ಪ್ರಸ್ತುತ, ಚಿತ್ರದ ಪೂರ್ವ-ನಿರ್ಮಾಣ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ, ಈ ವರ್ಷದ ಅಂತ್ಯದ ವೇಳೆಗೆ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ಮುನ್ಸೂಚನೆಯಿದೆ. 'ಧುರಂಧರ್' ಚಿತ್ರದಲ್ಲಿ ತನ್ನ ಅಭಿನಯದ ಮೂಲಕ ನೋಡುಗರ ಗಮನನವನ್ನು ತನ್ನತ್ತ ಸೆಳೆದ ಸಾರಾ, ಈಗ ಮಧುಬಾಲಾ ಅವರಂತಹ ಐಕಾನಿಕ್ ನಟಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಬೆಳ್ಳಿ ಪರದೆಯ ಮೇಲೆ ಹೇಗಿರಬಹುದು ಎಂಬ ಕುತೂಹಲ ಸದ್ಯ ಸಿನಿಪ್ರಿಯರಲ್ಲಿ ಕೆರಳಿದೆ. ಈ ಕುರಿತು ಚಿತ್ರತಂಡದಿಂದ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ,(ಏಜೆನ್ಸೀಸ್).