ತಂದೆ ಇಲ್ಲದೇ ಮೊದಲ ನ್ಯೂ ಇಯರ್ ಸೆಲೆಬ್ರೇಷನ್: ಇಶಾ ಡಿಯೋಲ್ ಭಾವನಾತ್ಮಕ ಪೋಸ್ಟ್‌ಗೆ ಮನಸೋತ ಅಣ್ಣ ಬಾಬಿ ಡಿಯೋಲ್! Esha Deol

ಚಿತ್ರ Instagram
ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • 2026 ರ ಹೊಸ ವರ್ಷವನ್ನು ಬಾಲಿವುಡ್​ ನಟಿ ಇಶಾ ಡಿಯೋಲ್​ ದುಬೈನಲ್ಲಿ ಸ್ವಾಗತ ಕೋರಿದರು
  • ತಂದೆ ಧರ್ಮೇಂದ್ರ ಅವರನ್ನು ನೆನಸಿಕೊಂಡು ಭಾವನಾತ್ಮಕ ಪೋಸ್ಟ್​ನ್ನು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
  • ಧಮೇಂದ್ರ ಅವರ ನಿಧನದ ನಂತರ ಇಶಾ ಅವರಿಗೆ ಇದು ಮೊದಲ ಹೊಸ ವರ್ಷದ ಆಚರಣೆ
  • ಚಿತ್ರದಲ್ಲಿ ಕಪ್ಪು ಮೋಡಗಳ ನಡುವೆ "ಅಪ್ಪ ಐ ಲವ್​ ಯು"ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Esha Deol: 2026 ರ ಹೊಸ ವರ್ಷವನ್ನು ಬಾಲಿವುಡ್​ ನಟಿ ಇಶಾ ಡಿಯೋಲ್​ ದುಬೈನಲ್ಲಿ ಸ್ವಾಗತ ಕೋರುವುದರ ಜೊತೆಗೆ ತಮ್ಮ ತಂದೆ ನಟ ಧರ್ಮೇಂದ್ರ ಅವರನ್ನು ನೆನಸಿಕೊಂಡು ಭಾವನಾತ್ಮಕ ಪೋಸ್ಟ್​ನ್ನು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಧಮೇಂದ್ರ ಅವರ ನಿಧನದ ನಂತರ ಇಶಾ ಅವರಿಗೆ ಇದು ಮೊದಲ ಹೊಸ ವರ್ಷದ ಆಚರಣೆಯಾಗಿತ್ತು.

ಇಶಾ ಡಿಯೋಲ್ ಅವರ ಹೊಸ ವರ್ಷದ ಆಚರಣೆ

ಬುಧವಾರ ರಾತ್ರಿ ಇಶಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಪ್ಪು ಮತ್ತು ಚಿನ್ನದ ಬಣ್ಣದ ಉಡುಪನ್ನು ಧರಿಸಿ, ದುಬೈನ ಹೊಳೆಯುವ ನಗರದೃಶ್ಯ ಮತ್ತು ಬುರ್ಜ್ ಖಲೀಫಾದ (Burj Khalifa) ಹಿಂದೆ ನಿಂತಿರುವ ಎರಡು ಭಾವುಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅವರು ಆಕಾಶದ ಕಡೆಗೆ ಬೆರಳು ಮಾಡಿ ಚಂದ್ರನನ್ನು ತೋರಿಸುತ್ತಿದ್ದಾರೆ. ಇನ್ನೊಂದು ಚಿತ್ರದಲ್ಲಿ ಕಪ್ಪು ಮೋಡಗಳ ನಡುವೆ "ಅಪ್ಪ ಐ ಲವ್​ ಯು" (Love you, papa) ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಇಶಾ ಅವರ ಈ ಪೋಸ್ಟ್‌ಗೆ ಅವರ ಸಹೋದರ ಬಾಬಿ ಡಿಯೋಲ್ ಪ್ರತಿಕ್ರಿಯಿಸಿದ್ದು, ಆಶೀರ್ವಾದ, ಸಂತೋಷ, ಆರೋಗ್ಯ ಎಲ್ಲವೂ ನಿನಗೆ ಸಿಗಲಿ. ನಿಮ್ಮಲ್ಲರನ್ನೂ ಪ್ರೀತಿಸುತ್ತೇನೆ ಎಂದು ಬರೆದಿದ್ದಾರೆ.

ಧರ್ಮೇಂದ್ರ ಅವರ ನಿಧನ

ಹಿರಿಯ ನಟ ಧರ್ಮೇಂದ್ರ ಅವರು ಕೆಲವು ತಿಂಗಳುಗಳ ಹಿಂದೆ ಭಾರೀ ಅನಾರೋಗ್ಯದಿಂದ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬಳಿಕ ಮನೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ನವೆಂಬರ್ 24 ರಂದು ತಮ್ಮ 89 ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಇಬ್ಬರು ಪತ್ನಿಯರಾದ ಪ್ರಕಾಶ್ ಕೌರ್ ಮತ್ತು ಹೇಮಾ ಮಾಲಿನಿ ಮತ್ತು ಸನ್ನಿ ಡಿಯೋಲ್, ಬಾಬಿ ಡಿಯೋಲ್ ಮತ್ತು ಇಶಾ ಡಿಯೋಲ್ ಸೇರಿದಂತೆ ಆರು ಮಕ್ಕಳನ್ನು ಅಗಲಿದ್ದಾರೆ. ಅವರ ಅಗಲಿಕೆಯ ನಂತರ ಅನೇಕ ಸೆಲೆಬ್ರಿಟಿಗಳು ಅವರಿಗೆ ಸಂತಾಪ ಸೂಚಿಸಿದರು.

ಧರ್ಮೇಂದ್ರ ಅವರ ಕೊನೆಯ ಚಿತ್ರ 'ಇಕ್ಕಿಸ್'.

ಧರ್ಮೇಂದ್ರ ಅವರ ಕೊನೆಯ ಚಿತ್ರವಾದ ಇಕ್ಕಿಸ್ ಇಂದು (ಜ.01) ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಡಿಯೋಲ್ ಕುಟುಂಬಕ್ಕೆ ಇದು ಮತ್ತೊಂದು ಭಾವನಾತ್ಮಕ ಕ್ಷಣವಾಗಿದೆ. ಈ ಚಿತ್ರದಲ್ಲಿ ಧಮೇಂದ್ರ ಅವರು ಅರುಣ್ ಖೇತರ್ಪಾಲ್ ಅವರ ತಂದೆ ಬ್ರಿಗೇಡಿಯರ್ ಮದನ್ ಲಾಲ್ ಖೇತರ್ಪಾಲ್ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಚಿತ್ರದಲ್ಲಿ ಜೈದೀಪ್ ಅಹ್ಲಾವತ್, ಸಿಮರ್ Esha Deolಭಾಟಿಯಾ ಮತ್ತು ರಾಹುಲ್ ದೇವ್ ಸೇರಿದಂತೆ ಇತರರು ನಟಿಸಿದ್ದಾರೆ.
ಡಿಸೆಂಬರ್ 30 ರಂದು ಮುಂಬೈನಲ್ಲಿ ಚಿತ್ರದ ನಿರ್ಮಾಪಕರು ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಇದರಲ್ಲಿ ಸಲ್ಮಾನ್ ಖಾನ್, ಸನ್ನಿ ಡಿಯೋಲ್, ಬಾಬಿ ಡಿಯೋಲ್ ಮತ್ತು ಇನ್ನಿತರ ನಟ- ನಟಿಯರ ಹೆಸರು ಕೇಳಿಬಂದಿದೆ. ಚಲನಚಿತ್ರದ ಪ್ರದರ್ಶನದ ನಂತರ ನಿರ್ಮಾಪಕ ಅನಿಲ್ ಶರ್ಮಾ ಮತ್ತು ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಬ್ರಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಧರ್ಮೇಂದ್ರ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net