ಚಿತ್ರರಂಗ ತೊರೆದರಾ ಎನ್ನುವವರಿಗೆ ಉತ್ತರ ಕೊಟ್ಟ ಬಾಲಿವುಡ್ ನಟಿ ಕಂಗನಾ ರಣಾವತ್

ಕಂಗನಾ ರಣಾವತ್​
ಕಂಗನಾ ರಣಾವತ್​
Published on

ಪ್ರಮುಖ ಮುಖ್ಯಾಂಶಗಳು

  • ಎಮರ್ಜೆನ್ಸಿ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳದ ಕಂಗನಾ
  • ಚಿತ್ರರಂಗ ತೊರೆದು, ರಾಜಕಾರಣದಲ್ಲಿ ಸಕ್ರಿಯರಾದರಾ ನಟಿ
  • ಭಾರತ್ ಭಾಗ್ಯವಿಧಾತ ಚಿತ್ರದ ಮೂಲಕ ತೆರೆ ಮೇಲೆ ಬರಲು ಸಜ್ಜಾದ ಕಂಗನಾ
ಸಂಸದೆ, ಬಾಲಿವುಡ್ ನಟಿ ಕಂಗನಾ ರಣಾವತ್ ‘ಎಮರ್ಜೆನ್ಸಿ’ ಬಳಿಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಕಳೆದ ವರ್ಷ ಜ.17ಕ್ಕೆ ರಿಲೀಸ್ ಆಗಿದ್ದ ‘ಎಮರ್ಜೆನ್ಸಿ’ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗಿತ್ತು. ಬಿಡುಗಡೆ ಬಳಿಕವೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿ, ಬಾಕ್ಸಾಫೀಸ್‌ನಲ್ಲಿ ವಿಲವಾಗಿತ್ತು. ಈ ಚಿತ್ರದ ಬಳಿಕ ಕಂಗನಾ ಏನು ಮಾಡುತ್ತಿದ್ದಾರೆ? ‘ಎಮರ್ಜೆನ್ಸಿ’ ಸೋಲಿನ ಬಳಿಕ ಚಿತ್ರರಂಗ ತೊರೆದರಾ? ಅಥವಾ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆಯಾಗಿರುವುದರಿಂದ ರಾಜಕಾರಣದತ್ತ ಹೆಚ್ಚು ಗಮನ ಹರಿಸಿದರಾ? ಎಂಬ ಪ್ರಶ್ನೆಗಳು ಅಭಿಮಾನಿಗಳ ವಲಯದಲ್ಲಿದ್ದವು. ಇದೀಗ ಅದಕ್ಕೆ ಕಂಗನಾ ಉತ್ತರ ಕೊಡಲು ಸಿದ್ಧರಾಗಿದ್ದು, ಸದ್ದಿಲ್ಲದೇ ‘ಭಾರತ ಭಾಗ್ಯ ವಿಧಾತ’ ಎಂಬ ಚಿತ್ರದ ಶೂಟಿಂಗ್ ಮುಗಿಸಿ, ನಾನಿನ್ನೂ ಅಂಕಣದಲ್ಲಿದ್ದೇನೆ ಎಂದಿದ್ದಾರೆ. ‘ಭಾರತ ಭಾಗ್ಯ ವಿಧಾತ’ 2008ರಲ್ಲಿ ಮುಂಬೈ ದಾಳಿ ಹಿನ್ನೆಲೆಯ ನೈಜ ಕಥಾ ಹಂದರ ಹೊಂದಿದ್ದು, ಇಲ್ಲಿ ಕಂಗನಾ ರಣಾವತ್ ನರ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2008ರ ನ.26ರಂದು ಮುಂಬೈನಲ್ಲಿ ದಾಳಿ ಮಾಡಿದ್ದ ಪಾಕ್ ಪ್ರೇರಿತ ಉಗ್ರಗಾಮಿಗಳು ಬಳಿಕ ಆಸ್ಪತ್ರೆ ಹೊಕ್ಕು ಆತಂಕ ಹುಟ್ಟಿಸಿದ್ದರು. ಅದರ ಎಳೆಯನ್ನು ಇಟ್ಟುಕೊಂಡು ‘ಭಾರತ್ ಭಾಗ್ಯ ವಿಧಾತ’ ಮೂಡಿಬರುತ್ತಿದೆ. ‘ಮದ್ರಾಸ್ ಕೆೆ’ ಸೇರಿ ಹಲವು ಚಿತ್ರಗಳಿಗೆ ಸಾಹಿತ್ಯ ರಚಿಸಿರುವ ಮನೋಜ್ ತಪಾಡಿಯಾ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕಂಗನಾ ರಣಾವತ್ ಜತೆ ಮರಾಠಿ ನಟಿ ಗಿರಿಜಾ ಓಕ್ ಕೂಡ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ -ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಇದೇ ವರ್ಷ ‘ಭಾರತ ಭಾಗ್ಯವಿಧಾತ’ ರಿಲೀಸ್ ಆಗಲಿದೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net