ಮುಂಬೈ: ಪ್ರಸ್ತುತ ಕಾಲಘಟ್ಟದ ಸಿನಿಮಾಗಳು 80-90ರ ದಶಕದಲ್ಲಿ ಜನರ ಮೇಲೆ ಬೀರುತ್ತಿದ್ದ ಪ್ರಭಾವವನ್ನು ಇಂದು ಬೀರಲು ಸಾಧ್ಯವೇ ಇಲ್ಲ. ಕಾರಣ, ಆ ಮಟ್ಟಿಗಿನ ಒಳ್ಳೆಯ ವಿಷಯಗಳು, ಉತ್ತಮ ಸಂದೇಶ, ಆಳವಾದ ಭಾವನೆ ಮತ್ತು ಕಥಾವಸ್ತುವುಳ್ಳ ಚಿತ್ರಗಳು ಪ್ರೇಕ್ಷಕರ ಎದುರು ಹಾಜರಾಗುತ್ತಿಲ್ಲ. ಒಂದು ಸಿನಿಮಾ ಎಷ್ಟರ ಮಟ್ಟಿಗೆ ಒಬ್ಬ ವ್ಯಕ್ತಿ ಮೇಲೆ ಪ್ರಭಾವ ಬೀರುತ್ತೆ, ಅವರ ಬದುಕನ್ನೇ ಬದಲಿಸುತ್ತೆ ಎಂಬುದಕ್ಕೆ ಅನೇಕ ದಿಗ್ಗಜ ನಟರ ಸೂಪರ್ಹಿಟ್ ಚಿತ್ರಗಳೇ ಜ್ವಲಂತ ಸಾಕ್ಷಿ.