ಸೊಂಟಕ್ಕೆ ಕೈ ಹಾಕ್ತಾರೆ, ಲೋ ಆ್ಯಂಗಲ್​ ವಿಡಿಯೋ! ಕಾರ್ಯಕ್ರಮದಲ್ಲಿ ಅಂಕಲ್​ಗಳ ಕಾಟಕ್ಕೆ ಬೇಸತ್ತ ನಟಿ ಮೌನಿ

ಬಾಲಿವುಡ್​ ನಟಿ ಮೌನಿ ರಾಯ್​
ಬಾಲಿವುಡ್​ ನಟಿ ಮೌನಿ ರಾಯ್​
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಯಕ್ರಮಕ್ಕೆ ಹೋಗಿದ್ದ ಹಿಂದಿ ನಟಿಗೆ ಭಾರೀ ಮುಜುಗರ
  • ಈವೆಂಟ್​ ವೇದಿಕೆಯಲ್ಲಿ ಅಂಕಲ್​ಗಳದ್ದೇ ಕಾಟ ಎಂದ ಮೌನಿ ರಾಯ್​
  • ಕೆಳಗಿನಿಂದಲೇ ಫೋಟೋ, ವಿಡಿಯೋ ಮಾಡ್ತಾರೆ
ಹರಿಯಾಣ: ಇತ್ತೀಚೆಗಷ್ಟೇ ಕರ್ನಾಲ್​ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಬಾಲಿವುಡ್​ ನಟಿ ಮೌನಿ ರಾಯ್​, ವೇದಿಕೆಯಲ್ಲಿ ತಮಗಾದ ಹಿಂಸೆ, ಮುಜುಗರ, ಬೇಸರ ಕುರಿತು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮೌನ ಮುರಿದಿದ್ದಾರೆ.
"ಕಾರ್ಯಕ್ರಮಕ್ಕೆ ಹೋಗಿದ್ದ ನನಗೆ ಅಲ್ಲಿ ಸೇರಿದ್ದ ಪುರುಷರಿಂದ ತೀರ ಕಿರುಕುಳ ಉಂಟಾಯಿತು. ಕೆಲವರು ನನ್ನ ಅನುಮತಿ ಇಲ್ಲದೆ, ತಮಗೆ ಇಷ್ಟಬಂದ ಆ್ಯಂಗಲ್​ನಿಂದಲೇ ಫೋಟೋ, ವಿಡಿಯೋಗಳನ್ನು ಮಾಡಿಕೊಂಡರು. ಅದರಲ್ಲೂ, ಕೆಳಗಿನಿಂದೆಲ್ಲ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದರು. ಇದು ಭಾರೀ ಮುಜುಗರ ತರಿಸಿತು. ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ತಮ್ಮ ಸೊಂಟದ ಮೇಲೆ ಕೈ ಹಾಕಿದ್ದು ಮನಸ್ಸಿಗೆ ತುಂಬ ನೋವುಂಟು ಮಾಡಿತು" ಎಂದಿದ್ದಾರೆ.
"ನನ್ನ ಅಜ್ಜನ ವಯಸ್ಸಿನವರು ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಸೊಂಟದ ಮೇಲೆ ಕೈ ಹಾಕಿದ್ದು ನಿಜಕ್ಕೂ ನನಗೆ ಅಸಹ್ಯ ಮೂಡಿಸಿತು. ಇನ್ನೂ ಕೆಲವರು ಅಸಭ್ಯವಾಗಿ ಕೈ ಸನ್ನೆಗಳನ್ನು ತೋರಿಸುತ್ತಾ, ಅಶ್ಲೀಲ ಮಾತುಗಳನ್ನಾಡುತ್ತಿದ್ದರು. ಇದನ್ನೆಲ್ಲ ಗಮನಿಸಿದ ನಾನು ಕೂಡಲೇ ಅವರಿಗೆಲ್ಲ ಹೀಗೆ ಮಾಡಬೇಡಿ ಎಂದು ನಯವಾಗಿಯೇ ಸನ್ನೆ ಮಾಡಿದೆ. ತಕ್ಷಣ, ಅವರು ನನ್ನ ಮೇಲೆ ಗುಲಾಬಿ ಹೂವುಗಳನ್ನು ಎರಚಿದರು. ಈ ಘಟನೆಗಳಿಂದ ನನಗೆ ತುಂಬ ನೋವಾಗಿದೆ. ಅಧಿಕಾರಿಗಳು ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಮೌನಿ ಆಗ್ರಹಿಸಿದ್ದಾರೆ.
"ಇಲ್ಲಿ ಸ್ಟೇಜ್​ ಕೂಡ ತುಂಬ ಎತ್ತರದಲ್ಲಿತ್ತು. ಇದು ಕೆಲ ಅಂಕಲ್​ಗಳಿಗೆ ಲೋ ಆ್ಯಂಗಲ್​ನಲ್ಲಿ ವಿಡಿಯೋ ಮಾಡಲು ಬಹಳ ಅನುಕೂಲಕರವಾಗಿತ್ತು. ನನ್ನ ದೇಶ, ಜನ, ಸಂಪ್ರಾಯದವನ್ನು ಗೌರವಿಸುತ್ತೇನೆ. ಆದರೆ, ಇದನ್ನು! ಛೇ, ಖಂಡಿತ ಆಗದು. ನಾನು ಯಾವುದರ ಬಗ್ಗೆಯೂ ಕೆಟ್ಟದಾಗಿ ಮಾತನಾಡಲ್ಲ. ಆದರೀ ಘಟನೆ ಕುರಿತು ಏನು ಹೇಳಬೇಕೋ ನಿಜಕ್ಕೂ ಅರ್ಥವಾಗ್ತಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ನಾವು ಅತಿಥಿಯಾಗಿ ಹೋದರೆ. ಇವರು ನಮಗೆ ಕಿರುಕುಳ ನೀಡೋದು ಎಷ್ಟು ಸರಿ? ಛೀ" ಎಂದು ಬರೆದುಕೊಂಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net