ಭಾರತೀಯ ಸಿನಿಮಾ ಇತಿಹಾಸವನ್ನೇ ಬದಲಿಸಲಿದೆ ಧುರಂಧರ್ 2: ಬಿಡುಗಡೆಗೂ ಮೊದಲೇ ಭವಿಷ್ಯ ನುಡಿದ ರಣವೀರ್ ಸಿಂಗ್! Dhurandhar 2
ನಾಯಕ ನಟ ರಣವೀರ್ ಸಿಂಗ್, ಧುರಂಧರ್ 2
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಾರ್ಚ್ 19 ರಂದು ಬಿಡುಗಡೆಯಾಗಲಿರುವ ಧುರಂಧರ್ 2 ಸಿನಿಮಾ
ಧುರಂಧರ್ 2 ಇದು ಭಾರತೀಯ ಸಿನಿಮಾ ಇತಿಹಾಸವನ್ನೇ ಬದಲಿಸಲಿದೆ ಎಂದ ರಣವೀರ್ ಸಿಂಗ್
ಮುಂಬೈನಲ್ಲಿ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ನಟ
ಮುಂಬೈ: ಭಾರತೀಯ ಸಿನಿ ಪ್ರೇಕ್ಷಕರು ಉತ್ಸುಕತೆಯಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ಧುರಂಧರ್ 2 (Dhurandhar 2). ಈ ಸಿನಿಮಾವು ನಾಳೆ (ಗುರುವಾರ, ಮಾ.19) ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಬುಧವಾರ(ಮಾ.18) ಪ್ರೀಮಿಯರ್ ಶೋನಲ್ಲಿ ಸಹ ಚಲನಚಿತ್ರವನ್ನು ನೋಡಬಹುದಾಗಿದೆ.
ಮಂಗಳವಾರ (ಮಾ.17) ನಡೆದಿದ್ದ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ, ಸಿನಿಮಾದ ನಾಯಕನಟ ರಣವೀರ್ ಸಿಂಗ್, ಧುರಂಧರ್ 2 ಸಿನಿಮಾ ಭಾರತೀಯ ಸಿನಿಮಾ ರಂಗದ ಭವಿಷ್ಯ ಬರೆಯಲಿದೆ ಎಂಬ ಹೇಳಿಕೆ ಫುಲ್ ವೈರಲ್ ಆಗುತ್ತಿದೆ.
ಕಾರ್ಯಕ್ರಮದಲ್ಲಿ ನರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ರಣವೀರ್, ನಮ್ಮ ಈ ಧುರಂಧರ್ ಸಿನಿಮಾ ಇಷ್ಟೊಂದು ಯಶಸ್ಸನ್ನು ಕಾಣಲು ನಿಮ್ಮ ಪ್ರೀತಿಯೇ ಕಾರಣವಾಗಿದೆ. ಇದು ಕೇವಲ ಒಂದು ಸಿನಿಮಾವಾಗಿ ಸೀಮಿತವಾಗದೆ, ಜಗತ್ತಿನದ್ಯಂತ ಖ್ಯಾತಿಗಳಿಸಲು ಕಾರಣರಾದ ನಿಮಗೆ ಧನ್ಯವಾದ ಎಂದು ನಾಯಕ ನಟ ಹೇಳಿದರು.
ಈಗ ಇದೇ ಯುಗಾದಿಯ ದಿನ ಧುರಂಧರ್ 2 ಬಿಡುಗಡೆಯಾಗಲಿದ್ದು, ಈ ಸಿನಿಮಾದ ಬಿಡುಗಡೆಯನ್ನು ಕೇವಲ ಭಾರತವಲ್ಲ, ಬದಲಿಗೆ ಈಡೀ ವಿಶ್ವವೇ ಕಾಯುತ್ತಾ ನಿಂತಿದೆ. ಈ ಯುಶಸ್ಸಿನಿಂದ ನಮ್ಮ ತಂಡಕ್ಕೆ ಬಹಳ ಸಂತೋಷವಾಗಿದೆ, ಇದೆಲ್ಲಕ್ಕೂ ಕಾರಣೀಕರ್ತರಾದ ತಮಗೆ ಹರ್ತೂವಕ ಧನ್ಯವಾದಗಳು. ಕೊನೆಯಲ್ಲಿ ನಾನು ಒಂದೇ ಮಾತನ್ನು ಹೇಳಲು ಇಷ್ಟ ಪಡುತ್ತೇನೆ, ಅದೆನೆಂದರೆ ಭಾರತೀಯ ಸಿನಿಮಾ ರಂಗದ ಭವಿಷ್ಯವನ್ನು ನಮ್ಮ ಧುರಂಧರ್ 2 ಸಿನಿಮಾ ಬರೆಯಲಿದೆ ಎಂದು ರಣವೀರ್ ಸಿಂಗ್ ಹೇಳಿದ್ದಾರೆ.
ಹಾಜರಿದ್ದ ಸದಸ್ಯರು
ಮಂಗಳವಾರ (ಮಾ.17) ಮುಂಬೈನಲ್ಲಿ ನಡೆದ ಈ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ, ನಟ ರಣವೀರ್ ಸಿಂಗ್ ಜೊತೆಗೆ ನಾಯಕಿ, ಸಾರಾ ಅರ್ಜುನ್, ಶಾಶ್ವತ್ ಸಚ್‌ದೇವ್, ಜಾಸ್ಮಿನ್ ಸ್ಯಾಂಡ್ಲಾಸ್, ಖಾನ್ ಸಾಬ್, ಸುಧೀರ್ ಯದುವಂಶಿ ಮತ್ತು ಶಹಜಾದ್ ಅಲಿ ಹಾಜರಿದ್ದರು.
ಧುರಂಧರ್ ಬಗ್ಗೆ
ಧುರಂಧರ್ ಇದು ಭಾರತದ ಗೂಢಾಚಾರನೊಬ್ಬ ಪಾಕಿಸ್ತಾನಕ್ಕೆ ತೆರಳಿ ಏನೇನು ಮಾಡುತ್ತಾನೆ ಎನ್ನುವುದೇ ಕಥಾಹಂದರವಾಗಿದೆ. ಈ ಸಿನಿಮಾವನ್ನು ಉರಿ ಖ್ಯಾತಿಯ ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್,ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದ ಮೊದಲ ಭಾಗವು ಡಿಸೆಂಬರ್ 5, 2025 ರಂದು ಬಿಡುಗಡೆಯಾಗಿ, ಸುಮಾರು 1000 ಕೋಟಿಗೂ ಮೀರಿದ ಕಲೆಕ್ಷನ್ ಮಾಡುವ ಮೂಲಕ ಆ ವರ್ಷ ಅತಿ ಹೆಚ್ಚು ಹಣಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಈಗ ಈ ಸಿನಿಮಾದ ಎರಡನೇ ಭಾಗ ಧುರಂಧರ್ 2: ದಿ ರಿವೆಂಜ್ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದ್ದು, ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು ಮತ್ತು ಮಳಿಯಾಳಂ ಭಾಷೆಯಲ್ಲಿ ಸಹ ತೆರೆಕಾಣಲು ಸಿದ್ದವಾಗಿದೆ,(ಏಜನ್ಸೀಸ್).