ಬಾಲಿವುಡ್​ ಲೋಕಕ್ಕೆ 2025 ಬರಸಿಡಿಲು; ನೆಚ್ಚಿನ ತಾರೆಯರ ಅಗಲಿಕೆಗೆ ಕಂಬನಿ ಮಿಡಿದ ಅಭಿಮಾನಿ ಲೋಕ! Bollywood

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Bollywood: 2025 ಭಾರತೀಯ ಚಿತ್ರರಂಗಕ್ಕೆ ಅಪಾರ ನಷ್ಟ ತಂದಂತ ವರ್ಷವಾಗಿದೆ. ಈ ಸಮಯದಲ್ಲಿ ಚಿತ್ರರಂಗದಲ್ಲಿ ಅಳಿಸಲಾಗದ ಹಾಗೂ ತಮ್ಮ ಹೆಸರನ್ನು ಛಾಪು ಮೂಡಿಸಿದ ಹಲವಾರು ಪ್ರೀತಿಯ ಬಾಲಿವುಡ್​ ಸೆಲೆಬ್ರಿಟಿಗಳ ನಿಧನಕ್ಕೆ ದೇಶವೇ ಶೋಕವಾಗಿದೆ. ಈ ವ್ಯಕ್ತಿಗಳು ತಮ್ಮ ಕೆಲಸದ ಮೂಲಕ ತಮ್ಮ ಕ್ಷೇತ್ರಗಳನ್ನು ರೂಪಿಸಿಕೊಂಡಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರನ್ನು ಕಳೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಈ ವರ್ಷ ನಾವು ಕಳೆದುಕೊಂಡ ಪ್ರೀತಿಯ ಕಲಾವಿದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ..

1. ಧರ್ಮೇಂದ್ರ

ಹಿರಿಯ ಬಾಲಿವುಡ್ ನಟ ಧರ್ಮೇಂದ್ರ ನವೆಂಬರ್ 24 ರಂದು ತಮ್ಮ 89 ನೇ ವಯಸ್ಸಿನಲ್ಲಿ ನಿಧನರಾದರು. ಇವರು ವಯೋಸಹಜ ಕಾಯಿಲೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಂಡರು. ನಂತರ ತಮ್ಮ ಮನೆಯಲ್ಲಿ ಕೊನೆಯ ದಿನಗಳನ್ನು ಕಳೆದು ನಿಧನರಾದರು.

2. ಮನೋಜ್ ಕುಮಾರ್

ಬಾಲಿವುಡ್​ನ ಹಿರಿಯ ನಟ ಮತ್ತು ಚಲನಚಿತ್ರ ನಿರ್ಮಾಪಕ ಮನೋಜ್ ಕುಮಾರ್ ದೀರ್ಘಕಾಲದ ಅನಾರೋಗ್ಯದ ನಂತರ ಹಲವಾರು ದಿನಗಳ ಕಾಲ ಹಾಸಿಗೆ ಹಿಡಿದಿದ್ದರು. ಇದಾದ ನಂತರ ಏಪ್ರಿಲ್ 4 ರಂದು ತಮ್ಮ 87 ನೇ ವಯಸ್ಸಿನಲ್ಲಿ ನಿಧನರಾದರು.

3. ಗೋವರ್ಧನ್ ಆಸ್ರಾಣಿ

ಗೋವರ್ಧನ್ ಅಸ್ರಾನಿ ಐದು ದಶಕಗಳಿಂದ ಬಾಲಿವುಡ್​ನಲ್ಲಿ ಹೆಸರನ್ನು ಪಡೆದವರಾಗಿದ್ದಾರೆ. ಇವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದಾಗ್ಯೂ, ಶ್ವಾಸಕೋಶದಲ್ಲಿ ದ್ರವ ಶೇಖರಣೆಗೆ ಸಂಬಂಧಿಸಿದ ದೀರ್ಘಕಾಲದ ಅನಾರೋಗ್ಯದಿಂದ ಅಕ್ಟೋಬರ್ 20 ರಂದು ನಿಧನರಾದರು.

4. ಸತೀಶ್ ಶಾ

ಸತೀಶ್​ ಶಾ ಅವರು ಯಾವುದೇ ಕಾಯಿಲೆಗಳಿಂದ ಬಳಲದೇ ಹಠಾತ್​ ನಿಧನರಾಗಿದ್ದು, ಇದು ಇಡೀ ರಾಷ್ಟ್ರವನ್ನೇ ತಲ್ಲಣಗೊಳಿಸಿತು. ಇವರು ತಮ್ಮ 74 ನೇ ವಯಸ್ಸಿನಲ್ಲಿ ಅಕ್ಟೋಬರ್ 25 ರಂದು ಮೃತಪಟ್ಟರು.

5. ಪಂಕಜ್ ಧೀರ್

ಟಿವಿ ಸರಣಿ ಮಹಾಭಾರತದಲ್ಲಿ ಕರ್ಣನ ಪಾತ್ರಕ್ಕೆ ಹೆಸರುವಾಸಿಯಾದ ಪಂಕಜ್ ಧೀರ್ , ಕ್ಯಾನ್ಸರ್​ ಕಾಯಿಲೆಯ ಜೊತೆ ಕೆಲವು ದಿನಗಳ ಹೋರಾಟ ನಡೆಸಿದ ನಂತರ ಅಕ್ಟೋಬರ್ 15 ರಂದು ನಿಧನರಾದರು. ಅವರು ಈ ಕಾಯಿಲೆಯಿಂದ ಚೇತರಿಸಿಕೊಂಡು ಕೆಲಸಕ್ಕೆ ಮರಳಿದರೂ ಕೂಡಾ, ಅವರ ಸಾವಿನ ಮುಂಚಿನ ತಿಂಗಳುಗಳಲ್ಲಿ ಅನಾರೋಗ್ಯವು ಮರುಕಳಿಸಿತು.

6.ಸುಲಕ್ಷಣ ಪಂಡಿತ್

ಹಿರಿಯ ಗಾಯಕಿ ಮತ್ತು ನಟಿ ಸುಲಕ್ಷಣ ಪಂಡಿತ್ ತಮ್ಮ 71 ನೇ ವಯಸ್ಸಿನಲ್ಲಿ ನವೆಂಬರ್ 6 ರಂದು ಮೃತಪಟ್ಟರು. ಇವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಸಾಗಿಸುವಾಗ ಹೃದಯಾಘಾತದಿಂದ ನಿಧನರಾದರು. ಈ ಸಮಯದಲ್ಲಿ ಅವರಿಗೆ ಉಸಿರಾಟದ ತೊಂದರೆ ಸಹ ಇತ್ತು ಎಂದು ವರದಿಯಾಗಿದೆ.

7. ಜುಬೀನ್ ಗಾರ್ಗ್

ಅಸ್ಸಾಮಿ ಗಾಯಕ ಮತ್ತು ಸಾಂಸ್ಕೃತಿಕ ಐಕಾನ್ ಜುಬೀನ್ ಗಾರ್ಗ್ ಅವರ ಸಾವು ಇಡೀ ದೇಶವನ್ನೇ ಆಘಾತವುಂಟು ಮಾಡಿತು. ಇವರು ಈಶಾನ್ಯ ಭಾರತ ಉತ್ಸವಕ್ಕಾಗಿ ಸಿಂಗಾಪುರದಲ್ಲಿದ್ದರು, ಸೇಂಟ್ ಜಾನ್ಸ್ ದ್ವೀಪದ ಬಳಿ ಈಜುತ್ತಿದ್ದಾಗ ಕುಸಿದು ಬಿದ್ದು, ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

8. ಶೆಫಾಲಿ ಜರಿವಾಲಾ

ಕಾಂತಾ ಲಗಾ ಮ್ಯೂಸಿಕ್ ವಿಡಿಯೋ ಮೂಲಕ ಖ್ಯಾತಿ ಪಡೆದ ಶೆಫಾಲಿ ಜರಿವಾಲಾ ತಮ್ಮ 42 ನೇ ವಯಸ್ಸಿನಲ್ಲಿ ಜೂನ್ 27 ರಂದು ನಿಧನರಾದರು. ಇವರ ಸಾವು ಹೃದಯ ಘಾತ ಎಂದು ವರದಿಗಳು ಬಂದವು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net