ನಟಿಯನ್ನಲ್ಲ, ವ್ಯವಸ್ಥೆಯನ್ನು ಬಯ್ಯಿರಿ! ಪೆದ್ದಿಯಲ್ಲಿ ಜಾನ್ವಿ ಅಂಗ ಪ್ರದರ್ಶನ; ನಟಿ ಬೆನ್ನಿಗೆ ನಿಂತ ಕನ್ನಡತಿ ಆಶಿಕಾ ರಂಗನಾಥ್​! Ashika Ranganath Backs Janhvi Kapoor

ಜಾನ್ವಿ ಪರ ನಿಂತ ಕನ್ನಡತಿ ಆಶಿಕಾ ರಂಗನಾಥ್​
ಜಾನ್ವಿ ಪರ ನಿಂತ ಕನ್ನಡತಿ ಆಶಿಕಾ ರಂಗನಾಥ್​
Published on

ಪ್ರಮುಖ ಮುಖ್ಯಾಂಶಗಳು

  • ಪೆದ್ದಿ ಸಿನಿಮಾದಲ್ಲಿ ನಟಿ ಜಾನ್ವಿ ಕಪೂರ್​ ಅಂಗ ಪ್ರದರ್ಶನ
  • ನೀವು ಬಯ್ಯುದ್ದಿದ್ದರೆ ನಟಿಯಲನ್ನಲ್ಲ, ವ್ಯವಸ್ಥೆಗೆ ಬಯ್ಯಿರಿ
  • ಜಾನ್ವಿ ಪರ ನಿಂತ ಕನ್ನಡತಿ ಆಶಿಕಾ ರಂಗನಾಥ್​
ಮುಂಬೈ: ಇತ್ತೀಚೆಗೆ ಬುಚ್ಚಿ ಬಾಬು ನಿರ್ದೇಶನದ ಹಾಗೂ ರಾಮ್​ ಚರಣ್​ ಮತ್ತು ಜಾನ್ವಿ ಕಪೂರ್​ ನಟನೆಯ ಬಹು ನಿರೀಕ್ಷಿತ ಪೆದ್ದಿ ಸಿನಿಮಾ ವಿವಾದಕ್ಕೆ ಗುರಿಯಾಗಿದೆ. ಸಿನಿಮಾದಲ್ಲಿ ನಾಯಕ ನಟಿ ಜಾನ್ವಿ ಕಪೂರ್​ನನ್ನು ಕೇವಲ ದೈಹಿಕ, ಲೈಗಿಂಕ ಪ್ರದರ್ಶನಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಸಿನಿಮಾ ವಿಮರ್ಶಕರು ಆಕ್ರೋಶ ಹೊರ ಹಾಕಿದ್ದಾರೆ.
ಈಗ ಈ ವಿವಾದಕ್ಕೆ ಧ್ವನಿಗುಡಿಸಿರುವ ಕನ್ನಡದ ನಟಿ ಆಶಿಕಾ ರಂಗನಾಥ್ (Ashika Ranganath Backs Janhvi Kapoor)​, ನಟಿ ಜಾನ್ವಿ ಪರ ನಿಂತಿದ್ದು, ನಿಮಗೆ ಸಿನಿಮಾ ಬಗ್ಗೆ ತಕರಾರಿದ್ದರೆ, ಹೋಗಿ ನಿರ್ದೇಶಕರಲ್ಲಿ ಕೇಳಿ. ಅದನ್ನು ಬಿಟ್ಟು ನಟಿಯ ವಿರುದ್ಧ ಕೂಗಾಡಬೇಡಿ ಎಂದಿದ್ದಾರೆ.

ನಟಿಗಲ್ಲ, ವ್ಯವಸ್ಥೆಗೆ ಬಯ್ಯಿರಿ!

ನೀವು ನಟಿಯರನ್ನು ಬಯ್ಯಬೇಡಿ, ಈ ರೀತಿ ಮಾಡಿದರೆ ಮಾತ್ರ ಸಿನಿಮಾ ಮಾರಾಟವಾಗುತ್ತೆ ಎಂದು ಭಾವಿಸುವ ನಿರ್ಮಾಪಕರನ್ನು ಮತ್ತು ವ್ಯವಸ್ಥೆ ಮೇಲೆ ಆಕ್ರೋಶ ಹೊರಹಾಕಿ. ನಟರು ತಮಗೆ ದೊರೆಯುವ ಪಾತ್ರವನ್ನು, ಅವಕಾಶವನ್ನು ಬಳಸಿಕೊಳ್ಳುತ್ತಾರೆ, ದೊಡ್ಡ ಸಿನಿಮಾದ ಭಾಗವಾಗಿ ವಿಶಾಲ ಪ್ರೇಕ್ಷಕರನ್ನು ತಲುಪುವುದು ಎಲ್ಲಾ ನಟ/ನಟಿಯರ ಆಸೆಯಾಗಿರುತ್ತದೆ.
ಸಿನಿಮಾದಲ್ಲಿ ಮಹಿಳೆಯ ಪಾತ್ರ ಕೆಳ ಮಟ್ಟದಲ್ಲಿ ಮೂಡಿಬಂದಿದೆ ಎಂದರೆ, ಅಲ್ಲಿ ನಟಿಯ ತಪ್ಪಿರುವುದಿಲ್ಲ, ಬದಲಾಗಿ ಸ್ಕ್ರಿಪ್ಟ್​ ಬರವಣಿಗೆ, ನಿರ್ದೇಶದನ ವೈಫಲ್ಯ ಎಂದು ಹೇಳಬೇಕಾಗುತ್ತದೆ ಎಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಆಶಿಕಾ ರಂಗನಾಥ್​ ಬರೆದುಕೊಂಡಿದ್ದಾರೆ.

ನಿರ್ದೇಶಕನಿಂದ ಸ್ಪಷ್ಟನೆ

ಸಿನಿಮಾ ಬಗ್ಗೆ ಟೀಕಾ ಪ್ರಹಾರ ತೀವ್ರಗೊಳ್ಳುತ್ತಿದ್ದಂತರ ಎಚ್ಚೆತ್ತ ನಿರ್ದೇಶಕ ಬುಚ್ಚಿ ಬಾಬು ಸನಾ, ನಾನೊಬ್ಬ ಸಿನಿಮಾ ನಿರ್ದೇಶಕನಾಗಿ, ಪ್ರೇಕ್ಷಕರನ್ನು ರಂಜಿಸಬೇಕು, ಪ್ರೇರೇಪಿಸಬೇಕು ಎನ್ನುವುದು ನನ್ನ ಉದ್ದೇಶ. ಇದನ್ನೇ ನಾನು ನಂಬುವುದು. ಆದರೆ, ನನ್ನ ಸಿನಿಮಾದಿಂದ ಅಗೌರವಿಸುವುದು, ಮುಜುಗರಕ್ಕೀಡಾಗುವಂತೆ ನಡೆದುಕೊಳ್ಳುವುದು ನನ್ನ ಉದ್ದೇವಾಗಿರಲಿಲ್ಲ. ಪೆದ್ದಿ ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ಕೇಳಿ ಬಂದಿರುವ ಟೀಕೆ ಹಾಗೂ ಪ್ರತಿಕ್ರಿಯೆಯನ್ನು ನಾವು ಪರಿಗಣಿಸಿದ್ದೇವೆ. ಅದರಲ್ಲಿ ಬದಲಾವಣೆ ತರುವ ಕೆಲಸವನ್ನು ಮಾಡುತ್ತೇವೆ ಎಂದು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.
ತೆರೆಯ ಮೇಲೆಯೂ ಮತ್ತು ನಿಜ ಜೀವನದಲ್ಲೂ ನಾನು ಯಾವಾಗಲೂ ಮಹಿಳೆಯರಿಗೆ ಅಪಾರ ಗೌರವವನ್ನು ನೀಡುತ್ತಾ ಬಂದಿದ್ದೇನೆ. ಯಾವುದೇ ಮಹಿಳಾ ಪಾತ್ರವನ್ನು ವಸ್ತುಪ್ರದರ್ಶನದಂತೆ ತೋರಿಸುವ ಅಥವಾ ಗೌರವ ರಹಿತವಾಗಿ ಬಿಂಬಿಸುವ ಯಾವುದೇ ಉದ್ದೇಶ ನಮಗೆ ಇರಲಿಲ್ಲ. ಒಂದು ವೇಳೆ ಚಿತ್ರದ ಯಾವುದೇ ಭಾಗವು ಆ ರೀತಿ ಬಿಂಬಿತವಾಗಿದೆ ಎಂದು ಜನರಿಗೆ ಅನಿಸಿದ್ದರೆ, ನಾವು ಆ ಭಾವನೆಗಳನ್ನು ಗೌರವಿಸುತ್ತೇವೆ. ಸಾರ್ವಜನಿಕರು ಎತ್ತಿರುವ ಕಳಕಳಿಯನ್ನು ನಾವು ಅರ್ಥಮಾಡಿಕೊಂಡಿದ್ದು, ಇದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇವೆ ಎಂದಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net