೀವನ ಆಧಾರಿತ ಬಹುನಿರೀಕ್ಷಿತ ಹಾಲಿವುಡ್ ಚಿತ್ರ 'ಮೈಕೆಲ್' ಇತ್ತೀಚೆಗೆ ಜಾಗತಿಕವಾಗಿ ತೆರೆ ಮೇಲೆ ಅಬ್ಬರಿಸಿತು. ಏಪ್ರಿಲ್​ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದರೂ ವಿಮರ್ಶಕರಿಂದ ಮಾತ್ರ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಆದರೆ, ಭಾರತದ ಖ್ಯಾತ ನೃತ್ಯ ಸಂಯೋಜಕಿ ಫರಾ ಖಾನ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಈ ಚಿತ್ರವನ್ನು ಬೆಂಬಲಿಸಿದ್ದಾರೆ.

ಮೈಕೆಲ್ ಜಾಕ್ಸನ್ ಜೀವನ ಚರಿತ್ರೆ ಶ್ಲಾಘಿಸಿದ ಫರಾ ಖಾನ್

ಶನಿವಾರ ಸಂಜೆ, ಫರಾ ಖಾನ್​ ಮೈಕೆಲ್ ಜಾಕ್ಸನ್ ಜೊತೆಗಿನ ತಮ್ಮ ಫೋಟೋವನ್ನು ಹಂಚಿಕೊಂಡು, ಗಮನಿಸಬೇಕಾದ ಅಂಶ.. ವಿಮರ್ಶಕರು ಎಲ್ಲಾ ದೇಶಗಳಲ್ಲೂ ಮೂರ್ಖರು! ಮೈಕೆಲ್ ಸಿನಿಮಾ ನೋಡಿ!! ದಯವಿಟ್ಟು ಜಾಫರ್​ ಜಾಕ್ಸನ್​ ಅವರಿಗೆ ಮುಂದಿನ ವರ್ಷ ಆಸ್ಕರ್​ ನೀಡಿ. ಆದಾಗ್ಯೂ, ಈ ಚಿತ್ರ ನಮಗಾಗಿ ಅಭಿಮಾನಿಗಳಿಗಾಗಿ ಮತ್ತು ವಿಮರ್ಶಕರಿಗಾಗಿ ಅಲ್ಲ. ಮೈಕಲ್​ ಅವರನ್ನು ಪ್ರೀತಿಸುತ್ತಿದ್ದೆ ಎಂದು ಬರೆದಿದ್ದಾರೆ.

ಇಂಟರ್ನೆಟ್ ಪ್ರತಿಕ್ರಿಯೆಗಳು

ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಚಲನಚಿತ್ರ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರ ಪತ್ನಿ ವಾರ್ದಾ ಖಾನ್ ಫರಾ ಖಾನ್​ ಅವರ ಮಾತುಗಳನ್ನು ಒಪ್ಪಿಕೊಂಡಿದ್ದು, ಖಂಡಿತ ಜೆಜೆ ಆಸ್ಕರ್‌ಗೆ ಸಂಪೂರ್ಣವಾಗಿ ಅರ್ಹರು. ಮೈಕಲ್​ ಅವರ ಕಥೆ ಮುಂದುವರೆಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಒಬ್ಬ ಬಳಕೆದಾರರು ಒಂದೇ ಚೌಕಟ್ಟಿನಲ್ಲಿ ಇಬ್ಬರು ಐಕಾನ್‌ಗಳು. ನಿರ್ದೇಶಕರ ರಾಣಿಯೊಂದಿಗೆ ಪಾಪ್ ರಾಜ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಲವ್ಲಿ ಎಂದು ಸೇರಿಸಿದ್ದಾರೆ.

ಮೈಕೆಲ್: ಪಾತ್ರವರ್ಗ ಮತ್ತು ನಿರ್ದೇಶಕರ ಬಗ್ಗೆ

ಪಾಪ್ ಲೋಕದ ಧ್ರುವತಾರೆ ಮೈಕೆಲ್ ಜಾಕ್ಸನ್ ಅವರ ಜೀವನವನ್ನು ಬೆಳ್ಳಿತೆರೆಯ ಮೇಲೆ ತರುವ ಪ್ರಯತ್ನವಾಗಿ ಮೂಡಿಬಂದಿರುವ 'ಮೈಕೆಲ್' ಚಿತ್ರವು ಕೇವಲ ನೃತ್ಯ ಮತ್ತು ಸಂಗೀತಕ್ಕಷ್ಟೇ ಸೀಮಿತವಾಗಿಲ್ಲ. ಈ ಚಿತ್ರವು ಅತ್ಯುನ್ನತ ತಾಂತ್ರಿಕ ತಂಡ ಮತ್ತು ಘಟಾನುಘಟಿ ಕಲಾವಿದರ ಶ್ರಮದ ಫಲವಾಗಿದೆ.
ಈ ಚಿತ್ರವನ್ನು ಜಾನ್ ಲೋಗನ್ ಬರೆದು ಆಂಟೊಯಿನ್ ಫುಕ್ವಾ ನಿರ್ದೇಶಿಸಿದ್ದಾರೆ. ಜಾಫರ್ ಜಾಕ್ಸನ್ ಹೊರತುಪಡಿಸಿ, ಈ ಚಿತ್ರದಲ್ಲಿ ಜೋಸೆಫ್ ಜಾಕ್ಸನ್ ಪಾತ್ರದಲ್ಲಿ ಕೋಲ್ಮನ್ ಡೊಮಿಂಗೊ, ಕ್ಯಾಥರೀನ್ ಜಾಕ್ಸನ್ ಪಾತ್ರದಲ್ಲಿ ನಿಯಾ ಲಾಂಗ್, ಯುವ ಮೈಕೆಲ್ ಪಾತ್ರದಲ್ಲಿ ಜೂಲಿಯಾನೋ ವಾಲ್ಡಿ ಮತ್ತು ಇತರರು ನಟಿಸಿದ್ದಾರೆ.

ಬಾಕ್ಸ್ ಆಫೀಸ್ ಕಲೆಕ್ಷನ್

ಈ ಚಿತ್ರವು ಭಾರತದಲ್ಲಿ ಸರಾಸರಿ ಕಲೆಕ್ಷನ್‌ನೊಂದಿಗೆ ಪ್ರಾರಂಭವಾಯಿತು. ಪಾವತಿಸಿದ ಪೂರ್ವವೀಕ್ಷಣೆಗಳಿಂದ ಇದು 1.70 ಕೋಟಿ ರೂ.ಗಳನ್ನು ಸಂಗ್ರಹಿಸಿತು ಮತ್ತು 3,029 ಪ್ರದರ್ಶನಗಳಲ್ಲಿ ಮೊದಲ ದಿನದಲ್ಲಿ 3.60 ಕೋಟಿ ರೂ.ಗಳನ್ನು ಗಳಿಸಿತು. ನಂತರ ಶನಿವಾರ ವಾರಾಂತ್ಯದಲ್ಲಿ 3,190 ಪ್ರದರ್ಶನಗಳಲ್ಲಿ 19% ಆಕ್ಯುಪೆನ್ಸಿಯೊಂದಿಗೆ 5 ಕೋಟಿ ರೂ.ಗಳನ್ನು ಗಳಿಸಿತು. ಇಲ್ಲಿಯವರೆಗೆ ಮೈಕೆಲ್ ಚಿತ್ರ 10.30 ಕೋಟಿ ರೂ.ಗಳನ್ನು ಗಳಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net