ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್' ಅಬ್ಬರ: ಮೊದಲ ದಿನವೇ 100 ಕೋಟಿ ಲೂಟಿ! | Dhurandhar

Dhurandhar2
Dhurandhar2
Published on
ಮುಂಬೈ: ಬಾಲಿವುಡ್‌ನ ಎನರ್ಜೆಟಿಕ್ ಸ್ಟಾರ್ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ 'ಧುರಂಧರ್: ದಿ ರಿವೆಂಜ್' (Dhurandhar: The Revenge) ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಗುರುವಾರ ಬಿಡುಗಡೆಯಾದ ಈ ಚಿತ್ರವು ಮೊದಲ ದಿನವೇ ಭಾರತೀಯ ಚಿತ್ರರಂಗದ ದೈತ್ಯ ಸಿನಿಮಾಗಳ ದಾಖಲೆಗಳನ್ನು ಪುಡಿಪುಡಿ ಮಾಡಿದೆ.
ಟ್ರೇಡ್ ಅನಾಲಿಟಿಕ್ಸ್ ಸಂಸ್ಥೆ 'ಸ್ಯಾಕ್ನಿಲ್ಕ್' (Sacnilk) ವರದಿಯ ಪ್ರಕಾರ, 'ಧುರಂಧರ್' ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಭಾರತದಾದ್ಯಂತ ಅಂದಾಜು 100 ಕೋಟಿ ರೂಪಾಯಿ (Nett) ಕಲೆಕ್ಷನ್ ಮಾಡಿದೆ. ಈ ಮೂಲಕ ರಣವೀರ್ ಸಿಂಗ್ ವೃತ್ತಿಜೀವನದ ಅತಿದೊಡ್ಡ ಓಪನರ್ ಆಗಿ ಈ ಚಿತ್ರ ಹೊರಹೊಮ್ಮಿದೆ. ವಿಶೇಷವೆಂದರೆ, ಬುಧವಾರ ನಡೆದ ಪ್ರೀಮಿಯರ್ ಶೋಗಳಿಂದಲೇ ಈ ಚಿತ್ರ 43 ಕೋಟಿ ರೂಪಾಯಿ ಗಳಿಸಿತ್ತು. ಒಟ್ಟಾರೆಯಾಗಿ ಎರಡು ದಿನಗಳಲ್ಲಿ ಚಿತ್ರದ ಒಟ್ಟು ಗಳಿಕೆ 143 ಕೋಟಿ ರೂಪಾಯಿ ದಾಟಿದೆ.

ದೈತ್ಯ ಸಿನಿಮಾಗಳನ್ನು ಹಿಂದಿಕ್ಕಿದ ಧುರಂಧರ್

ಈ ಭರ್ಜರಿ ಓಪನಿಂಗ್ ಮೂಲಕ 'ಧುರಂಧರ್' ಚಿತ್ರವು ಶಾರುಖ್ ಖಾನ್ ಅವರ 'ಜವಾನ್', ಪ್ರಭಾಸ್ ಅವರ 'ಕಲ್ಕಿ 2898 AD', 'ಸಲಾರ್' ಮತ್ತು ರಜನಿಕಾಂತ್ ಅವರ 'ಕೂಲಿ' ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕಿದೆ.

ಭಾರತದ ಟಾಪ್ 10 ಬಿಗ್ ಓಪನರ್ಸ್

| ಸ್ಥಾನ | ಚಿತ್ರದ ಹೆಸರು | ಕಲೆಕ್ಷನ್ (ಕೋಟಿ ರೂ.) |
| 1 | ಪುಷ್ಪ: ದಿ ರೂಲ್ | 164 ಕೋಟಿ ರೂ. |
| 2 | RRR | 133 ಕೋಟಿ ರೂ. |
| 3 | KGF ಚಾಪ್ಟರ್ 2 | 116 ಕೋಟಿ ರೂ. |
| 4 | ಧುರಂಧರ್: ದಿ ರಿವೆಂಜ್ | 100 ಕೋಟಿ ರೂ. |
| 5 | ಕಲ್ಕಿ 2898 AD | 95 ಕೋಟಿ ರೂ. |
| 6 | ಸಲಾರ್ | 91 ಕೋಟಿ ರೂ. |
| 7 | ಆದಿಪುರುಷ್ | 87 ಕೋಟಿ ರೂ. |
| 8 | ದೇವರ | 83 ಕೋಟಿ ರೂ.|
| 9 | ಜವಾನ್ | 75 ಕೋಟಿ ರೂ. |
| 10 | ಕೂಲಿ | 65 ಕೋಟಿ ರೂ. |

ಚಿತ್ರದ ಕಥಾವಸ್ತು ಮತ್ತು ವಿಮರ್ಶೆ

ಆದಿತ್ಯ ಧರ್ ನಿರ್ದೇಶನದ ಈ ಹೈ-ವೋಲ್ಟೇಜ್ ಪೊಲಿಟಿಕಲ್ ಡ್ರಾಮಾದಲ್ಲಿ ರಣವೀರ್ ಸಿಂಗ್ ಪಾಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುವ ಭಾರತೀಯ ಗೂಢಚಾರನ (Spy) ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವಿಮರ್ಶಕರು ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದು, 'ಇಂಡಿಯಾ ಟುಡೇ' ಈ ಚಿತ್ರಕ್ಕೆ 3.5 ರೇಟಿಂಗ್ ನೀಡಿದೆ. "ಧುರಂಧರ್ ಕೇವಲ ಆಕ್ಷನ್ ಸಿನಿಮಾ ಅಲ್ಲ, ಇದು ಪಾತ್ರಗಳ ಸುತ್ತ ಹೆಣೆಯಲಾದ ತೀವ್ರವಾದ ರಾಜಕೀಯ ಸಂಘರ್ಷ" ಎಂದು ವಿಮರ್ಶೆಯಲ್ಲಿ ಹೇಳಲಾಗಿದೆ.

ವೀಕೆಂಡ್ ಟಾರ್ಗೆಟ್ 500 ಕೋಟಿ!

ಈಗಾಗಲೇ ಈದ್ ಹಬ್ಬದ ರಜೆ ಇರುವುದರಿಂದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಮೊದಲ ವೀಕೆಂಡ್ ಮುಗಿಯುವಷ್ಟರಲ್ಲಿ ಈ ಚಿತ್ರ ಭಾರತವೊಂದರಲ್ಲೇ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರದ ಹವಾ ಜೋರಾಗಿದ್ದು, ರಣವೀರ್ ಸಿಂಗ್ ಈಗ ಜಾಗತಿಕ ಮಟ್ಟದ ಬಾಕ್ಸ್ ಆಫೀಸ್ ಸುಲ್ತಾನನಾಗಿ ಹೊರಹೊಮ್ಮುತ್ತಿದ್ದಾರೆ.
ನಿರ್ದೇಶನ: ಆದಿತ್ಯ ಧರ್
ತಾರಾಗಣ: ರಣವೀರ್ ಸಿಂಗ್, ಆರ್. ಮಾಧವನ್, ಅರ್ಜುನ್ ರಾಂಪಾಲ್.
ವಿಷಯ: ಪಾಕಿಸ್ತಾನದಲ್ಲಿ ಭಾರತೀಯ ಏಜೆಂಟ್‌ನ ಸಾಹಸಗಾಥೆ.
ವಿಶೇಷತೆ: ಮೊದಲ ದಿನವೇ 100 ಕೋಟಿ ಗಳಿಸಿದ ರಣವೀರ್ ಸಿಂಗ್ ಮೊದಲ ಸಿನಿಮಾ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net