'ನಿಮ್ಮ ತಂಗಿಯಂತೆ ನನ್ನನ್ನು ಬಿಟ್ಬಿಡಿ ಎಂದ್ರೂ ಕೇಳಿಲ್ಲ'; 13ನೇ ವಯಸ್ಸಲ್ಲಿ ರೇಪ್​ನಿಂದ ಪಾರಾದ ಸತ್ಯ ಬಿಚ್ಚಿಟ್ಟ ಬಿಗ್​ಬಾಸ್ ಖ್ಯಾತಿಯ ನಟಿ..Arti Singh

 Arti Singh
Arti Singh
Published on

ಪ್ರಮುಖ ಮುಖ್ಯಾಂಶಗಳು

  • 13 ವರ್ಷದವರಿದ್ದಾಗ ಮನೆಯ ಕೆಲಸದವನಿಂದ ಲೈಂಗಿಕ ದೌರ್ಜನ್ಯದ ಯತ್ನ
  • ದೌರ್ಜನ್ಯದಿಂದ ಪಾರಾಗಲು ಪ್ರಾಣದ ಹಂಗು ತೊರೆದು ಮಹಡಿಯಿಂದ ಜಿಗಿದಿದ್ದ ಆರ್ತಿ ಸಿಂಗ್
  • ಲೈಂಗಿಕ ದೌರ್ಜನ್ಯದಿಂದ ಪಾರಾದ ನಂತರ ಪ್ಯಾನಿಕ್ ಅಟ್ಯಾಕ್ ಸಮಸ್ಯೆಗೆ ಗುರಿಯಾಗಿದ್ದೆ ಎಂದ ನಟಿ
Arti Singh childhood incidentಎಲ್ಲ ಸೆಲಬ್ರೆಟಿಗಳ ಬದುಕು ಸುಖದ ಸುಪ್ಪತ್ತಿಗೇಲಿ ಇರೋದಿಲ್ಲ. ಹಲವರು ತಮ್ಮದೇ ಆದ ನೋವುಗಳನ್ನು ಜೀವನದಲ್ಲಿ ಕಂಡಿರುತ್ತಾರೆ ಅನ್ನೋದಕ್ಕೆ 'ಬಿಗ್ ಬಾಸ್ 13' ಖ್ಯಾತಿಯ ಖ್ಯಾತ ಕಿರುತೆರೆ ನಟಿ ಆರತಿ ಸಿಂಗ್ ಅವರ ಜೀವನದಲ್ಲಿ ನಡೆದ ಘಟನೆಯೇ ಒಂದು ಉದಾಹರಣೆ.
ಇತ್ತೀಚೆಗೆ ಪಾಡ್​ಕಾಸ್ಟ್​ವೊಂದಕ್ಕೆ ಕಿರುತೆರೆ ನಟಿ ಆರತಿ ಸಿಂಗ್( Arti Singh) ಕೊಟ್ಟ ಸಂದರ್ಶನದಲ್ಲಿ ಸಣ್ಣ ವಯಸ್ಸಿನಲ್ಲೇ ಅವರು ಅನುಭವಿಸಿದ ಕರಾಳ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

ಏನಾಗಿತ್ತು?

"ನನಗೆ ಆಗ ಕೇವಲ 13 ವರ್ಷ. ಆ ಒಂದು ದಿನ ನನ್ನ ಅಮ್ಮ ಫಾರ್ಮ್‌ಹೌಸ್‌ಗೆ ಹೋಗಿದ್ದರು. ಮನೆಯಲ್ಲಿ ನಾನೊಬ್ಬಳೇ ಇದ್ದೆ. ನನ್ನ ರೂಂನಲ್ಲಿ ರೆಸ್ಟ್​ ಮಾಡುತ್ತಿದ್ದೆ. ನಮ್ಮ ಮನೆಯಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿ. ನನ್ನ ಕೋಣೆಗೆ ನುಗ್ಗಿದ. ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಲು ಬಂದ. ನಾನು ಆತನನ್ನು ಅಣ್ಣ ಎಂದು ಕರೆದು ಕೈಮುಗಿದು ಬೇಡಿಕೊಂಡೆ, ಬಿಟ್ಟುಬಿಡುವಂತೆ ವಿನಂತಿಸಿದೆ ಆದರೆ ಆತ ಕೇಳಲಿಲ್ಲ"
"ಮನೆಯಿಂದ ಹೊರಬರುವ ದಾರಿಗಳೆಲ್ಲಾ ಲಾಕ್ ಆಗಿದ್ದವು. ಬೇರೆ ದಾರಿಯಿಲ್ಲದೆ, ಆತನಿಂದ ತಪ್ಪಿಸಿಕೊಳ್ಳಲು ತಕ್ಷಣವೇ ಎರಡನೇ ಮಹಡಿಯ ಗ್ಯಾಲರಿಯಿಂದ ಕೆಳಕ್ಕೆ ಜಿಗಿದೆ. ದೇವರ ದಯೆಯಿಂದ ಅಷ್ಟು ಎತ್ತರದಿಂದ ಬಿದ್ದರೂ ನನಗೆ ಏನೂ ಆಗಲಿಲ್ಲ. ನಾನು ಬಹಳ ಧೈರ್ಯವಂತೆಯಾಗಿದ್ದೆ" ಎಂದು ಹೇಳಿಕೊಂಡಿದ್ದಾರೆ.
ಈ ಘಟನೆಯ ನಂತರ 'ಪ್ಯಾನಿಕ್ ಅಟ್ಯಾಕ್' ಸಮಸ್ಯೆ ಎದುರಾಗಿತ್ತು. ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿದ್ದಾಗ ದೀಪಿಕಾ ಪಡುಕೋಣೆ ಮತ್ತು ಲಕ್ಷ್ಮಿ ಅಗರ್ವಾಲ್ ಬಂದಿದ್ದ ಸಮಯದಲ್ಲಿ ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದೆ. ಬಿಗ್​ಬಾಸ್ ವಿನ್​ ಆಗ್ಬೇಕು ಅಂತ ಅಥವಾ ನನ್ನ ಮೇಲೆ ಕರುಣೆ ಉಕ್ಕಿ ಬರಲಿ ಎಂದು ಅಂದು ಈ ವಿಚಾರ ಹೇಳಿಕೊಂಡಿರಲಿಲ್ಲ. ಇಂತಹ ಘಟನೆ ಜೀವನದಲ್ಲಿ ಎದುರಾದಾಗ ಧೈರ್ಯದಿಂದ ಇರಬೇಕು ಎಂದು ಅವರು ಹೇಳಿದರು, (ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net