ಒಟಿಟಿಯಲ್ಲಿ ಧುರಂಧರ್ ನೋಡಿದವರಿಗೆ ಶಾಕ್​: ಅಯ್ಯೋ ಚಿತ್ರತಂಡ ಈ ರೀತಿ ಮಾಡಬಾರದಿತ್ತು ಎಂದು ಆಕ್ರೋಶ! Dhurandhar OTT

ಒಟಿಟಿಯಲ್ಲಿ ಧುರಂಧರ್ ನೋಡಿದವರಿಗೆ ಶಾಕ್​
ಒಟಿಟಿಯಲ್ಲಿ ಧುರಂಧರ್ ನೋಡಿದವರಿಗೆ ಶಾಕ್​
Published on

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದ ರಣವೀರ್​ ಸಿಂಗ್ ನಟನೆಯ ಧುರಂಧರ್ ಸಿನಿಮಾ ಒಟಿಟಿಗೆ ಲಗ್ಗೆ
  • 1000 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ 2025ರಲ್ಲಿ ಅತಿಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾ
  • ರಣವೀರ್ ಸಿಂಗ್​ ಅವರ ಸಿನಿಮಾ ವೃತ್ತಿಜೀವನದಲ್ಲಿ ಅತಿ ದೊಡ್ಡ ಹಿಟ್ ಆದ ಧುರಂಧರ್​
  • ಈ ಸಿನಿಮಾ ಒಟಿಟಿ ಪ್ರಿಯರಿಗೆ ಒಂದು ವಿಚಾರದಲ್ಲಿ ಬೇಸರ ಉಂಟು ಮಾಡಿದೆ
Dhurandhar OTT : ಬಾಲಿವುಡ್​ ಸೂಪರ್​ ಸ್ಟಾರ್ ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. 1000 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ 2025ರಲ್ಲಿ ಅತಿಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾ ಎಂಬ ದಾಖಲೆ ಬರೆದಿದೆ. ತನ್ನ ವಿಭಿನ್ನ ಕಥೆ ಮತ್ತು ಅದ್ಧೂರಿ ಸಾಹಸ ದೃಶ್ಯಗಳೊಂದಿಗೆ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಧುರಂಧರ್, ಮೊದಲ ದಿನದಿಂದಲೇ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. 
ಒಂದೆಡೆ ಈ ಚಿತ್ರವನ್ನು ನಿಷೇಧಿಸಬೇಕೆಂಬ ಬೇಡಿಕೆಗಳು ಸಹ ಕೇಳಿಬಂತು, ಮತ್ತೊಂದೆಡೆ ಈ ಚಿತ್ರದ ಬಗ್ಗೆ ತೀವ್ರ ಟೀಕೆಗಳು ಸಹ ವ್ಯಕ್ತವಾದವು. ಎಷ್ಟೇ ಅಡೆತಡೆ ಎದುರಾದರು ಕೂಡ ಈ ಚಿತ್ರ ಯಾವುದೇ ಹಿಂಜರಿಕೆ ಇಲ್ಲದೇ 1000 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆ. ಈ ಸಿನಿಮಾ ರಣವೀರ್ ಸಿಂಗ್​ ಅವರ ಸಿನಿಮಾ ವೃತ್ತಿಜೀವನದಲ್ಲಿ ಅತಿ ದೊಡ್ಡ ಹಿಟ್ ಆಗಿದೆ. ಅಂದಹಾಗೆ, ಈ ಸಿನಿಮಾ ನಿನ್ನೆ (ಜ.29) ಭಾರಿ ನಿರೀಕ್ಷೆಗಳೊಂದಿಗೆ ಒಟಿಟಿಗೆ ಲಗ್ಗೆ ಇಟ್ಟಿದೆ. ಆದರೆ, ಈ  ಸಿನಿಮಾ ಒಟಿಟಿ ಪ್ರಿಯರಿಗೆ ಒಂದು ವಿಚಾರದಲ್ಲಿ ಬೇಸರ ಉಂಟು ಮಾಡಿದೆ. ಅದೇನೆಂದು, ನಾವೀಗ ತಿಳಿದುಕೊಳ್ಳೋಣ. 
ಬಾಲಿವುಡ್ ಪ್ರೇಕ್ಷಕರು ಹಾಗೂ ಭಾರತೀಯ ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದ ಧುರಂಧರ್ ಸಿನಿಮಾ ಕೊನೆಗೂ ಒಟಿಟಿಗೆ ಬಂದಿದೆ. ದೈತ್ಯ ಸ್ಟ್ರೀಮಿಂಗ್ ಕಂಪನಿ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಒಂದು ಸುದ್ದಿ ವೈರಲ್ ಆಗಿದ್ದು, ಅದು ಪ್ರೇಕ್ಷಕರನ್ನು ತೀವ್ರ ನಿರಾಶೆಗೊಳಿಸಿದೆ. ಅಂದರೆ, ಈ ಚಿತ್ರವು ಮೂರು ಗಂಟೆ 34 ನಿಮಿಷಗಳ ರನ್​ ಟೈಮ್​ನಿಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆದರೆ, ಒಟಿಟಿಗೆ ಬಂದ ನಂತರ, ಇದು 3 ಗಂಟೆ 25 ನಿಮಿಷಗಳ ರನ್​ಟೈಮ್​ ಮಾತ್ರ ಇದೆ. ಉಳಿದ 9 ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ. ಹೀಗ್ಯಾಕೆ ಮಾಡಿದರು ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.  ಈ ವಿಚಾರವಾಗಿ ಸಿನಿ ಪ್ರೇಮಿಗಳು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಿನಿಮಾ ತಂಡ ಪ್ರತಿಕ್ರಿಯೆ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ. 
ಬಾಲಿವುಡ್ ಹೀರೋ ರಣವೀರ್ ಸಿಂಗ್ ಅವರ ಸಿನಿಮಾಗಳು ಹೆಚ್ಚಾಗಿ ಒಂದು ಉತ್ತಮ ಸಂದೇಶವನ್ನು ಹೊಂದಿರುತ್ತವೆ. ಕೆಲವು ಸಿನಿಮಾಗಳು ಜನರಿಂದ ತುಂಬಾ ಮೆಚ್ಚಿಗೆ ಗಳಿಸಿವೆ. ಈಗ ಧುರಂಧರ್ ಸಿನಿಮಾ ಕೂಡ ವಿಮರ್ಶಾತ್ಮಕ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಭಾರಿ ಯಶಸ್ಸನ್ನು ಕಂಡಿದ್ದು, ಪ್ರತಿದಿನ ಕಲೆಕ್ಷನ್ ಸುರಿಮಳೆಗೈಯುವ ಮೂಲಕ ಬಾಲಿವುಡ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಇದರಲ್ಲಿ ಕೆಲವು ಬೋಲ್ಡ್ ದೃಶ್ಯಗಳ ಜೊತೆಗೆ ಭಾರೀ ಆಕ್ಷನ್ ದೃಶ್ಯಗಳೂ ಇವೆ. 
ಸಾಮಾನ್ಯವಾಗಿ ಒಟಿಟಿಗೆ ಬರುವ ಯಾವುದೇ ಸಿನಿಮಾಗಳು ಸ್ವಲ್ಪ ಬೋಲ್ಡ್ ಆಗಿರುತ್ತವೆ. ಒಟಿಟಿಯಲ್ಲಿ ಯಾವುದೇ ನಿರ್ಬಂಧಗಳಿಲ್ಲದ ಕಾರಣ, ಹೆಚ್ಚಿನ ಸಿನಿಮಾಗಳು ನೇರವಾಗಿ ಇಲ್ಲಿ ಬಿಡುಗಡೆಯಾಗುತ್ತವೆ. ಆದರೆ, ಧುರಂಧರ್​ ಸಿನಿಮಾದ ಕೆಲವು ದೃಶ್ಯಗಳನ್ನು ಕಡಿತಗೊಳಿರುವುದು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಚಿತ್ರತಂಡ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡೋಣ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net