3 ಗಂಟೆ 55 ನಿಮಿಷ! : ದೀರ್ಘಾವಧಿ ಪ್ರದರ್ಶನ ಕಾಣಲಿದೆ ‘ಧುರಂಧರ್: ದ ರಿವೇಂಜ್’

ಧುರಂಧರ್ ಚಿತ್ರದ ದೃಶ್ಯ
ಧುರಂಧರ್ ಚಿತ್ರದ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಭಾಗಕ್ಕಿಂತ ಸೀಕ್ವೆಲ್ 10ರಿಂದ 15 ಅವಧಿ ಹೆಚ್ಚು
  • ಇಷ್ಟು ಹೊತ್ತು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಹಸ
  • ಶೀಘ್ರದಲ್ಲಿಯೇ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧ
ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರವು ಅವಧಿ ವಿಚಾರವಾಗಿಯೇ ಹೆಚ್ಚು ಗಮನಸೆಳೆದಿತ್ತು. ಆ ಚಿತ್ರವು ಬರೋಬ್ಬರಿ 3 ಗಂಟೆ 34 ನಿಮಿಷ ಅವಧಿ ಹೊಂದಿತ್ತು. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ದೀರ್ಘಾವಧಿ ಸಿನಿಮಾ ಇದಾಗಿತ್ತು. ಅವಧಿ ಹೆಚ್ಚಿದ್ದರೂ ಅಧಿಕ ಪ್ರೇಕ್ಷಕರು ಚಿತ್ರ ವೀಕ್ಷಿಸಿದರು. ಹೀಗಾಗಿಯೇ ‘ಧುರಂಧರ್’ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಿ, ಅಂದಾಜು 1300 ಕೋಟಿ ಗಳಿಕೆ ಮಾಡಿತ್ತು. ಇದೇ ಯಶಸ್ಸಿನಲ್ಲಿ ಆದಿತ್ಯ ಧರ್ ಸೀಕ್ವೆಲ್ ‘ಧುರಂಧರ್: ದ ರಿವೇಂಜ್’ ಘೋಷಿಸಿದ್ದರು. ಇದೇ 19ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಬಿಡುಗಡೆಗೆ ಸಿದ್ಧವಾಗಿರುವ ಚಿತ್ರದ ಕುರಿತಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ‘ಧುರಂಧರ್’ ಚಿತ್ರದ ಮೊದಲ ಭಾಗಕ್ಕಿಂತ, ಸೀಕ್ವೆಲ್ ಅವಧಿ ಹೆಚ್ಚಿರಲಿದೆಯದೆ ಎಂದು ವರದಿಯಾಗಿದೆ. ಮೊದಲ ಭಾಗವು 214 ನಿಮಿಷ (3.34 ಗಂಟೆ) ಇದ್ದರೆ, ಅದರ ಸೀಕ್ವೆಲ್ ಬರೋಬ್ಬರಿ 3 ಗಂಟೆ 40 ನಿಮಿಷದಿಂದ 3 ಗಂಟೆ 55 ನಿಮಿಷದವರಗೆ ಪ್ರದರ್ಶನ ಕಾಣಲಿದೆ ಎಂದು ಮೂಲಗಳು ತಿಳಿಸಿವೆ. ಮೊದಲ ಭಾಗಕ್ಕಿಂತ 10 ರಿಂದ 15 ನಿಮಿಷ ಹೆಚ್ಚಿರಲಿದೆ. 26 ವರ್ಷಗಳ ಬಳಿಕ ಭಾರತೀಯ ಚಿತ್ರರಂಗದ ದೀರ್ಘಾವಧಿ ಪ್ರದರ್ಶನ ಕಾಣಲಿರುವ ಸಿನಿಮಾ ಎಂಬ ಗರಿಮೆ ಇದು ಪಾತ್ರವಾಗಲಿದೆ. ಇನ್ನು 2001ರಲ್ಲಿ ರಿಲೀಸ್ ಆಗಿದ್ದ ಹಿಂದಿಯ ‘ಎಲ್‌ಓಸಿ: ಕಾರ್ಗಿಲ್’ ಚಿತ್ರವು 4 ಗಂಟೆ 7 ನಿಮಿಷ ಅವಧಿ ಹೊಂದಿತ್ತು. ಈವರೆಗಿನ ಅತಿ ಹೆಚ್ಚು ಅವಧಿ ಹೊಂದಿರುವ ಸಿನಿಮಾ ಇದಾಗಿದ್ದು, ನಂತರದ ಸ್ಥಾನ ‘ಧುರಂಧರ್: ದ ರಿವೆಂಜ್’ಗೆ ಸಿಗಲಿದೆ.-ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net