ತೆಲುಗಿನ 1: ನೆನೊಕ್ಕಡಿನೆ ಮತ್ತು ಬಾಲಿವುಡ್ನ ಹೀರೋಪಂತಿ ಮೂಲಕ ಕೆರಿಯರ್ ಶುರು ಮಾಡಿದ ಕೃತಿ, ತಮಗೆ ಆದ ಅವಮಾನವೊಂದನ್ನು ನೆನಪಿಸಿಕೊಂಡಿದ್ದಾರೆ. ಆರಂಭದ ದಿನಗಳಲ್ಲಿ ತಮ್ಮಷ್ಟೇ ಸಮಾನ ಸ್ಥಾನದಲ್ಲಿದ್ದ ಪುರುಷ ನಟನಿಗೆ ತಮಗಿಂತ ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಇಲ್ಲಿ ವಿಷಯ ಕಾರು ಅಥವಾ ಹೋಟೆಲ್ ರೂಮಿನ ಬಗ್ಗೆ ಅಲ್ಲ, ಬದಲಿಗೆ ನಮಗೆ ಸಿಗಬೇಕಾದ ಗೌರವದ ಬಗ್ಗೆ. ಆರಂಭದಲ್ಲಿ ಧ್ವನಿ ಎತ್ತುವುದು ಕಷ್ಟವಿತ್ತು, ಆದರೆ ಈಗ ನಾನು ನನ್ನ ಹಕ್ಕಿಗಾಗಿ ಮಾತನಾಡುತ್ತಿದ್ದೇನೆ ಎಂದಿದ್ದಾರೆ.