ರಾಜ್​ಪಾಲ್​ ಬೆಂಬಕ್ಕೆ ನಿಂತ ಬಾಲಿವುಡ್: ಸಲ್ಮಾನ್​, ಅಜಯ್​ ದೇವಗನ್​ ಸೇರಿ ಹಲವರಿಂದ ಧನ ಸಹಾಯ | Rajpal Yadav

 ಹಾಸ್ಯನಟ ರಾಜ್‌ಪಾಲ್ ಯಾದವ್, , ಸಲ್ಮಾನ್ ಖಾನ್, ಅಜಯ್ ದೇವಗನ್,
ಹಾಸ್ಯನಟ ರಾಜ್‌ಪಾಲ್ ಯಾದವ್, , ಸಲ್ಮಾನ್ ಖಾನ್, ಅಜಯ್ ದೇವಗನ್,
Published on

ಪ್ರಮುಖ ಮುಖ್ಯಾಂಶಗಳು

  • ಆರ್ಥಿಕ ಸಂಕಷ್ಟದಲ್ಲಿರುವ ಖ್ಯಾತ ಹ್ಯಾಸನಟ ರಾಜ್​ಪಾಲ್​ ಯಾದವ್​
  • ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ರಾಜ್​ಪಾಲ್​ ಯಾದವ್​
  • ರಾಜ್​ಪಾಲ್​ ಯಾದವ್​ ಬೆಂಬಲಕ್ಕೆ ನಿಂತ ಬಾಲಿವುಡ್​
ಮುಂಬೈ: ಬಾಲಿವುಡ್​ನ ಖ್ಯಾತ ಹಾಸ್ಯನಟ ರಾಜ್‌ಪಾಲ್ ಯಾದವ್ (Rajpal Yadav) ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಸಿದಂತೆ ತಿಹಾರ್ ಜೈಲಿಗೆ ಸೇರಿರುವ ಘಟನೆ ಈಗ ದೇಶದಾದ್ಯಂತ ಸಂಚಲನವನ್ನು ಸೃಷ್ಟಿಸಿದ ಹಿನ್ನಲೆ ಬಾಲಿವುಡ್​ನ ಖ್ಯಾತನಾಮರು ಈಗ ರಾಜ್​ಪಾಲ್​ ಅವರ ಸಹಾಯಕ್ಕೆ ಧಾವಿಸಿದ್ದಾರೆ.
2010 ರಲ್ಲಿ ಬಿಡುಗಡೆಯಾಗಿದ್ದ ಅತಾ, ಪತಾ, ಲಾಪತಾ ಎಂಬ ಸಿನಿಮಾ ಯಶಸ್ಸನ್ನು ಕಾಣದ ಹಿನ್ನಲೆ ಸುಮಾರು 9 ಕೋಟಿ ರೂಪಾಯಿಗಳನ್ನು ರಾಜ್​ಪಾಲ್​ ಪಾವತಿಸಬೇಕಿತ್ತು. ಈ ಹಣವನ್ನು ಸರಿಯಾದ ಸಮಯಕ್ಕೆ ನೀಡದ ಹಿನ್ನಲೆ ಈಗ ಅವರು ಜೈಲು ಪಾಲಾಗಿದ್ದಾರೆ. ತಮ್ಮ ಜೊತೆಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ನಟ ಈಗ ಕಷ್ಟದಲ್ಲಿರುವಾಗ ಸಹಾಯ ಮಾಡಲು ಹಲವಾರು ಬಾಲಿವುಡ್​ ತಾರಾಗಳು ಮುಂದಾಗಿರುವುದು ವರದಿಯಾಗಿದೆ.
ವರದಿಗಳ ಪ್ರಕಾರ, ಸೋನು ಸೂದ್, ಗುರ್ಮೀತ್ ಚೌಧರಿ ಮತ್ತು ಅನೀಸ್ ಬಾಜ್ಮಿ ಈ ಮೊದಲು ರಾಜ್​ಪಾಲ್​ ಅವರಿಗೆ ಬೆಂಬಲ ಸೂಚಿಸಿದ್ದರು. ಈಗ ನೂತನವಾಗಿ, ಸಲ್ಮಾನ್ ಖಾನ್, ಅಜಯ್ ದೇವಗನ್, ವರುಣ್ ಧವನ್ ಮತ್ತು ಇತರ ನಟರು ಸಹ ಯಾದವ್‌ಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್‌ಪಾಲ್ ಯಾದವ್‌ಗೆ ಸಲ್ಮಾನ್, ಅಜಯ್ ಬೆಂಬಲ

ಖಾಸಗಿ ಮಾಧ್ಯಮವೊಂದರಲ್ಲಿ ಮಾತಾಡಿದ ರಾಜ್​ಪಾಲ್​ ಅವರ ಮ್ಯಾನೇಜರ್​ ಗೋಲ್ಡಿ, ಆರ್ಥಿಕ ಸಂಕಷ್ಟದಲ್ಲಿರುವ ರಾಜ್​ಪಾಲ್​ ಅವರಿಗೆ ಸಹಾಯ ಮಾಡಲು ಸೋನು ಸೂದ್, ಸಲ್ಮಾನ್ ಖಾನ್ ಮತ್ತು ಅಜಯ್ ದೇವಗನ್ ಅವರಂತಹ ನಟರು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಡೇವಿಡ್ ಧವನ್ ಮತ್ತು ಅವರ ಪುತ್ರ ವರುಣ್​ ಧವನ್​ ಸಹ ರಾಜ್​ಪಾಲ್​ಗೆ ಸಹಾಯ ಮಾಡುವುದಾಗಿ ನನಗೆ ತಿಳಿಸಿದ್ದಾರೆ ಎಂದು ಗೋಲ್ಡಿ ಹೇಳಿದ್ದಾರೆ.
ಇವರೊಟ್ಟಿಗೆ ಸಿನಿಮಾ ವಿಮರ್ಶಕ ಕಮಲ್​ ಖಾನ್ 10 ಲಕ್ಷ ನೀಡುವುದಾಗಿ ಹೇಳಿದ್ದು, ರಾಜಕಾರಣಿ ಲಾಲು ಯಾದವ್​ ಪುತ್ರ ತೇಜ್​ ಪ್ರತಾಪ್​ ಯಾದವ್​ ಕೂಡ 11 ಲಕ್ಷ ಹಣವನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಾಮೀನಿಗಾಗಿ ರಾಜ್​ಪಾಲ್​ ಪ್ರಯತ್ನ

ಗುರುವಾರ (ಫೆ.12) ದಂದು ರಾಜ್​ಪಾಲ್​ ಅವರ ಜಾಮೀನು ಅರ್ಜಿಯ ನ್ಯಾಯಾಲಯ ವಿಚಾರಣೆ ನಡೆಸಲಿದ್ದು, ರಾಜ್​ಪಾಲ್​ ಅವರಿಗೆ ಜಾಮೀನು ದೊರೆಯುವ ಸಾಧ್ಯತೆ ಹೆಚ್ಚಿದೆ ಎಂದು ಮ್ಯಾನೇಜರ್​ ಗೋಲ್ಡಿ ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net