ಹೀಗಿರುವಾಗ, ಶಿರೀಶ್ ಅವರು ಒಂದು ನಿರ್ಧಾರಕ್ಕೆ ಬಂದರು. ಅದೇನೆಂದರೆ, ತನ್ನ ಪ್ರೀತಿಯನ್ನು ಮುಚ್ಚಿಟ್ಟುಕೊಳ್ಳಬಾರದು ಅಂತ ನಿರ್ಧಾರ ಮಾಡಿದ ಶಿರೀಶ್, ಒಂದು ಪಾರ್ಟಿಯಲ್ಲಿ ತನ್ನ ಪ್ರೀತಿಯನ್ನು ಆಕೆಯ ಮುಂದೆ ತುಂಬಾ ನೇರವಾಗಿ ವ್ಯಕ್ತಪಡಿಸಿದನು. ನನ್ನನ್ನು ಮದುವೆಯಾಗುವ ಉದ್ದೇಶವಿದ್ದರೆ ಮಾತ್ರ ನನ್ನೊಂದಿಗೆ ಮಾತನಾಡಿ ಇಲ್ಲದಿದ್ದರೆ ನನ್ನೊಂದಿಗೆ ಮಾತನಾಡಬೇಡಿ ಎಂದನು. ಇದನ್ನು ಕೇಳಿ ಶಿರೀಶ್ಗೆ ಒಂದು ಕ್ಷಣ ಅಚ್ಚರಿಯಾಯಿತು. ಆದರೆ, ಶಿರೀಶ್ ಅವರ ನೇರ ನುಡಿ ಅವರಿಗೆ ಇಷ್ಟವಾಯಿತು. ಆರಂಭದಲ್ಲಿ ಫರ್ಹಾ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಂತರದ ದಿನಗಳಲ್ಲಿ ಶಿರೀಶ್ ಅವರನ್ನು ಹೆಚ್ಚು ಗಮನಿಸಲು ಮುಂದಾದರು. ಶಿರೀಶ್ ಅವರ ಪ್ರಾಮಾಣಿಕತೆ, ಆತನ ಬುದ್ಧಿವಂತಿಕೆ ಫರ್ಹಾ ಅವರಿಗೆ ಇಷ್ಟವಾಯಿತು. ಅಂತಿಮವಾಗಿ ಫರ್ಹಾ, ಶಿರೀಶ್ ಅವರ ಪ್ರೀತಿಯನ್ನು ಒಪ್ಪಿಕೊಂಡಳು.