ಸಾರಾ ಅರ್ಜುನ್​ಗೆ ಮುತ್ತಿಟ್ಟಿದ್ದಕ್ಕೆ ಹಲವರ ಆಕ್ರೋಶ: ಕೊನೆಗೂ ಮೌನ ಮುರಿದ ಹಿರಿಯ ನಟ ರಾಕೇಶ್​ ಬೇಡಿ! Sara Arjun

ಸಾರಾ ಅರ್ಜುನ್​ಗೆ ಮುತ್ತಿಟ್ಟಿದ್ದಕ್ಕೆ ಹಲವರ ಆಕ್ರೋಶ: ಕೊನೆಗೂ ಮೌನ ಮುರಿದ ಹಿರಿಯ ನಟ ರಾಕೇಶ್​ ಬೇಡಿ! Sara Arjun
ಸಾರಾ ಅರ್ಜುನ್​ಗೆ ಮುತ್ತಿಟ್ಟಿದ್ದಕ್ಕೆ ಹಲವರ ಆಕ್ರೋಶ: ಕೊನೆಗೂ ಮೌನ ಮುರಿದ ಹಿರಿಯ ನಟ ರಾಕೇಶ್​ ಬೇಡಿ! Sara Arjun
Published on

ಪ್ರಮುಖ ಮುಖ್ಯಾಂಶಗಳು

  • ನಟಿ ಸಾರಾ ಅರ್ಜುನ್​ ಅವರಿಗೆ ಹಿರಿಯ ನಟ ರಾಕೇಶ್​ ಬೇಡಿ ಮುತ್ತಿಟ್ಟ ವಿವಾದ
  • ಧುರಂಧರ್​ ಸಿನಿಮಾದ ಟ್ರೈಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದ ಕಿಸ್ಸಿಂಗ್​ ಪ್ರಸಂಗ
  • ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕೊನೆಗೂ ಮೌನ ಮುರಿದ ರಾಕೇಶ್​ ಬೇಡಿ
Sara Arjun : ಧುರಂಧರ್​ ಸಿನಿಮಾದ ಟ್ರೈಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಸಹನಟಿ ಸಾರಾ ಅರ್ಜುನ್​ ಅವರಿಗೆ ಹಿರಿಯ ನಟ ರಾಕೇಶ್​ ಬೇಡಿ ಮುತ್ತಿಟ್ಟಿದ್ದು ಈ ಹಿಂದೆ ಭಾರಿ ವಿವಾದಕ್ಕೆ ಕಾರಣವಾಯಿತು. ಈ ಪ್ರಕರಣ ಸಂಬಂಧ ಕೊನೆಗೂ ಮೌನ ಮುರಿದಿರುವ ರಾಕೇಶ್​ ಬೇಡಿ, ನನ್ನ ಬಗ್ಗೆ ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಏನಿದು ಘಟನೆ?

ಕಳೆದ ವರ್ಷ ಅಂದರೆ, 2025ರ ನವೆಂಬರ್‌ನಲ್ಲಿ ಧುರಂಧರ್​ ಸಿನಿಮಾದ ಮೊದಲ ಭಾಗದ ಟ್ರೈಲರ್​, ಮುಂಬೈನಲ್ಲಿ ಬಿಡುಗಡೆಯಾಯಿತು. ಈ ಕಾರ್ಯಕ್ರಮದಲ್ಲಿ, ವೇದಿಕೆಯ ಮೇಲೆಯೇ ರಾಕೇಶ್ ಬೇಡಿ ಅವರು ತಮ್ಮ ಸಹನಟಿ ಸಾರಾ ಅರ್ಜುನ್ ಅವರನ್ನು ಸ್ವಾಗತಿಸುವಾಗ ಅವರ ಭುಜಕ್ಕೆ ಮುತ್ತಿಟ್ಟರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯಿತು. ವಿಡಿಯೋ ನೋಡಿದವರು ನಿಜಕ್ಕೂ ಇದು ಅನುಚಿತ ವರ್ತನೆ ಮತ್ತು ಕಿರಿಕಿರಿ ಉಂಟು ಮಾಡುವಂತಿದೆ ಎಂದು ಟೀಕಿಸಿದರು.

ಕೊನೆಗೂ ಮೌನ ಮುರಿದ ರಾಕೇಶ್​ ಬೇಡಿ

ಅಂದಹಾಗೆ, ಧುರಂಧರ್​ ಸಿನಿಮಾದಲ್ಲಿ ರಾಕೇಶ್​ ಬೇಡಿ ಅವರು ಜಮೀಲ್​ ಜಮಾಲಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾರಾ ಅರ್ಜುನ್​ (ಯಾಲಿನಾ ಜಮಾನಿ) ಅವರು ರಾಕೇಶ್​ ಬೇಡಿ ಅವರ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ರೆಡ್ ಎಫ್‌ಎಂ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಬೇಡಿ, ನಾನು ಮುತ್ತು ನೀಡಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದರು. 
ಮಾತು ಮುಂದುವರಿಸಿದ ಅವರು, ಧುರಂಧರ್‌ನಲ್ಲಿ ನನ್ನ ಮಗಳ ಪಾತ್ರವನ್ನು ನಿರ್ವಹಿಸುವ ಹುಡುಗಿ ಸಾರಾ ಅರ್ಜುನ್. ಶೂಟಿಂಗ್ ಮಾಡುವಾಗ, ಆಕೆ ಬಂದಾಗಲೆಲ್ಲಾ, ನಾನು ಅವಳನ್ನು ತಬ್ಬಿಕೊಂಡು ಹಣೆಗೆ ಮುತ್ತಿಡುತ್ತಿದ್ದೆ. ಅಲ್ಲಿ ಸಾರಾ ಪೋಷಕರು ಕೂಡ ಇದ್ದರು. ಆಕೆ ನನ್ನ ಮಗಳಂತೆ. ಬನ್ನಿ, ಚಿಂತಿಸಬೇಡಿ, ನಾವು ಒಟ್ಟಿಗೆ ಒಂದು ಉತ್ತಮ ದೃಶ್ಯವನ್ನು ಮಾಡುತ್ತಿದ್ದೇವೆ ಎಂದು ಶೂಟಿಂಗ್​ ಸಮಯದಲ್ಲಿ ನಾನು ಆಕೆಗೆ ಹೇಳುತ್ತಿದ್ದೆ. ಟ್ರೇಲರ್ ಬಿಡುಗಡೆಯ ಸಮಯದಲ್ಲಿಯೂ ಆಕೆಯನ್ನು ಅದೇ ರೀತಿ ಸ್ವಾಗತಿಸಿದೆ. ಆದರೆ, ಜನರು ತಮಗನಿಸಿದ್ದನ್ನು ಬರೆಯಲು ಪ್ರಾರಂಭಿಸಿದರು ಎಂದರು.
ಅದೃಷ್ಟವಶಾತ್, ಕೆಲವರು ನನ್ನನ್ನು ಸಮರ್ಥಿಸಿಕೊಂಡರು. ಆದರೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಜನರಿಗೆ ಮಾತನಾಡಲು ಒಂದು ಕಾರಣ ಬೇಕು. ಹೀಗಾಗಿ, ಇಲ್ಲಸಲ್ಲದನ್ನು ಹರಡುತ್ತಿದ್ದಾರೆ. ನಾನು ಯಾವಾಗಲೂ ಆಕೆಯ ಜೊತೆ ತಂದೆಯಂತೆಯೇ ನಡೆದುಕೊಂಡಿದ್ದೇನೆಂದು ನಾನು ಭಾವಿಸುತ್ತೇನೆ. ಕೆಟ್ಟ ಉದ್ದೇಶವಿದ್ದರೆ ನಾನು ಸಾರ್ವಜನಿಕವಾಗಿ ಹಾಗೆ ಮಾಡುತ್ತಿರಲಿಲ್ಲ. ಜನರ ಕಣ್ಣಲ್ಲೇ ದೋಷವಿದೆ ಎಂದು ರಾಕೇಶ್​ ಬೇಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net