ಧುರಂಧರ್ 2 ಪ್ರೊಪಗಾಂಡಾ ಸಿನಿಮಾ: ಪಾಕಿಸ್ತಾನ ಭಯೋತ್ಪಾದಕ ದೇಶ ಡೈಲಾಗ್‌ಗೆ ಕಮಾಲ್​ ಖಾನ್​ ಆಕ್ಷೇಪ! Dhurandhar 2

 ಧುರಂಧರ್ 2(Dhurandhar 2), ಕಮಾಲ್​ ಆರ್​ ಖಾನ್​
ಧುರಂಧರ್ 2(Dhurandhar 2), ಕಮಾಲ್​ ಆರ್​ ಖಾನ್​
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​ 19 ರಂದು ಬಿಡುಗಡೆಯಾಗಲಿರುವ ಧುರಂಧರ್​ 2 ಸಿನಿಮಾ
  • ಸಿನಿಮಾದಲ್ಲಿ ಪಾಕಿಸ್ತಾನ ವಿರೋಧಿ ಡೈಲಾಗ್​
  • ಈ ಸಿನಿಮಾ ಒಂದು ಪ್ರೊಪಗಾಂಡಾ ಎಂದ ಕಮಾಲ್​ ಆರ್​ ಖಾನ್​
ಮುಂಬೈ: ಭಾರತೀಯ ಸಿನಿ ಪ್ರೇಕ್ಷಕರು ಬಹು ಕಾತುರದಿಂದ ಕಾಯುತ್ತಿದ್ದ, ಸಿನಿಮಾ ಎಂದರೆ ಅದು ಧುರಂಧರ್​ 2 (Dhurandhar 2). ಈಗ ಈ ಸಿನಿಮಾವು ಮಾರ್ಚ್​ 19 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಬಾಕ್ಸ್​ ಆಫೀಸ್​ನ್ನು ಕೊಳ್ಳೆ ಹೊಡೆಯಲು ಸನ್ನದ್ಧವಾಗಿದೆ.
ಆದರೆ ಈ ಸಿನಿಮಾದ ಬಿಡುಗಡೆಗೂ ಮುನ್ನವೆ ಹಲವು ವಿವಾದಗಳು ಸಹ ಕೇಳಿಬರುತ್ತಿದ್ದು, ಈ ಸಿನಿಮಾ ಹಿಂಸೆಯನ್ನು ವಿಜೃಂಭಣೆ ಮಾಡುತ್ತಿದೆ ಎಂಬ ಅರೋಪದ ಜೊತೆಗೆ ಕೋಮು ಸೌಹಾರ್ದತೆಯನ್ನು ಸಹ ಹಾಳು ಮಾಡುವ ಶಕ್ತಿ ಈ ಸಿನಿಮಾಗೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಪಾಕಿಸ್ತಾನ ನಂ.1 ಭಯೋತ್ಪಾದಕ ದೇಶ

ಈಗ ಈ ಸಿನಿಮಾದ ಬಗ್ಗೆ, ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಕಮಾಲ್​ ಆರ್​ ಖಾನ್​ (KRK) ನಾಲಿಗೆ ಹರಿಬಿಟ್ಟಿದ್ದು, ಈ ಸಿನಿಮಾ (ಧುರಂಧರ್​ 2) ಒಂದು ಪ್ರೊಪಗಾಂಡಾ ಸಿನಿಮಾ, ಈ ಸಿನಿಮಾ ಕೇವಲ ಪಾಕಿಸ್ತಾನವನ್ನು ಕೆಟ್ಟದಾಗಿ ತೋರಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ಸಿನಿಮಾದಲ್ಲಿ ಪಾಕಿಸ್ತಾನವನ್ನು ನಂಬರ್​ ಒನ್​ ಭಯೋತ್ಪಾದಕ ದೇಶ ಎಂದು ಕರೆಯಲಾಗಿದೆ. ಇದು ಭಾರತೀಯ ಪ್ರೇಕ್ಷಕರಿಗೆ ಮುದ ನೀಡುತ್ತದೆ ಎಂದು ನಿರ್ದೇಶಕ ಆಧಿತ್ಯ ಧರ್​ನಿಗೆ ಗೊತ್ತಿದೆ, ಹಾಗೂ ಈ ಸಿನಿಮಾ ಖಂಡಿತವಾಗಿ ಬ್ಲಾಕ್‌ಬಸ್ಟರ್ ಆಗಲಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಜನರಿಗೆ ಒಂದು ಉತ್ತಮ ಸಿನಿಮಾದ ಬದಲಿಗೆ ಈ ರೀತಿಯ ಕಪೋಲ ಕಲ್ಪಿತ ಸಿನಿಮಾಗಳೇ ಇಷ್ಟವಾಗುವ ಕಾರಣ ನಿರ್ದೇಶಕರು ಸಹ ಇದೇ ರೀತಿಯ ಸಿನಿಮಾಗಳನ್ನು ನಿರ್ಮಿಸಲು ಮುಂದಾಗುತ್ತಿದ್ದಾರೆ. ಹಾಗೆಯೇ ಆದಿತ್ಯ ಧರ್​ನಿಗೆ ಈ ಪ್ರೊಪಗಾಂಡಾ ಸಿನಿಮಾ ಹೊರತು ಪಡಿಸಿ, ಒಂದು ಉತ್ತಮ ಸಿನಿಮಾವನ್ನು ಖಂಡಿತವಾಗಿ ನಿರ್ಮಿಸಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ತಮ್ಮ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಿಡುಗಡೆಗೆ ಮೊದಲೇ ದಾಖಲೆ ಬರೆದ ಧುರಂಧರ್​ 2
ಮಾರ್ಚ್​ 19 ರಂದು ಬಿಡುಗಡೆಯಾಗಲಿರುವ ಧುರಂಧರ್​ 2 ಸಿನಿಮಾ, ಈಗಾಗಲೇ ಮುಂಗಡ ಟಿಕೆಟ್​ ಬುಕ್ಕಿಂಗ್​ನಲ್ಲಿ ನೂತನ ದಾಖಲೆ ನಿರ್ಮಿಸಿದೆ.
ಬಿಡುಗಡೆಗೆ ಮೊದಲೇ ಈ ಸಿನಿಮಾ ಸುಮಾರು 6 ಲಕ್ಷ ಟಿಕೆಟ್​ಗಳನ್ನು ಮಾರಾಟ ಮಾಡಿದ್ದು, ಇದರ ಮೊತ್ತ ಈಗಾಗಲೇ 37 ಕೋಟಿ ಎಂದು ಹೇಳಲಾಗುತ್ತಿದೆ. ಕೇವಲ ಭಾರತಕ್ಕೆ ಸೀಮಿತವಾಗಿರದ ಈ ಸಿನಿಮಾ ಕ್ರೇಜ್​ ವಿದೇಶದಲ್ಲಿ ಕೂಡ ಹಬ್ಬಿದ್ದು ಅಮೇರಿಕಾದಲ್ಲಿಯೇ ಸುಮಾರು 5 ಮಿಲಿಯನ್​ ಮೌಲ್ಯದ ಟಿಕೆಟ್​ಗಳನ್ನು ಮಾರಾಟ ಮಾಡುವ ಮೂಲಕ ಅತ್ಯಧಿಕ ಮುಂಗಡ ಬುಕ್ಕಿಂಗ್​ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ.

ಧುರಂಧರ್​ ಬಗ್ಗೆ

ಧುರಂಧರ್​ ಇದೊಂದು ಸ್ಪೈ-ಥ್ರಿಲ್ಲರ್​ ಸಿನಿಮಾವಾಗಿದ್ದು, ಪಾಕಿಸ್ತಾನದಲ್ಲಿ ಭಾರತೀಯ ಗೂಢಚರ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ವಸ್ತುವಾಗಿದೆ. ಈ ಸಿನಿಮಾದ ಮೊದಲ ಭಾಗವು 2025 ರ ಡಿಸೆಂಬರ್​ನಲ್ಲಿ ತೆರೆಕಂಡು ಸುಮಾರು 1,000 ಕೋಟಿ ಕಲೆಕ್ಷನ್​ ಮಾಡಿತ್ತು. ಈಗ ಈ ಸಿನಿಮಾದ ಎರಡನೆ ಭಾಗ ಮಾರ್ಚ್​ 19 ರಂದು ಬಿಡುಗಡೆಯಾಗಲಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ಅಕ್ಷನ್​ ಖನ್ನಾ,ಆರ್.ಮಾಧವನ್​, ಅರ್ಜುನ್​ ರಾಂಪಾಲ್​, ಸಂಜಯ್​ ದತ್ತ್, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಉರಿ ಖ್ಯಾತಿಯ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net