'ಪ್ರತಿ ರೋಜು ಪಾಂಡಗೆ' ಬಳಿಕ ಯಾವುದೇ ಹಿಟ್ ನೋಡದ ರಾಶಿ, ಬಾಲಿವುಡ್‌ನ ವೆಬ್ ಸರಣಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದನ್ನು ಹೊರತುಪಡಿಸಿದರೆ, ಅವರು ನಟಿಸಿದ ಬಹುತೇಕ ಸಿನಿಮಾಗಳು ಸೋಲಿನ ಹಾದಿಯನ್ನೇ ಹಿಡಿದಿದೆ. 'ಯೋಧ', 'ದಿ ಸಬರ್ಮತಿ ರಿಪೋರ್ಟ್', '120 ಬಹದ್ದೂರ್' ಫ್ಲಾಪ್ ಆಗಿವೆ. ಆದಾಗ್ಯೂ, ತಮಿಳು ಚಿತ್ರರಂಗದಿಂದ ನಟಿಗೆ ಕರ್ಮಷಿಯಲ್ ಹಿಟ್‌ಗಳು ಲಭಿಸಿವೆ. 'ಅರಮನೈ 4' ಚಿತ್ರದಲ್ಲಿ ತಮ್ಮ ಗ್ಲಾಮರ್ ಲುಕ್ ಮೂಲಕ ಚಿತ್ರರಸಿಕರನ್ನು ರಂಜಿಸಿ, ಯಶಸ್ಸನ್ನು ಕಂಡಿದ್ದಾರೆ.