ಗಲ್ಲಾ ಪೆಟ್ಟಿಗೆಯಲ್ಲಿ ಧೂಳ್​ ಎಬ್ಬಿಸಿದ ಧುರಂಧರ್​: ಹೊಸ ದಾಖಲೆ ಬರೆದ ರಣವೀರ್ ಸಿಂಗ್ ಚಿತ್ರ! | Dhurandhar

Dhurandhar
Dhurandhar
Published on
ಮುಂಬೈ: ಆದಿತ್ಯ ಧರ್ ನಿರ್ದೇಶನದ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರ ಧುರಂಧರ್(Dhurandhar)​ ದೇಶದ್ಯಾಂತ ಬ್ಲಾಕ್​​ಬ್ಲಾಸ್ಟರ್​ ಹಿಟ್​ ಆಗಿದೆ. ನಿಜ ಘಟನೆಗಳಿಂದ ಸ್ಫೂರ್ತಿ ಪಡೆದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಧೂಳ್​ ಎಬ್ಬಿಸುತ್ತಿದೆ.
ಹೌದು, ಭಾರತ-ಪಾಕಿಸ್ತಾನದ ಭೂರಾಜಕೀಯ ಸಂಘರ್ಷ, ಉಗ್ರವಾದ ಮತ್ತು ಬೇಹುಗಾರಿಕೆಯ ಹಿನ್ನೆಲೆಯಲ್ಲಿ ನಡೆಯುವ ಈ ಥ್ರಿಲ್ಲರ್ ಕಥೆ ಡಿಸೆಂಬರ್ 20(ಶನಿವಾರ) ದಿನದಂದು ಭಾರತದಲ್ಲಿ ನೆಟ್ ಕಲೆಕ್ಷನ್ 500 ಕೋಟಿ ರೂ. ಗಡಿ ದಾಟಿದೆ ಎಂದು ವರದಿಯಾಗಿದೆ.

ಸಿನಿಮಾ ಟ್ರ್ಯಾಕರ್‌ಗಳ ಪ್ರಕಾರ

ದಿನ 15 (ಡಿಸೆಂಬರ್ 19, ಶುಕ್ರವಾರ): ಸುಮಾರು 22.5 ಕೋಟಿ, ಒಟ್ಟು 483 ಕೋಟಿ ಹಾಗೂ ದಿನ 16 (ಡಿಸೆಂಬರ್ 20, ಶನಿವಾರ) ಸುಮಾರು 30-33.5 ಕೋಟಿ, ಒಟ್ಟು 516.5 ಕೋಟಿಗೆ ತಲುಪಿದ್ದು ಇದರೊಂದಿಗೆ 500 ಕೋಟಿ ಕ್ಲಬ್​ಗೆ ಎಂಟ್ರಿ ಕೊಟ್ಟಿದೆ. ಇದು 2025ರಲ್ಲಿ ಭಾರತದಲ್ಲಿ 500 ಕೋಟಿ ನೆಟ್ ಮಾಡಿದ ಮೊದಲ ಅಥವಾ ವೇಗವಾದ ಹಿಂದಿ ಚಿತ್ರಗಳಲ್ಲಿ ಒಂದು (ಜವಾನ್, ಗದರ್ 2 ನಂತರ).ವಿಶ್ವಾದ್ಯಂತ ಇದುವರೆಗೂ ಈ ಚಿತ್ರ 730-751 ಕೋಟಿ ದಾಟಿದೆ ಎಂದು ವರದಿ ಉಲ್ಲೇಖಿಸಿದೆ.
ಜೇಮ್ಸ್ ಕ್ಯಾಮೆರಾನ್‌ನ 'ಅವತಾರ್: ಫೈರ್ ಅಂಡ್ ಆಶ್' ರಿಲೀಸ್ ಆದರೂ ಧುರಂಧಾರ್ ತನ್ನ ಆಕ್ಯುಪೆನ್ಸಿ ಕಾಯ್ದುಕೊಂಡಿದೆ ಮತ್ತು ಹೆಚ್ಚಿನ ಕಲೆಕ್ಷನ್ ಮಾಡಿದೆ. ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ತ್, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮುಖ್ಯ ಭೂಮಿಕೆಗಳಲ್ಲಿದ್ದಾರೆ. ಅಕ್ಷಯ್ ಖನ್ನಾ ಅವರ ಪ್ರದರ್ಶನಕ್ಕೆ ವಿಶೇಷ ಪ್ರಶಂಸೆ ಲಭಿಸಿದೆ.ಈ ಯಶಸ್ಸು ರಣವೀರ್ ಸಿಂಗ್ ಅವರ ಕರಿಯರ್‌ನ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಮಾರ್ಪಟ್ಟಿದೆ. ಸೀಕ್ವೆಲ್ (ಧುರಂಧಾರ್ ಪಾರ್ಟ್ 2) ಮಾರ್ಚ್ 2026ಕ್ಕೆ ಬರಲಿದೆ.

ಧುರಂಧರ್ ಚಿತ್ರದ ಕಥಾ ಸಾರಾಂಶ

ಕಥೆಯ ಕೇಂದ್ರದಲ್ಲಿ ಇಂಟೆಲಿಜೆನ್ಸ್ ಬ್ಯೂರೋ (IB) ನಿರ್ದೇಶಕ ಅಜಯ್ ಸನ್ಯಾಲ್ (ಆರ್. ಮಾಧವನ್) ಅವರ 'ಪ್ರಾಜೆಕ್ಟ್ ಧುರಂಧರ್' ಎಂಬ ದೀರ್ಘಕಾಲಿಕ ಗುಪ್ತ ಕಾರ್ಯಾಚರಣೆ ಇದೆ. ಇದರ ಉದ್ದೇಶ ಪಾಕಿಸ್ತಾನದ ಉಗ್ರ ನೆಟ್‌ವರ್ಕ್‌ಗಳು, ರಾಜಕಾರಣಿಗಳು ಮತ್ತು ಗ್ಯಾಂಗ್‌ಗಳನ್ನು ಒಳಗಿಂದಲೇ ನಾಶ ಮಾಡುವುದು.ರಣವೀರ್ ಸಿಂಗ್ ಅವರು ಹಮ್ಜಾ ಅಲಿ ಮಜಾರಿ (ನಿಜ ಹೆಸರು: ಜಸ್ಕಿರತ್ ಸಿಂಗ್ ರಂಗಿ) ಎಂಬ ಭಾರತೀಯ RAW ಏಜೆಂಟ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಪಾಕಿಸ್ತಾನದ ಕರಾಚಿಯ ಲ್ಯಾರಿ ಪ್ರದೇಶದಲ್ಲಿ (ಗ್ಯಾಂಗ್‌ವಾರ್‌ಗಳಿಗೆ ಹೆಸರುವಾಸಿ) ತಮ್ಮನ್ನು ಅಡಗಿಸಿಕೊಂಡು, ಬಲೂಚ್ ಗ್ಯಾಂಗ್ ನಾಯಕ ರೆಹಮಾನ್ ದಾಕೈತ್ (ಅಕ್ಷಯ್ ಖನ್ನಾ) ಅವರ ವಿಶ್ವಾಸ ಗಳಿಸುತ್ತಾರೆ. ಮುಂದೆ ಏನಾಗಲಿದೆ ಎಂಬುದೇ ಕೂತುಹಲ!,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net