Ek Din - 39 ದಿನ ಮುನ್ನವೇ ಅಡ್ವಾನ್ಸ್​ ಬುಕ್ಕಿಂಗ್​ ಓಪನ್​!

ಏಕ್​ ದಿನ್​
ಏಕ್​ ದಿನ್​
Published on
Ek Din -
"ಲವ್​ಯಾಪಾ', "ಮಹಾರಾಜ್​' ಬಳಿಕ ಆಮಿರ್​ ಖಾನ್​ ಪುತ್ರ ಜುನೈದ್​ ಖಾನ್​ ನಾಯಕನಾಗಿ ನಟಿಸುತ್ತಿರುವ ಮೂರನೇ ಸಿನಿಮಾ "ಏಕ್​ ದಿನ್​'. ಈ ಚಿತ್ರದ ಮೂಲಕ ದಣದ ನಟಿ ಸಾಯಿಪಲ್ಲವಿ ಬಾಲಿವುಡ್​ಗೆ ಡೆಬ್ಯೂ ಮಾಡುತ್ತಿರುವುದು ವಿಶೇಷ. ಇದು ರೊಮ್ಯಾಂಟಿಕ್​ ಡ್ರಾಮಾ ಜಾನರ್​ ಚಿತ್ರವಾಗಿದ್ದು, ಸುನಿಲ್​ ಪಾಂಡೆ ನಿರ್ದೇಶಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತಾಗಿದ್ದರೆ "ಏಕ್​ ದಿನ್​' ಕಳೆದ ನವೆಂಬರ್​ನಲ್ಲಿ ಬಿಡುಗಡೆಯಾಗಬೇಕಿತ್ತು. ಇದೀಗ ಮೇ 1ರಂದು ತೆರೆಗೆ ಬರಲು ರೆಡಿಯಾಗಿದೆ. ಸಾಮಾನ್ಯವಾಗಿ ಸಿನಿಮಾಗಳ ರಿಲೀಸ್​ಗೆ ಇನ್ನೊಂದು ವಾರ ಅಥವಾ 10 ದಿನ ಇರುವಾಗ, ಆನ್​ಲೈನ್​ ಬುಕ್ಕಿಂಗ್​ ಓಪನ್​ ಆಗುತ್ತದೆ. ಆದರೆ, ಪ್ರೇಕ್ಷಕರನ್ನು ಸೆಳೆಯಲು ಹೊಸ ಬಗೆಯ ಪ್ರಚಾರತಂತ್ರ ಅನುಸರಿಸುತ್ತಿರುವ "ಏಕ್​ ದಿನ್​' ತಂಡ, ಬಿಡುಗಡೆಗೆ ಬರೋಬ್ಬರಿ 39 ದಿನ ಮುನ್ನವೇ ಆನ್​ಲೈನ್​ ಬುಕ್ಕಿಂಗ್​ ಪ್ರಾರಂಭಿಸಿದೆ. ದೇಶಾದ್ಯಂತ 20 ನಗರಗಳಲ್ಲಿ ತಲಾ ಒಂದೊಂದು ಥಿಯೇಟರ್​ ಅಥವಾ ಮಲ್ಟಿಪ್ಲೆಕ್ಸ್​ನಲ್ಲಿ, ಒಂದೊಂದು ಶೋ ಬುಕ್ಕಿಂಗ್​ಗೆ ಮಾತ್ರ ಅವಕಾಶ ನೀಡಲಾಗಿದೆ. ಈ 39 ದಿನಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಟೀಸರ್​, ಹಾಡುಗಳು, ಟ್ರೇಲರ್​ ಜತೆಗೆ ವಿವಿಧ ಕಂಟೆಂಟ್​ ನೋಡಿ ಮೆಚ್ಚುವ ಪ್ರೇಕ್ಷಕರು, ತಕ್ಷಣ ಸಿನಿಮಾ ಬುಕ್​ ಮಾಡಲು ಮುಂದಾಗಬಹುದು ಎಂಬ ನಿರೀೆಯಲ್ಲಿ ಇದೇ ಮೊದಲ ಬಾರಿಗೆ ಚಿತ್ರತಂಡ ಈ ಪ್ಲ್ಯಾನ್​​ ಮಾಡಿದೆ ಎನ್ನಲಾಗಿದೆ.

ಕಾಪಿ, ಪೇಸ್ಟ್​!

ಸಾಮಾನ್ಯವಾಗಿ ಸಿನಿಮಾಗಳನ್ನು ರಿಮೇಕ್​ ಮಾಡಿದರೆ, ನೇಟಿವಿಟಿಗೆ ತಕ್ಕಂತೆ ಕಥೆ, ಹಿನ್ನೆಲೆ, ಪಾತ್ರ ಎಲ್ಲವನ್ನೂ ಬದಲಿಸಲಾಗುತ್ತದೆ. ಭಾರತದಲ್ಲೇ ವಿವಿಧ ಭಾಷೆಗಳ ಚಿತ್ರಗಳ ರಿಮೇಕ್​ ಸಮಯದಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದನ್ನು ನೋಡಿದ್ದೇವೆ. ಆದರೆ, ಆ ವಿಷಯದಲ್ಲಿ "ಏಕ್​ ದಿನ್​' ತಂಡ ಸೋಮಾರಿತನ ಪ್ರದರ್ಶಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ, ಇದು 2016ರ ಥಾಯ್ಲೆಂಡ್​ ಸಿನಿಮಾ "ಒನ್​ ಡೇ' ರಿಮೇಕ್​ ಆಗಿದ್ದು, ಅದನ್ನೇ "ಏಕ್​ ದಿನ್​' ಎಂದು ಭಾಷಾಂತರ ಮಾಡಲಾಗಿದೆ. ಇನ್ನು ಥಾಯ್​ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ನಲ್ಲಿ ಮಂಜಿನ ನಡುವ ನಾಯಕ, ನಾಯಕಿ ನಡೆದುಬರುವುದನ್ನೇ ಹಿಂದಿ ಚಿತ್ರದಲ್ಲೂ ಕಾಪಿ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net