ಚಾರ್ಲಿ ಪುತ್ ಸಂಸಾರಕ್ಕೆ ಎಂಟ್ರಿ ಕೊಟ್ಟ 'ಲಿಟಲ್ ಚಾಂಪ್': ಜೂಡ್ ಹೆಸರಿನ ಗಂಡು ಮಗುವಿನೊಂದಿಗೆ ಮೊದಲ ಪೋಸ್ಟ್! Charlie Puth

Charlie Puth (ಚಿತ್ರ Instagram)
Charlie Puth (ಚಿತ್ರ Instagram)
Published on
ಲಾಸ್ ಏಂಜಲೀಸ್: ಅಮೇರಿಕನ್ ಗಾಯಕ ಚಾರ್ಲಿ ಪುತ್ (Charlie Puth) ಮತ್ತು ಪತ್ನಿ ಬ್ರೂಕ್ ಸಾನ್ಸೋನ್ ಬದುಕಿಗೆ ಪುಟ್ಟ ಅತಿಥಿಯ ಆಗಮನವಾಗಿದೆ, ಈ ದಂಪತಿಗೆ ಸುಂದರ ಗಂಡು ಮಗು ಜನಿಸಿದ್ದು, ಅದಕ್ಕೆ ಜೂಡ್ ಎಂದು ಹೆಸರಿಡಲಾಗಿದೆ. ಚಾರ್ಲಿ ಪುತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗುವಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ಸಂತಸದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಚಾರ್ಲಿ ತನ್ನ ಮುದ್ದಾದ ಗಂಡು ಮಗುವಿನ ಫೋಟೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಹೇ ಜೂಡ್ 3.13.26 ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ.
ಚಾರ್ಲಿ ಮತ್ತು ಬ್ರೂಕ್ 2024 ರಲ್ಲಿ ವಿವಾಹವಾದರು. ಕಳೆದ ಸೆಪ್ಟೆಂಬರ್‌ನಲ್ಲಿ ಚಾರ್ಲಿ ಮತ್ತು ಬ್ರೂಕ್ ಅವರ ಹಿಟ್ ಸಿಂಗಲ್ "ಚೇಂಜಸ್" ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದರು. ಅದೇ ದಿನ ಚಾರ್ಲಿ ಮತ್ತು ಬ್ರೂಕ್ಸ್​​ ನೃತ್ಯ ಮಾಡುತ್ತಾ, ಅವಳ ಹೊಟ್ಟೆಯ ಮೇಲೆ ಕೈ ಹಿಡಿದು ನಿಂತಿದ್ದರು. ಇದು ದಂಪತಿ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿದುಬಂದಿತ್ತು.
ಬಹಿರಂಗಪಡಿಸಿದ ಸ್ವಲ್ಪ ಸಮಯದ ನಂತರ ಸಂಗೀತಗಾರ ಅಕ್ಟೋಬರ್ 21 ರಂದು ದಿ ಟುನೈಟ್ ಶೋ ಸ್ಟಾರ್ರಿಂಗ್ ಜಿಮ್ಮಿ ಫಾಲನ್ ಕಾರ್ಯಕ್ರಮದಲ್ಲಿ ಮಗುವಿನ ಬಗ್ಗೆ ಕೆಲವೊಂದು ಮಾಹಿತಿಯನ್ನು ಹಂಚಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಚಾರ್ಲಿ , ಮಗುವಿಗೆ ಸಂಗೀತ ಇಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಅದರಲ್ಲಿ ಮಾತ್ರ ನಾನು ಒಳ್ಳೆಯವನಾಗಿದ್ದೇನೆ ಎಂದು ಲೇವಡಿ ಮಾಡಿದರು.

ಗಾಯಕ ಚಾರ್ಲಿ ಪುತ್​ ಯಾರು?

ಚಾರ್ಲಿ ಪುತ್ ಒಬ್ಬ ಅತ್ಯಂತ ಜನಪ್ರಿಯ ಅಮೇರಿಕನ್ ಗಾಯಕ, ಗೀತರಚನೆಕಾರ ಮತ್ತು ಸಂಗೀತ ನಿರ್ಮಾಪಕರಾಗಿದ್ದಾರೆ. ಅವರ ವಿಶಿಷ್ಟ ಧ್ವನಿ ಮತ್ತು ಸಂಗೀತದ ಜ್ಞಾನದಿಂದಾಗಿ ಅವರು ವಿಶ್ವದಾದ್ಯಂತ ಪ್ರಸಿದ್ಧರಾಗಿದ್ದಾರೆ. 2015ರಲ್ಲಿ ಬಿಡುಗಡೆಯಾದ 'ಫಾಸ್ಟ್ ಅಂಡ್ ಫ್ಯೂರಿಯಸ್ 7' ಚಿತ್ರದ "See You Again" ಹಾಡಿನ ಮೂಲಕ ಅವರು ಜಗತ್ಪ್ರಸಿದ್ಧರಾದರು. ಈ ಹಾಡನ್ನು ನಟ ಪಾಲ್ ವಾಕರ್ ಅವರ ನೆನಪಿಗಾಗಿ ಅರ್ಪಿಸಲಾಗಿತ್ತು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net