ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಪತಿ ಕೆ ಎಲ್ ರಾಹುಲ್ ಹುಟ್ಟು ಹಬ್ಬದ ಸಂದರ್ಭದಲ್ಲಿ ವಿಶೇಷ ಪೋಸ್ಟ್
ಕೆ.ಎಲ್. ರಾಹುಲ್ ಅವರ 34ನೇ ಜನ್ಮದಿನವನ್ನು ಅತ್ಯಂತ ವಿಶೇಷವಾಗಿ ಆಚರಿಸಿದ್ದಾರೆ
ಮದುವೆಯಿಂದ ಪ್ರಾರಂಭವಾಗಿ ಪೋಷಕರಾಗುವವರೆಗಿನ ತಮ್ಮ ಪ್ರಯಾಣದ ಚಿತ್ರಗಳು ವೈರಲ್
Athiya Shetty: ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಶನಿವಾರ (ಏಪ್ರಿಲ್ 18) ತಮ್ಮ ಪತಿ, ಆಟಗಾರ ಕೆ.ಎಲ್. ರಾಹುಲ್ಅವರ 34ನೇ ಜನ್ಮದಿನವನ್ನು ಅತ್ಯಂತ ವಿಶೇಷವಾಗಿ ಆಚರಿಸಿದ್ದಾರೆ. ಈ ಸಂಭ್ರಮದ ಅಂಗವಾಗಿ ಅಥಿಯಾ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಪೋಸ್ಟ್ನಲ್ಲೇನಿದೆ?
ಮದುವೆಯಿಂದ ಪ್ರಾರಂಭವಾಗಿ ಪೋಷಕರಾಗುವವರೆಗಿನ ತಮ್ಮ ಪ್ರಯಾಣದ ಕೆಲವು ಚಿತ್ರಗಳು ಮತ್ತು ಒಟ್ಟಿಗೆ ಹಚ್ಚೆಗಳನ್ನು ಹಾಕಿಸಿಕೊಂಡಿರುವ ಸ್ಮರಣೀಯ ಕ್ಷಣಗಳ ಜೊತೆಗೆ ಹುಟ್ಟು ಹಬ್ಬದ ಶುಭಾಶಯಗಳು ನನ್ನ ವ್ಯಕ್ತಿ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಅತಿಯಾ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
ಜನವರಿ 2019 ರಲ್ಲಿ ರಾಹುಲ್ ಮತ್ತು ಅತಿಯಾ ಮೊದಲ ಬಾರಿಗೆ ಪರಸ್ಪರ ಭೇಟಿಯಾದರು. ಸ್ನೇಹ ಕೆಲವೇ ವರ್ಷಗಳಲ್ಲಿ ಪ್ರೀತಿಯಾಗಿ ಬದಲಾಯಿತು. ಹಲವಾರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಈ ಜೋಡಿ 2023 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ವಿವಾಹವು ಖಂಡಾಲಾದಲ್ಲಿರುವ ಅತಿಯಾ ಅವರ ತಂದೆ ಸುನೀಲ್ ಶೆಟ್ಟಿ ಅವರ ತೋಟದ ಮನೆಯಲ್ಲಿ ನಡೆಯಿತು.
ಕಳೆದ ವರ್ಷ ದಂಪತಿ ತಮ್ಮ ಮೊದಲ ಮಗಳನ್ನು ಸ್ವಾಗತಿಸಿದರು. ಅವಳಿಗೆ ಇವಾರಾ ಎಂದು ನಾಮಕರಣ ಮಾಡಿದ್ದು, ಇದು ದೇವರ ಉಡುಗೊರೆ ಎಂಬ ಅರ್ಥವನ್ನು ಹೊಂದುತ್ತದೆ ಎಂದು ಹೇಳಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜಂಟಿ ಪೋಸ್ಟ್ನಲ್ಲಿ ಅತಿಯಾ ಮತ್ತು ರಾಹುಲ್ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ರಾಹುಲ್ ಮಗುವನ್ನು ಎತ್ತಿಕೊಂಡಿರುವ ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ.
ನಮ್ಮ ಹೆಣ್ಣು ಮಗು, ನಮ್ಮ ಸರ್ವಸ್ವ. ಇವಾರಾ ದೇವರ ಕೊಡುಗೆ
ಕೆ.ಎಲ್. ರಾಹುಲ್ ಅವರ ಜನ್ಮದಿನದ ವಿಶೇಷ ಸಂದರ್ಭದಲ್ಲಿ, ದಂಪತಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರ ಪುತ್ರಿಗೆ 'ಎವಾರಾ' (Evara) ಎಂದು ಹೆಸರಿಟ್ಟಿರುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ಹೊಸ ಅಧ್ಯಾಯ
2023ರಲ್ಲಿ ವಿವಾಹವಾದ ಈ ಜೋಡಿಗೆ ಈಗ ಪೋಷಕರಾಗಿ ಹೊಸ ಜವಾಬ್ದಾರಿ ಆರಂಭವಾಗಿದೆ. ಕೆ.ಎಲ್. ರಾಹುಲ್ ಅವರು ಮೈದಾನದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಸುದ್ದಿಯಲ್ಲಿದ್ದರೆ, ಅಥಿಯಾ ತಮ್ಮ ಫ್ಯಾಷನ್ ಮತ್ತು ಜೀವನಶೈಲಿಯ ಮೂಲಕ ಗಮನ ಸೆಳೆದಿದ್ದಾರೆ. ಆದಾಗ್ಯೂ, ಎವರಾ ಅವರ ಜೀವನದ ಹೊಸ ಬೆಳಕಾಗಿ ಬಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಅನೇಕ ನೆಟ್ಟಿಗರು "ಎವಾರಾ" ಹೆಸರು ಈಗ ಟ್ರೆಂಡ್ ಆಗುತ್ತಿದೆ. "ತುಂಬಾ ವಿಭಿನ್ನ ಮತ್ತು ಸುಂದರವಾದ ಹೆಸರು" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕ್ರಿಕೆಟ್ ತಂಡದ ಸಹ ಆಟಗಾರರು ಮತ್ತು ಸಿನಿಮಾ ತಾರೆಯರು ಈ ಪುಟ್ಟ ಕಂದಮ್ಮನಿಗೆ ಆಶೀರ್ವಾದಗಳನ್ನು ತಿಳಿಸಿದ್ದಾರೆ (ಏಜೆನ್ಸೀಸ್).