ಮುಂಬೈ: ಸಿನಿಮಾ ತಾರೆಯರು ಎಲ್ಲಿಗೆ ಹೋದರೂ ಅವರ ಬೆನ್ನತ್ತಿ ಪ್ರತಿಕ್ಷಣವನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಕೆಲ ಜನರ ಹವ್ಯಾಸವಾಗಿಬಿಟ್ಟಿದ್ದು, ಒಮ್ಮೊಮ್ಮೆ ಅತೀ ಎನಿಸುವ ವರ್ತನೆಗಳು ಸೆಲೆಬ್ರಿಟಿಗಳ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡುತ್ತವೆ. ಇದೀಗ ಬಾಲಿವುಡ್‌ನ ಹಿರಿಯ ನಟಿ ಕರಿಷ್ಮಾ ಕಪೂರ್ ಕೂಡ ಇದೇ ಕಾರಣಕ್ಕೆ ಸುದ್ದಿಯಲ್ಲಿದ್ದು, ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಮಿತಿ ಮೀರಿ ವರ್ತಿಸುತ್ತಿದ್ದ ಫೋಟೋಗ್ರಾಫರ್ ವಿರುದ್ಧ ಕರಿಷ್ಮಾ ಅಸಮಾಧಾನ ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ.