ಬಾಲಿವುಡ್‌ನಲ್ಲಿ ಕೋಮುವಾದ: ಎ.ಆರ್. ರೆಹಮಾನ್ ಹೇಳಿಕೆಗೆ ಜಾವೇದ್ ಅಖ್ತರ್ ಕೊಟ್ಟ ಉತ್ತರವೇನು? A R Rahman

ಎ.ಆರ್. ರೆಹಮಾನ್, ಜಾವೇದ್ ಅಖ್ತರ್
ಎ.ಆರ್. ರೆಹಮಾನ್, ಜಾವೇದ್ ಅಖ್ತರ್
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ನಲ್ಲಿ ಕೋಮುವಾದ ಹೆಚ್ಚುತ್ತಿದೆ ಎಂದ ಎ.ಆರ್​.ರೆಹಮಾನ್​
  • ಎ.ಆರ್​.ರೆಹಮಾನ್​ ಇಂ.ತಹ ಮಾತನ್ನು ಹೇಳಿರಲು ಸಾಧ್ಯವಿಲ್ಲ ಎಂದ ಜಾವೇದ್​ ಅಖ್ತರ್​
ಬಾಲಿವುಡ್: ಬಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮುವಾದಿ ಮನೋಭಾವನೆ ಬೆಳೆಯುತ್ತಿರುವ ಕಾರಣ ತನಗೆ ಚಿತ್ರರಂಗದಲ್ಲಿ ಕಡಿಮೆ ಅವಕಾಶ ದೊರೆಯುತ್ತಿದೆ ಎಂದು ಎ.ಆರ್. ರೆಹಮಾನ್ (A R Rahman) ಹೇಳಿಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ವೈರಲ್​ ಆಗುತ್ತಿದೆ.
ವೈರಲ್​ ಆಗುತ್ತಿರುವ ರಹಮಾನ್​​ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್, ರೆಹಮಾನ್ ಇಂತಹ ಹೇಳಿಕೆ ನೀಡಿದ ಬಗ್ಗೆ ನನಗೆ ಈಗಲೂ ಅನುಮಾನವಿದೆ. ಸಂಗೀತ ಕ್ಷೇತ್ರದಲ್ಲಿ ಅವರು ತುಂಬಾ ಉನ್ನತ ಸ್ಥಾನದಲ್ಲಿರುವ ಕಾರಣ ಜನ ಅವರನ್ನು ಸಂಪರ್ಕಿಸಲು ಹಿಂಜರಿಯುತ್ತಾರೆ ಎಂದರು.
ರೆಹಮಾನ್ ಒಬ್ಬ ಉತ್ತಮ ಸಂಗೀತ ಸಂಯೋಜಕ ಬಹಳಷ್ಟು ಜನರು ಅವರನ್ನು ಗೌರವಿಸುತ್ತಾರೆ. ಆದರೆ ಅವರು ತುಂಬಾ ದೊಡ್ಡವರಾಗಿರುವುದರಿಂದ ಅವರನ್ನು ತಲುಪಲು ಜನರು ಹೆದರುತ್ತಾರೆ. ಅವರೊಂದಿಗೆ ಮಾತನಾಡಲು ಮತ್ತು ಅವರನ್ನು ನಿಭಾಯಿಸಲು ಅವರು ಹೆದರುತ್ತಾರೆ ಎಂದರು.

ಎ.ಆರ್​. ರೆಹಮಾನ್​ ಏನು ಹೇಳಿದರು?

ಬಿಬಿಸಿ ಏಷ್ಯನ್‌ನ ಯೂಟ್ಯೂಬ್ ಚಾನೆಲ್​ನಲ್ಲಿ ಹರುನ್ ರಷೀದ್ ಅವರಿಗೆ ರೆಹಮಾನ್​ ಸಂದರ್ಶನ ನೀಡಿದ್ದಾರೆ. ರಾಮಾಯಣ ಸಿನಿಮಾಗೆ ಸಂಗೀತ ನೀಡುವಲ್ಲಿ ನಿಮ್ಮ ಧಾರ್ಮಿಕ ನಂಬಿಕೆಗಳು ಪಾತ್ರ ವಹಿಸಿವೆಯೇ ಎಂದು ರೆಹಮಾನ್ ಅವರನ್ನು ಈ ವೇಳೆ ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರ ನೀಡಿದ ರೆಹಮಾನ್​, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೇನೆ. ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಪ್ರತಿ ವರ್ಷ ಹೇಳಿಕೊಡಲಾಗುತ್ತಿತ್ತು. ಆದ್ದರಿಂದ, ನನಗೆ ಕತೆಗಳು ಚೆನ್ನಾಗಿ ತಿಳಿದಿವೆ. ಈ ಕತೆಗಳು ಮಾನವ ದಯೆ, ಉನ್ನತ ಆದರ್ಶಗಳು ಮತ್ತು ಎಲ್ಲದರ ಬಗ್ಗೆ ತಿಳಿಸುತ್ತದೆ. ಜನರು ಏನೇ ವಾದಿಸಬಹುದು ಆದರೆ, ನಾನು ಎಲ್ಲ ಒಳ್ಳೆಯ ವಿಷಯಗಳನ್ನು ಗೌರವಿಸುತ್ತೇನೆ ಮತ್ತೆ ಒಳ್ಳೆಯ ವಿಷಯಗಳನ್ನು ಕಲಿತರೂ ತಪ್ಪಿಲ್ಲ ಎಂದರು.
ನಾನು ತೊಂಭತ್ತರ ದಶಕದಲ್ಲಿ ಕೆಲಸ ಆರಂಭಿಸಿದಾಗ ಯಾವುದೇ ಧಾರ್ಮಿಕ ಪೂರ್ವಾಗ್ರಹಗಳಿರಲಿಲ್ಲ. ಆದರೆ ಕಳೆದ 8 ವರ್ಷಗಳಲ್ಲಿ ಹಿಂದಿ ಚಿತ್ರಗಳಲ್ಲಿ ನನಗೆ ತುಂಬಾ ಕಡಿಮೆ ಕೆಲಸ ಬಂದಿದೆ. ಇದಕ್ಕೆ ಕಾರಣ ನನ್ನ ಪ್ರಯತ್ನದ ಕೊರತೆಯಲ್ಲ ಮತ್ತು ನಾನು ಕೆಲಸಕ್ಕಾಗಿ ಯಾರ ಬಳಿಯೂ ಹೋಗುವುದಿಲ್ಲ. ನನಗೆ ಕಡಿಮೆ ಕೆಲಸ ಸಿಗಲು ಅಧಿಕಾರದ ಹಸ್ತಾಂತರ ಕಾರಣ ಇರಬಹುದು ಅಥವಾ ಕೋಮು ಅಂಶಗಳು ಕೂಡ ಪ್ರಭಾವ ಬೀರಿರಬಹುದು ಎನ್ನುವ ಮೂಲಕ ತಾನು ಮುಸ್ಲಿಂ ಆಗಿರುವುದರಿಂದ ತನಗೆ ಅವಕಾಶಗಳು ಕಡಿಮೆ ಎಂಬ ಅರ್ಥದಲ್ಲಿ ರೆಹಮಾನ್​ ಹೇಳಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net